ಸಂತ್ರಸ್ತರ ಮಕ್ಕಳಿಗೆ ಪುಸ್ತಕ, ಪೆನ್ನು ಕೊಡುಗೆ ನೀಡಿದ ಸ್ವಾತಂತ್ರ್ಯ ಹೋರಾಟಗಾರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
ಸಂತ್ರಸ್ತ‌ ಕುಟುಂಬದ ಮಕ್ಕಳಿಗೆ 10 ಸಾವಿರ ಮೌಲ್ಯದ ಪುಸ್ತಕ ಕೊಡುಗೆ ನೀಡಿದ ಸ್ವಾತಂತ್ರ್ಯ ಹೋರಾಟಗಾರ

ಪಡಂಗಡಿ : ಇಲ್ಲಿಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಭೋಜರಾಜ ಹೆಗ್ಡೆಯವರು    ಸಂತ್ರಸ್ತ ಕುಟುಂಬದವರ ಮಕ್ಕಳಿಗೆ  ಪೆನ್ನು ಮತ್ತು ಪುಸ್ತಕಗಳನ್ನು  ಕೊಡುಗೆ ನೀಡಿದರು.  ಮಾಜಿ ಶಾಸಕ ಕೆ. ವಸಂತ ಬಂಗೇರರ ಸಹಾಯದಿಂದ ಮಿನಿವಿಧಾನಸೌಧಕ್ಕೆ ಆಗಮಿಸಿದ ಇವರು ತಹಶೀಲ್ದಾರರ ಮೂಲಕ ಪ್ರವಾಹ ಪೀಡಿತರಿಗೆ ಸಹಾಯಧನ ನೀಡಿದರು .

ಇವರು  ಹಲವಾರು ತಿಂಗಳುಗಳಿಂದ ಅಸೌಖ್ಯದಿಂದ ಬಳಲುತ್ತಿದ್ದು, ಈ ನಡುವೆ ವಸಂತ ಬಂಗೇರರ ಜೊತೆಗೆ ಮಾತನಾಡಿನಾನು ನನ್ನಿಂದಾದ ಸಹಾಯ ಮಾಡಬೇಕೆಂದಿದ್ದು, ಬೆಳ್ತಂಗಡಿಗೆ ಬರಲು ಅಸಾಧ್ಯವಾಗಿದೆ” ಎಂದು ಹೇಳಿದ್ದು, ತಕ್ಷಣ ವಸಂತ ಬಂಗೇರರು ತನ್ನ ಕಾರನ್ನು ಬೋಜರಾಜ ಹೆಗ್ಡೆ ಅವರ ಮನೆಗೆ ಕಳುಹಿಸಿ ಅವರನ್ನು ತಹಶೀಲ್ದಾರ್ ಅವರ ಕಛೇರಿಗೆ ಕರೆತರುವ ವ್ಯವಸ್ಥೆ ಮಾಡಿದರು.  ಈ ಸಂದರ್ಭ ಅವರು ತಹಶೀಲ್ದಾರ್ ಅವರ ಮೂಲಕ ರೂ 10 ಸಾವಿರ ಮೌಲ್ಯದ  ಪುಸ್ತಕ, ಪೆನ್ನುಗಳನ್ನು ತಹಶಿಲ್ದಾರರಿಗೆ ಹಸ್ತಾಂತರಿಸಿದರು. ಹೆಗ್ಡೆಯವರ ಈ ಮಾನವೀಯತೆಯನ್ನು ವಸಂತ ಬಂಗೇರ, ತಹಶೀಲ್ದಾರ್ ಗಣಪತಿ ಶಾಸ್ತ್ರಿ ಅವರು ಶ್ಲಾಘಿಸಿದರು

 

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.