ತಾಲೂಕಿನಲ್ಲಿ ನೆರೆ ಸಂತ್ರಸ್ತರಿಗೆ ಸಂಘ-ಸಂಸ್ಥೆಗಳ ನೆರವು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ನಿಡ್ಲೆ: ಇಲ್ಲಿಯ ಮೇರ್ಲ ಮನೆ ನಿವಾಸಿ ರಿಕ್ಷಾಚಾಲಕ ಎಮ್.ಹೊನ್ನಪ್ಪ ಗೌಡರವರು ನೆರೆಪೀಡಿತ ಸಂತ್ರಸ್ತರಿಗಾಗಿ ರೂ 1.ಲಕ್ಷ ನಗದನ್ನು ಶಾಸಕರ ಕಚೇರಿ ಶ್ರಮಿಕದಲ್ಲಿ ಹಸ್ತಾಂತರಿಸಿದರು. ಶಾಸಕರ ಪರವಾಗಿ ಕಚೇರಿ ಸಹಾಯಕ ರವಿ ಹಾಗೂ ನಂದಕುಮಾರ್ ನಗದು ಸ್ವೀಕರಿಸಿದರು.

ಬೆಳ್ತಂಗಡಿ: ತಾಲೂಕಿನ ನೆರೆಸಂತ್ರಸ್ತರಿಗೆ ಬೆಳ್ತಂಗಡಿ ಸರಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘ ಹಾಗೂ ಸರಕಾರಿ ನೌಕರರ ಸಂಘದ ವತಿಯಿಂದ ತರಕಾರಿ ಸಾಬೂನು, ಪೇಸ್ಟ್, ಬ್ರೆಷ್, ತೆಂಗಿನಎಣ್ಣೆ, ಬಾಚಣಿಗೆ, ಅಕ್ಕಿ, ಮಕ್ಕಳಿಗೆ ಮಹಿಳೆಯರಿಗೆ ಪುರುಷರಿಗೆ ಬಟ್ಟೆಗಳು, ಹೊದಿಕೆಬಟ್ಟೆಗಳು, ಚಾಪುಡಿ, ಕಾಫಿ ಹುಡಿ ಕ್ಯಾಂಡಲ್, ಸೊಳ್ಳೆ ಪರದೆ ಮುಂತಾದವುಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಡಾ.ಜಯಕೀರ್ತಿ ಜೈನ್, ಉಪಾಧ್ಯಕ್ಷ ಸಿದ್ದೇಶ್, ಜಯರಾಜ್ ಜೈನ್, ಪರಮೇಶ್, ತಾರಕೇಸರಿ, ವೆಂಕಟೇಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವತ್ಸಲಾ, ಪದಾಧಿಕಾರಿಗಳಾದ ಆರತಿ, ಕೃಷ್ಣ, ಶೀನ, ಮೋನಪ್ಪ ಗೌಡ, ಕೋಶಾಧಿಕಾರಿ ಮೇರಿ, ಕಾರ್ಯದರ್ಶಿ ರಘುಪತಿ ರಾವ್, ಗಂಗರಾಣಿ, ವಸಂತ ಸುವರ್ಣ, ರಾಜ್ಯಪರಿಷತ್ ಸದಸ್ಯ ಆನಂದ, ಸ್ಥಳೀಯ ಸಂಘದ ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳು, ಸ್ವಯಂ ಸೇವಕರು ಉಪಸ್ಥಿತರಿದ್ದರು.

ನ್ಯಾಯತರ್ಪು: ಹಿಂದ ವಿ ಯೂತ್ಸ್ ನಾಳ ನ್ಯಾಯತರ್ಪು ಪ್ರವಾಹ ಸಂತ್ರಸ್ತರ ಪಾಲನಾ ಕೇಂದ್ರಕ್ಜೆ ೧೦ಕೆ.ಜಿ ಅಕ್ಕಿ, ೨.೫ಲೀ. ತೆಂಗಿನ ಎಣ್ಣೆ ಹಾಗೂ ದಿನ ಬಳಕೆ ವಸ್ತುಗಳನ್ನು ನೀಡಿದರು.

ಜೈ ಭಾರತ್ ಮಾತಾ ಸೇವಾ ಟ್ರಸ್ಟ್ ಹೊಸ್ಮಾರು ಇವರಿಂದ ಬೆಳ್ತಂಗಡಿ ಪ್ರವಾಹ ಸಂತ್ರಸ್ತರ ಪಾಲನೆಗೆ ೮.೫೦ಕ್ವಿಂಟಾಲ್ ಅಕ್ಕಿ, ೨೫ ತೆಂಗಿನ ಕಾಯಿ, ೧೫ಕೆ.ಜಿ ತರಕಾರಿ, ಚಾ ಹುಡಿ, ಫಿನೈಲ್, ಸಕ್ಕರೆ, ಚಾಪೆ, ಟರ್ಪಾಲು ಹಾಗೂ ಇತರ ದಿನಬಳಕೆ ವಸ್ತುಗಳನ್ನು ಹಸ್ತಾತರಿಸಿದರು.

ಬ್ರಹ್ಮಾವರದಿಂದ ಆಗಮಿಸಿದ ಗಣೇಶ್ ಪುರೋಹಿತ್‌ರವರು ಬೆಳ್ತಂಗಡಿ ಪ್ರವಾಹ ಸಂತ್ರಸ್ತರ ಪಾಲನಾ ಕೇಂದ್ರಕ್ಕೆ ೭೫ಕೆ.ಜಿ ಅಕ್ಕಿ, ೧೦ಕೆ.ಜಿ ಅವಲಕ್ಕಿ, ೧೦ಕೆ.ಜಿ ಸಜ್ಜಿಗೆ, ಶಾಲನ್ನು ಸಂತ್ರಸ್ತರಿಗೆ ದೇಣಿಗೆಯಾಗಿ ನೀಡಿದರು.
ಬೆಂಗಳೂರಿನ ಡಾ| ಬಿ. ಗಣೇಶ್ ಬಾಳಿಗಾರವರು ಪ್ರವಾಹ ಸಂತ್ರಸ್ತರ ಪಾಲನಾ ಕೇಂದ್ರಕ್ಕೆ ವೈದ್ಯಕೀಯ ನೆರವಾಗಿ ಎರಡು ಬಾಕ್ಸ್ ಔಷಧ ಹಾಗೂ ಇತರ ಪರಿಕರಗಳು ಹಾಗೂ ಒಂದು ಬಾಕ್ಸ್ ಬಿಸ್ಕೆಟ್‌ಗಳನ್ನು ನೀಡಿದರು.

ಮಡಂತ್ಯಾರು: ಗ್ರಾ.ಪಂ. ಮಡಂತ್ಯಾರು, ರೋಟರಿ ಕ್ಲಬ್ ಮಡಂತ್ಯಾರು, ಜೇಸಿಐ ಮಡಂತ್ಯಾರು, ವರ್ತಕರ ಸಂಘ ಪುಂಜಾಲಕಟ್ಟೆ ಮಡಂತ್ಯಾರು, ಹಾಲು ಉತ್ಪಾದಕರ ಸಂಘ ಮಡಂತ್ಯಾರು, ಪುಂಡಲಿಕ ಬಾಳಿಗಾ ಜ್ಯುವೆಲ್ಲರ್ಸ್ ಪುಂಜಾಲಕಟ್ಟೆ, ಮಡಂತ್ಯಾರಿನ ವಿವಿಧ ಸಂಘ ಸಂಸ್ಥೆಗಳಿಂದ ಹಾಗೂ ಸಾರ್ವಜನಿಕರಿಂದ ಸಂಗ್ರಹಿಸಲಾದ ನೆರೆಸಂತ್ರಸ್ತರಿಗೆ ದೈನಂದಿನ ಬಳಕೆಗೆ ತುರ್ತಾಗಿ ಬೇಕಾಗಿರುವ ಸಾಮಗ್ರಿಗಳಾದ 25 ಚೀಲ ಅಕ್ಕಿ, ದನಕರುಗಳಿಗೆ ಫೀಡ್, ತೆಂಗಿನಎಣ್ಣೆ, ಸಾಬೂನುಗಳು, ಮೆಣಸು, ಸಕ್ಕರೆ, ಚಾ ಹುಡಿ,ಪೆಸ್ಟ್, ಸೋಪ್,ಬಿಸ್ಕೆಟು, ಮಕ್ಕಳಿಗೆ ಪುಸ್ತಕ, ಬ್ಯಾಗ್, ಚಪ್ಪಲಿ, ತಿಂಡಿ ತಿನಿಸುಗಳು, ತೆಂಗಿನಕಾಯಿ, ಬಟ್ಟೆ, ಟೀಶರ್ಟ್, ಚಾಪೆ, ಬಕೆಟ್, ಮುಂತಾದ ಸಾಮಾಗ್ರಿಗಳನ್ನು ಎರಡು ಗೂಡ್ಸ್ ವಾಹನದಲ್ಲಿ ಶ್ರಮಿಕ ಶಾಸಕರ ಕಚೇರಿಗೆ ಹಸ್ತಾಂತರಿಸಿದರು.

ಬೆಳ್ತಂಗಡಿ: ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಚೇಂಬರ್‌ನ ಸದಸ್ಯರು ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳ ಸಂತ್ರಸ್ತರು ವಾಸಮಾಡುವ ಕಾಳಜಿ ಕೇಂದ್ರಗಳಾದ ಇಂದಬೆಟ್ಟು, ಕಾಜೂರು ಹಾಗೂ ಕುಕ್ಕಾವು ಕೇಂದ್ರಗಳಿಗೆ ಭೇಟಿ ನೀಡಿ, ಸಹಾಯಹಸ್ತ ನೀಡಿ ಅವರಿಗೆ ಧೈರ್ಯ ತುಂಬಿ ಅವರ ಮುಂದಿನ ಉಜ್ವಲ ಬಾಳಿಗೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಸೀನಿಯರ್ ಛೇಂಬರ್ ಸ್ಥಾಪಕಅಧ್ಯಕ್ಷ ಪ್ರಮೋದ್ ನಾಯಕ್, ಸದಸ್ಯರುಗಳಾದ ಯಶವಂತ ಪಟವರ್ಧನ್, ಅರ್ವಿನ್ ಡಿಸೋಜ, ಸುಭಾಶ್ಚಂದ್ರ ಎಂ.ಪಿ, ಭರತ ಗೌಡ ಇಂದಬೆಟ್ಟು, ದಯಾನಂದ ಬೆಳ್ತಂಗಡಿ, ಭಾನುಪ್ರಸನ್ನ, ಸಂತೋಷ ಹೆಗ್ಡೆ, ರಾಜಾರಾಮ್ ಉಪಸ್ಥಿತರಿದ್ದರು.

ಪಟ್ರಮೆ: ಅನಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವತಿಯಿಂದ ತಾಲೂಕಿನ ಪ್ರವಾಹ ಸಂತ್ರಸ್ತರಿಗೆ ಪಂಚೆ ಹಾಗೂ ಸೀರೆಗಳನ್ನು ಬೆಳ್ತಂಗಡಿ ಶ್ರಮಿಕ ಕಛೇರಿಯಲ್ಲಿ ಶಾಸಕ ಹರೀಶ್ ಪೂಂಜರಿಗೆ ಹಸ್ತಾತರಿಸಲಾಯಿತು. ಈ ಸಂದರ್ಭದಲ್ಲಿ ದೇವಪಾಲ ಅಜ್ರಿ ಉಳಿಯಬೀಡು, ರತ್ನವರ್ಮ ಜೈನ್, ಯುವರಾಜ್, ಶರತ್, ತಿಲಕ್‌ರಾಜ್ ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.