ಬೆಳ್ತಂಗಡಿ ಮುಂದುವರಿದ ಮಳೆಯ ಆರ್ಭಟ: ಹಲವಾರು ಮನೆಗಳಿಗೆ ಜಲದಿಗ್ಭಂಧನ: ದಿಡುಪೆ ಪರಿಸರದಿ ಭಯದ ವಾತಾವರಣ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಸತತ ಮಳೆಯ ಅಬ್ಬರಕ್ಕೆ ನದಿ ಸಮೀಪವಿರುವ ಮನೆಗಳಿಗೆ ಪ್ರವಾಹ ಉಕ್ಕಿಹರಿಯುತ್ತಿದ್ದು, ಜಲದಿಗ್ಬಂಧನ ಏರ್ಪಟ್ಟಿದೆ. ವಿದ್ಯುತ್ ತಂತಿ, ಕಂಬಗಳು ಗಾಳಿ ಮಳೆಗೆ ಸಿಲುಕಿ ನೆಲಕ್ಕುರುಳಿವೆ. ರಸ್ತೆಸಂಪರ್ಕ ಸೇತುವೆ, ತೂಗುಸೇತುವೆಗಳು ಪ್ರವಾಹದಲ್ಲಿ ಕೊಚ್ಚಿಹೋಗಿ ರಸ್ತೆಯ ಸಂಪರ್ಕ ಕಡಿದುಹೋಗಿ ಜನಜೀವನ  ಅಸ್ತವ್ಯಸ್ತವಾಗಿದೆ.

ಚಾರ್ಮಾಡಿ: ಚಾರ್ಮಾಡಿ ಗ್ರಾಮದ ಕೊಳಂಬೆ ಮುದರಗೌಡರ ಮಗ ಹರೀಶ್ ಎಂಬವರ ಮನೆ ಸಂಪೂರ್ಣ ಮೃತ್ಯುಂಜಯ ನದಿ ಪಾಲಾಗಿದೆ. ಪಕ್ಕದ ಪ್ರಶಾಂತ್ ಎಂಬವರ ಮನೆ ಗಡಿಪಾಲಾಗುವ ಭೀತಿಯಲ್ಲಿದೆ ಕೊಳಂಬೆ, ಅಂತರ ಅಮುಟಾಜೆ ಭಾಗದಿಂದ ಸುಮಾರು 40 ಮನೆಗಳನ್ನು ಖಾಲಿ ಮಾಡಲಾಗಿದೆ. ಅವರೆಲ್ಲರಿಗೂ ಮತ್ತೂರು ಶ್ರೀ ಪಂಚಲಿಂಗೇಶ್ಚರ ದೇವಸ್ಥಾನದ ಸಭಾಭವನಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ. 40 ಮನೆಗಳ ಜಾನುವಾರುಗಳನ್ನು ಬೀಟಿಗೆ ದೇವಸ್ಥಾನದ ವಠಾರದಲ್ಲಿ ಸೇರಿಸಲಾಗಿದೆ. ಸ್ಥಳಾಂತರ ಕಾರ್ಯದಲ್ಲಿ ವಿಶ್ವಹಿಂದೂ ಪರಿಷತ್ , ಶ್ರೀ ಕೃಷ್ನ ಭಜನಾ ಮಂಡಳಿ ತೋಟತ್ತಾಡಿ, ರಾಷ್ಟ್ರೀಯ ಸ್ವಯಂ ಸೇವಕರ ಸಂಘ, ಸ್ಥಳೀಯ ಟ್ಯಾಕ್ಸಿ ಚಾಲಕರು, ಮಾಲಕರು, ರಿಕ್ಷಾ ಚಾಲಕರು, ಅಪಾರ ಸಂಖ್ಯೆಯಲ್ಲಿ ಊರ ಪರಊರ ನಾಗರಿಕರು ಸಹಾಯ ಮಾಡಿದರು.

ಚಾರ್ಮಾಡಿ ಹೊಸಮಠ ಸೇತುವೆ ಒಂದು ಪಾರ್ಶ್ವ ಕುಸಿದಿದ್ದು ಸಂಪೂರ್ಣ ಸಂಪರ್ಕ ಕಡಿತಗೊಂಡಿದೆ.

 

 

ನಿಡಿಗಲ್ ಸೇತುವೆಯ ಬಳಿ ನೀರು ಉಕ್ಕಿ ಹರಿಯುತ್ತಿದ್ದು ಪಜಿರಡ್ಕ ದೇವಸ್ಥಾನ ರಸ್ತೆಗೆ ನೀರು ಬಂದಿದೆ. ಮಸೀದಿಯ ಪಕ್ಕದಲ್ಲಿ ಕೆಳಭಾಗದಲ್ಲಿ ಹಲವು ವರ್ಷಗಳಿಂದ ಇದ್ದ ಶೇಂದಿ ಅಂಗಡಿ ಮಳೆ ನೀರಿಗೆ ಕೊಚ್ಚಿ ಹೋಗಿದೆ.

ದಿಡುಪೆ  ಪರಿಸರದಲ್ಲಿ ಮಳೆನೀರಿಗೆ ಕೊಚ್ಚಿಹೋದ ಮರಗಳು

ಮಿತ್ತಬಾಗಿಲು ಗ್ರಾಮದ ಕೊಲ್ಲಿ ಕಾಜೂರು ಸೇತುವೆ  ಭಾರೀ ಮಳೆಗೆ ತೇಲಿಬಂದ ಮರಗಳ ಹೊಡೆತಕ್ಕೆ ಸಿಲುಕಿ ಬಿರುಕು ಬಿಟ್ಟಿದೆ.

ಮುಂಡಾಜೆ ಅರಸಮಜಲು ನೇತ್ರಾವತಿ ಕಿನಾರೆ ಪ್ರದೇಶದ ನೂಜಿ ಮನೆಯಲ್ಲಿ ಜಾನುವಾರುಗಳು ಭೀಕರವಾಗಿ ಸಾವನ್ನಪ್ಪಿರುವ ದೃಷ್ಯಗಳು.

ಕಿಲ್ಲೂರು ಅಶೋಕ್ ಟೈಲರ್ಸ್ ಅವರ ಟೈಲರ್ಸ್ ಶಾಪ್ ಗೆ ಮಳೆ ನೀರು ನುಗ್ಗಿದ ದೃಷ್ಯ

ಕಳ್ಮಂಜ  ಗ್ರಾಮದ ಕೊಡೆಂಚಿ ಎಂಬಲ್ಲಿ ವಾಸದ ಮನೆ ನೆಲಸಮಾಧಿ

ಇಂದಬೆಟ್ಟು ಗ್ರಾಮದಲ್ಲಿ ಜಲಾವೃತಗೊಂಡಿರುವ ಮನೆಗಳು

ಪಜಿರಡ್ಕ ದೇವಸ್ಥಾನದ ಬಳಿ ಮನೆ ಕುಸಿದು ಅತಂತ್ರರಾದ 9 ಮಂದಿಯನ್ನು ಗೃಹ ರಕ್ಷಕ ದಳದವರು ರಕ್ಷಿಸಿದರು.

ಬಂದಾರು ಗ್ರಾಮದ ಬಟ್ಲಡ್ಕ ಅಬೂಬಕ್ಕರ್ ರವರ ಮನೆ ರಾತ್ರಿ ಕುಸಿದು ಬಿದ್ದು ಅಪಾರ ನಷ್ಟ ಸಂಭವಿಸಿದೆ

ಲಾಯಿಲ ಗ್ರಾಮದ ಪುತ್ರಬೈಲು ಎಂಬಲ್ಲಿ ದಲಿತ ಕಾಲೋನಿಯಲ್ಲಿ ಮನೆಯೊಳಗೆ ನೀರು ನುಗ್ಗಿದ್ದು, ತಹಶೀಲ್ದಾರರು ಗಣಪತಿ ಶಾಸ್ತ್ರಿ ಮತ್ತು ತಾಲೂಕು ಕಂದಾಯ ಇಲಾಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನಿರಾಶ್ರಿತರನ್ನು ಲಾಯಿಲ ಕರ್ನೋಡಿ ಶಾಲೆಯ ಗಂಜಿಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ಶ್ರೀಕ್ಷೇತ್ರ ಪಜಿರಡ್ಕ ದೇವಸ್ಥಾನದ ಸಮೀಪದಲ್ಲಿ ಇದ್ದಂತಹ ನಾಲ್ಕೈದು ಮನೆಗಳು ನದಿಯ ನೀರಿನಿಂದ ಜಲಾವೃತ.

ಮುಗೇರಡ್ಕ ತೂಗುಸೇತುವೆ ಸಂಪೂರ್ಣವಾಗಿ ಕೊಚ್ಚಿಹೋಗಿದೆ

ನೇತ್ರಾವತಿ ಅಜಿಕ್ಕುರಿ ರಘುಚಂದ್ರ ಟಿ.ಜಿ ಅವರ ಕೃಷಿಭೂಮಿ ಪಂಪ್‌ಶೆಡ್ ಸಂಪೂರ್ಣ ಜಲಾವೃತ

ಲಾಯಿಲ ಗ್ರಾಮದ ಗುರಿಂಗಾನ ಪರಮೇಶ್ವರ ಭಟ್ ಮನೆ

ಮದ್ದಡ್ಕ ಮಸೀದಿ ಸಮೀಪ ಮರವೊಂದು ವಿದ್ಯುತ್ ತಂತಿಯ ಮೇಲೆ ಬಿದ್ದು ಹಾನಿಯಾಗಿದೆ

ವೇಣೂರು ಕ್ರಿಸ್ತರಾಜ ದೇವಾಲಯದ ಆವರಣ ಗೋಡೆ ಕುಸಿತ

ನಾವೂರ ಗ್ರಾಮದ ಮೊರ್ತಜೆಯ ಕುಂಡಡ್ಕ ಬಳಿ ಪಂಪ್‌ಶೆಡ್ ಕುಸಿತ

ಕಳೆಂಜ ಗ್ರಾಮದ ಕಾಯರ್ತಡ್ಕಕುದ್ಕೋಳಿ ನಿವಾಸಿ ನೀಲಯ್ಯಗೌಡರ ಮನೆಗೆ ನೀರು ನುಗ್ಗಿ ಭಾರೀ ಹಾನಿ..

ಘಟನಾ ಸ್ಥಳಗಳಿಗೆ ಇಂದು ಶಾಸಕ ಹರೀಶ್ ಪೂಂಜ, ತಹಶಿಲ್ದಾರ್ ಗಣಪತಿ ಶಾಸ್ತ್ರಿ, ಜಿ.ಪಂ ಕಾರ್ಯಪಾಲಕ ಇಂಜಿನಿಯರ್ ಚೆನ್ನಪ್ಪ ಮೊಯಿಲಿ, ಮೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ಶಿವಶಂಕರ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಶಿವಪ್ರಸಾದ್ ಅಜಿಲ, ಆರ್ ಐ ರವಿ ಕುಮಾರ್, ಗ್ರಾ. ಯೋ ನಿರ್ದೇಶಕ ಮಹಾವೀರ ಅಜ್ರಿ, ತಾ. ಯೋಜನಾಧಿಕಾರಿ ಜಯಕರ ಶೆಟ್ಟಿ. ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ಕಾರ್ಯ‍ದರ್ಶಿಗಳಾದ ಸೀತಾರಾಮ ಬಿ.ಎಸ್ ಮತ್ತು ಪ್ರಭಾಕರ ಶೆಟ್ಟಿ ಉಪ್ಪಡ್ಕ, ತಾ.ಪಂ ಸದಸ್ಯ ಜಯರಾಮ ಆಲಂಗಾರು, ತಾ.ಪಂ ಇ.ಒ ಜಯರಾಮ್, ರೆ.ಫಾ ಜೋಜಿ, ಗಣೇಶ್ ಗೌಡ, ಹರೀಶ್ ಪೂರ್ತಾಜೆ, ಮೊದಲಾದವರು ಭೇಟಿ ನೀಡಿದರು.

 

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.