ಲಾಯಿಲ: ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ

ಶ್ರೀ ಗುರುರಾಘವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವದ ಪ್ರಯುಕ್ತ ಆ.15 ರಂದು ಶ್ರೀ ದೇವರಿಗೆ ಸುದರ್ಶನ ಹೋಮ, ನವಗ್ರಹ ಹೋಮ, ವಾಯುಸ್ತುತಿ ಹೋಮಗಳು ನಡೆದು, ನೂತನವಾಗಿ ನಿರ್ಮಿಸಲಾದ ಗೋಪುರದ ಕಲಶಾಭಿಷೇಕ ಹಾಗೂ ಗೋಪುರ ಕಲಶ ಪ್ರತಿಷ್ಠೆ ವಿಜೃಂಭಣೆಯಿಂದ ಜರುಗಿತು.

ಬೆಳ್ತಂಗಡಿ: ಇಲ್ಲಿಯ ಲಾಯಿಲ ಶ್ರೀ ರಾಮಾಂಜನೇಯ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಆರಾಧನ  ಮಹೋತ್ಸವವು  ಆ 16 ರಿಂದ 18 ವರೆಗೆ ನಡೆಯಲಿದ್ದು, ಕಾರ್ಯಕ್ರಮವನ್ನು ಇಂದು (ಆ.16) ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ಉಪಾಧ್ಯಕ್ಷ ಕೆ ರಮಾನಂದ ಸಾಲಿಯನ್ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಅಬಕಾರಿ ನಿರೀಕ್ಷಕಿ ಸೌಮ್ಯಲತಾ,  ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ವಸಂತ ಶೆಟ್ಟಿ, ಚಿಕ್ಕಬಳ್ಳಾಪುರ ಶ್ರೀ ಚೆನ್ನರಾಯಸ್ವಾಮಿ ದೇವಸ್ಥಾನದ  ಧರ್ಮದರ್ಶಿ ನಾರಾಯಣ ಬೇಗೂರು  ಬನ್ನಿ ಗುಪ್ಪೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಪಿತಾಂಬರ ಹೇರಾಜೆ, ಕಾರ್ಯದರ್ಶಿ ವಿಶ್ವನಾಥ್ ಆರ್ ನಾಯಕ್, ಉಪಕಾರ್ಯದರ್ಶಿ ಕೆ ಶಂಕರ ಹೆಗ್ಡೆ, ಟ್ರಸ್ಟಿಗಳಾದ ವಸಂತ ಸುವರ್ಣ, ಮಹಾಬಲ ಶೆಟ್ಟಿ, ಪ್ರಧಾನ ಅರ್ಚಕ  ರಾಘವೇಂದ್ರ ಭಾಂಗಿಣ್ಣಾಯ ಕುಂಟಿನಿ, ಗೌರವ ಸಲಹೆಗಾರ,  ಶ್ರೀ ಗುರುದೇವ ಕಾಲೇಜು ಪ್ರಾಂಶುಪಾಲ ಕ್ರಷ್ಣಪ್ಪ ಪೂಜಾರಿ, ಸಮಿತಿ ಸದಸ್ಯರಾದ ಕೃಷ್ಣ ಶೆಟ್ಟಿ ರಾಘವೇಂದ್ರ ನಗರ, ಜಯರಾಮ ಬಂಗೇರ ಹೇರಾಜೆ, ನಾರಾಯಣ ಪೂಜಾರಿ ಮಚ್ಚಿನ, ಸುರೇಶ್ ಶೆಟ್ಟಿ, ನಾಗೇಶ್ ಕೋಟ್ಯಾನ್, ಪಾರ್ವತಿ, ವಾರಿಜ, ಉಮಾ ಪ್ರಥ್ವಿರಂಜನ್, ಸುಶೀಲಾ ಹೆಗ್ಡೆ, ಮತ್ತಿತರರು ಉಪಸ್ಥಿತರಿದ್ದರು.

ಕೋಶಾಧಿಕಾರಿ ಶೇಖರ್ ಬಂಗೇರ ಸ್ವಾಗತಿಸಿ, ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಸಂತ್ ಸುವರ್ಣ ವಂದಿಸಿದರು.  ಶ್ರೀ ರಾಘವೇಂದ್ರ ಮಹಿಳಾ ಭಜನಾ ಮಂಡಳಿ ರಾಘವೇಂದ್ರ ನಗರ ಮತ್ತು ಶ್ರೀ ಮೂಕಾಂಬಿಕ ಮಹಿಳಾ ಭಜನಾ ಮಂಡಳಿ ಸದಸ್ಯರಿಂದ ಭಜನಾ ಕಾರ್ಯಕ್ರಮ ಜರಗಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.