ಕೊಕ್ಕಡ ಸಹಕಾರಿ ಸಂಘದ ಶತಮಾನೋತ್ಸವ ಆಚರಣೆ ಪೂರ್ವಭಾವಿ ಸಭೆ

ಕೊಕ್ಕಡ: ಇಲ್ಲಿಯ ಕೊಕ್ಕಡ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘವು ಇದೇ ಡಿ.19 ರಂದು 100 ವರ್ಷ ಪೂರೈಸಲಿದ್ದು, ಶತಮಾನೋತ್ಸವ ಆಚರಣೆ, ನೂತನ ಕಛೇರಿ ಕಟ್ಟಡ ಮತ್ತು ಸಭಾಭವನದ ಉದ್ಘಾಟನಾ ಕಾರ್ಯಕ್ರಮದ ಬಗ್ಗೆ ಪೂರ್ವಭಾವಿ ಸಭೆಯು ಆ.4 ರಂದು ಸಂಘದ ವಾಣಿಜ್ಯ ಸಂಕೀರ್ಣದ ಮೇಲಂತಸ್ತಿನಲ್ಲಿ ಜರುಗಿತು.


ಸಂಘದ ಅಧ್ಯಕ್ಷ ನಾರಾಯಣ ಗೌಡ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಶತಮಾನೋತ್ಸವ ಆಚರಣೆ, ರೂಪುರೇಷೆಗಳನ್ನು ತಿಳಿಸಿದರು. ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಪಿ.ಕುಶಾಲಪ್ಪ ಗೌಡರವರನ್ನು ಹಾಗೂ ವಿವಿಧ ಸಮಿತಿಗೆ ಸಂಚಾಲಕರುಗಳನ್ನು ಆಯ್ಕೆ ಮಾಡಲಾಯಿತು.


ವೇದಿಕೆಯಲ್ಲಿ ಸಂಘದ ಅಧ್ಯಕ್ಷ ನಾರಾಯಣ ಗೌಡ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭುವನೇಶ್ವರಿ ಎಂ, ಉಪಾಧ್ಯಕ್ಷ ಎಂ.ಲಕ್ಷ್ಮೀನಾರಾಯಣ, ಶತಮಾನೋತ್ಸವ ಕಾರ್ಯಾಧ್ಯಕ್ಷ ಪಿ. ಕುಶಾಲಪ್ಪ ಗೌಡ, ನಿರ್ದೇಶಕ ಮಹಾಬಲ ನಾಯ್ಕ, ಸುಂದರ ಪೂಜಾರಿ, ಜಯರಾಮ ಗೌಡ, ರಾಮಣ್ಣ ಗೌಡ, ಭವಾನಿ, ಸರೋಜ, ಸೀತಮ್ಮ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.