ಉಜಿರೆ: ಇಲ್ಲಿನ ಬೆನಕ ಹೆಲ್ತ್ ಸೆಂಟರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಇನ್ನು ಮುಂದೆ ದಿನದ 24 ಗಂಟೆಯಲ್ಲಿ ತುರ್ತು ಮತ್ತು ಅಪಘಾತ ಆರೈಕೆ ವಿಭಾಗ ಕಾರ್ಯ ನಿರ್ವಹಿಸಲಿದೆ. ಇದಕ್ಕಾಗಿ ಎಲುಬು ಮತ್ತು ಕೀಲು ಶಸ್ತ್ರ ಚಿಕಿತ್ಸಾ ತಜ್ಞರಾದ ಡಾ| ಪುನೀತ್ .ಬಿ ಇವರ ನೇಮಕವಾಗಿದ್ದು ಆ. 5 ರಿಂದಲೇ ಅವರು ಸೇವೆ ಆರಂಭಿಸಿದ್ದಾರೆ.
ಇವರು ತಮ್ಮ ಎಂ.ಬಿ.ಬಿ.ಎಸ್ ಪದವಿಯನ್ನು ಕೆ.ವಿ.ಜಿ ಮೆಡಿಕಲ್ ಕಾಲೇಜು ಸುಳ್ಯದಲ್ಲಿಯೂ ಡಿಆರ್ಥೋವನ್ನು ವಿ.ಐ.ಎಂ.ಸ್ ಬಳ್ಳಾರಿಯಲ್ಲಿ ಮತ್ತು ಡಿ.ಎನ್.ಬಿಯನ್ನು ಡಿಡಿಯು ಹಾಸ್ಪಿಟಲ್ ಡೆಲ್ಲಿಯಲ್ಲಿ ಪಡೆದುಕೊಂಡಿರುತ್ತಾರೆ. ಇವರು ಆಸ್ಪತ್ರೆಯಲ್ಲಿ ಬೆಳಗ್ಗೆ 9.00 ರಿಂದ ಮಧ್ಯಾಹ್ನ 1.00ಗಂಟೆಯವರೆಗೆ ಮತ್ತು 3.00 ಗಂಟೆಯಿಂದ ಸಂಜೆ 7.00 ಗಂಟೆಯವರೆಗೆ ಹಾಗೂ ತುರ್ತು ಕರೆಗಳಿಗೆ ಲಭ್ಯರಿರುತ್ತಾರೆ ಎಂದು ಆಡಳಿತ ವೈದ್ಯಾಧಿಕಾರಿ ಡಾ| ಗೋಪಾಲಕೃಷ್ಣ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.