ಭಾರೀ ಗಾಳಿ-ಮಳೆಗೆ ಮನೆಗಳಿಗೆ ಹಾನಿ: ಶಾಸಕರಿಂದ ಪರಿಹಾರಧನ ವಿತರಣೆ

ಕಳಿಯ: ಇಲ್ಲಿಯ ಗೇರುಕಟ್ಟೆ5 ಸೆಂಟ್ಸ್ ಕಾಲೊನಿ ನಿವಾಸಿ ಜಯಂತಿ ಆನಂದ ನಾಯ್ಕ ರವರ ಮನೆಗೆ ಆ.5ರಂದು ಸುರಿದ ಭಾರೀ ಗಾಳಿ-ಮಳೆಗೆ ಅಪಾರ ಹಾನಿಯಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಶಾಸಕರ ಆಪ್ತ ಕಾರ್ಯದರ್ಶಿಯವರು ತುರ್ತುಕಾರ್ಯದ ನಿಮಿತ್ತ ಹೊರರಾಜ್ಯಕ್ಕೆ ತೆರಳಿರುವ ಶಾಸಕ ಹರೀಶ್ ಪೂಂಜರವರ ನಿರ್ದೇಶನದ ಮೇರೆಗೆ ಈ ಸಂತ್ರಸ್ತ ಕುಟುಂಬಕ್ಕೆ ರೂ.೧೦ಸಾವಿರ ಪರಿಹಾರಧನವನ್ನು ಹಸ್ತಾಂತರಿಸಿದರು ಹಾಗೂ ಮುಂದಿನ ಕ್ರಮಕ್ಕಾಗಿ ಅಧಿಕಾರಿಗಳಿಗೆ ಸೂಚಿಸಿದರು.


ಈ ಸಂದರ್ಭದಲ್ಲಿ ಕಳಿಯ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದಿಂದ ರೂ.5ಸಾವಿರ ಸಹಾಯಧನವನ್ನು ಸಂಘದ ಅಧ್ಯಕ್ಷ ವಸಂತ ಮಜಲು ಹಸ್ತಾಂತರಿಸಿದರು. ಸಂಘದ ನಿರ್ದೇಶಕ ಶೇಖರ್ ನಾಯ್ಕ್ ಗ್ರಾಮಕರಣಿಕ ರವಿ ಎಂ.ಎನ್, ಕಳಿಯ ಗ್ರಾ.ಪಂ ಅಧ್ಯಕ್ಷ ಶರತ್ ಕುಮಾರ್ , ಗ್ರಾ.ಪಂ ಸದಸ್ಯ ದಿವಾಕರ ಎಂ , ಕಂದಾಯ ಇಲಾಖಾ ಸಿಬ್ಬಂದಿಗಳು, ಸ್ಥಳೀಯರಾದ  ರತ್ನಾಕರ ಪೂಜಾರಿ ಬಳ್ಳಿದಡ್ಡ ಮತ್ತಿತರರು ಉಪಸ್ಥಿತರಿದ್ದರು.

ಕಳೆಂಜ: ಆ.5ರಂದು ಸುರಿದ ಭಾರೀ ಗಾಳಿ-ಮಳೆಗೆ ಕಳೆಂಜ ಗ್ರಾಮದ ಕೇದಗೆದಡಿ ನಿವಾಸಿ ನೀಲಮ್ಮ ಕೋಂ ಬಾಬು ಗೌಡ ರವರ ಮನೆಗೆ ಮರಬಿದ್ದು ಜಖಂಗೊಂಡಿದ್ದು, ಅಪಾರ ನಷ್ಟವುಂಟಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಶಾಸಕರ ಆಪ್ತ ಕಾರ್ಯದರ್ಶಿಯವರು ತುರ್ತುಕಾರ್ಯದ ನಿಮಿತ್ತ ಹೊರರಾಜ್ಯಕ್ಕೆ ತೆರಳಿರುವ ಶಾಸಕ ಹರೀಶ್ ಪೂಂಜರವರ ನಿರ್ದೇಶನದ ಮೇರೆಗೆ ಈ ಸಂತ್ರಸ್ತ ಕುಟುಂಬಕ್ಕೆ ರೂ.10ಸಾವಿರ ಪರಿಹಾರಧನವನ್ನು ಹಸ್ತಾಂತರಿಸಿದರು ಹಾಗೂ ಮುಂದಿನ ಕ್ರಮಕ್ಕಾಗಿ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ತಾ .ಪಂ. ಕಳೆಂಜ ಕ್ಷೇತ್ರದ ಸದಸ್ಯೆ  ಸುಶೀಲ  ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.