ದುಬಾರಿ ಮೊಬೈಲ್ ಫೋನ್ ಮರಳಿಸಿ ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ

ಗುರುವಾಯನಕೆರೆ: ಆ. 6 ರಂದು ಪ್ರದೀಪ್ ಆಚಾರ್ಯ ಪುತ್ತೂರು ಎಂಬವರು ರಿಕ್ಷಾದಲ್ಲೇ ಮರೆತುಬಿಟ್ಟಿದ್ದ 25ಸಾವಿರ ರೂ. ಬೆಲೆಬಾಳುವ ವಿವೋ 11 ಮೊಬೈಲನ್ನು ಸುನ್ನತ್‌ಕೆರೆಯ ರಿಕ್ಷಾ ಚಾಲಕ ಪೊಡಿಮೋನು ಹಮೀದ್ ಇವರು ಅವರಿಗೆ ಮರಳಿಸಿ ಪ್ರಾಮಾಣಿಕತೆಗೆ ಮೆರೆದಿದ್ದಾರೆ. ಅಲ್ಲದೆ 15 ದಿನಗಳ ಹಿಂದೆ ಉಣ್ಣಿಕೃಷ್ಣನ್ ಅವರ 15ಸಾವಿರ ರೂ ಬೆಲೆಯ ಮೊಬೈಲ್ ಫೋಣ್ ರಿಕ್ಷಾದಲ್ಲಿ ಸಿಕ್ಕಿದ್ದನ್ನೂ ಮರಳಿಸಿ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದು ಅವರ ಮೂರನೆಯ ಜನಮೆಚ್ಚುಗೆ ಪಡೆದ ಕೆಲಸ. ಈ ಹಿಂದಿನಿಂದಲೇ ಅವರು ಆಪತ್ಬಾಂದವರಾಗಿ ಗುರುತಿಸಿಕೊಂಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾದವರಾಗಿದ್ದಾರೆ. 6 ತಿಂಗಳ ಹಿಂದೆ ರಸ್ತೆ ಬದಿಯಲ್ಲಿ ಬ್ಯಾಂಗ್‌ನಲ್ಲಿ ಬಿದ್ದು ಸಿಕ್ಕಿದ್ದ 15 ಪವನ್ ಚಿನ್ನ ಹಾಗೂ ಬೆಲೆಬಾಳುವ ವಸ್ತುಗಳನ್ನು ಅವರು ವಾರಿಸುದಾರರನ್ನು ಪತ್ತೆಮಾಡಿ ಅವರು ಹಸ್ತಾಂತರಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.