ಉಜಿರೆ: ಹಂಪನಾ ವ್ಯಕ್ತಿ, ಕೃತಿ: ಅನುಸಂಧಾನ ವಿಚಾರ ಸಂಕಿರಣ

ಉಜಿರೆ: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಬೆಳ್ತಂಗಡಿ ತಾಲೂಕು ಘಟಕ ಇದರ ಸಹಯೋಗದೊಂದಿಗೆ ಹಂಪನಾ ವ್ಯಕ್ತಿ, ಕೃತಿ: ಅನುಸಂಧಾನ ವಿಚಾರ ಸಂಕಿರಣ ಇಂದು( ಆ.16) ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಮ್ಯಗ್ದರ್ಶನ ಸಭಾಭವನದಲ್ಲಿ ಜರುಗಿತು.

ಈ ಸಂದರ್ಭದಲ್ಲಿ ನಾಡೋಜಾ ಕಮಲಾ ಹಂಪನಾ ವಿರಚಿತ ‘ಬೇರು-ಬೆಂಕಿ-ಬಿಳಲು‘ಕೃತಿ ಲೋಕಾರ್ಪಣೆಗೊಳಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ನೆರವೇರಿಸಿದರು. ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ನಾಡೋಜ ಚಂದ್ರಶೇಖರ ಕಂಬಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಹೇಮಾವತಿ ವಿ ಹೆಗ್ಗಡೆ, ಹಿರಿಯ ಸಾಹಿತಿಗಳಾದ ನಾಡೋಜಾ ಕಮಲಾ ಹಂಪನಾ ದಂಪತಿ, ಮಾಜಿ ಸಚಿವ ಅಭಯಚಂದ್ರ ಜೈನ್ ಗೌರವ ಉಪಸ್ಥಿತರಿದ್ದರು. ಹರ್ಷೇಂದ್ರ ಕುಮಾರ್, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ ಯಶೋವರ್ಮ, ಪ್ರಾಂಶುಪಾಲ ಪ್ರೊ| ಎಸ್. ಸತೀಶ್ಚಂದ್ರ, ಕನ್ನಡ ವಿಭಾಗದ ಮುಖ್ಯಸ್ಥ ಮತ್ತು ವಿಚಾರ ಸಂಕಿರಣದ ಸಂಯೋಜಕ ಡಾ| ಬಿ.ಪಿ ಸಂಪತ್ ಕುಮಾರ್, ಪ್ರೊ| ಎಸ್ ಪ್ರಭಾಕರ್ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.