ಉಜಿರೆಯಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ.

ಉಜಿರೆ: ‘ಕುಂದಾಪುರ ಕನ್ನಡ ಒಂದು ವಿಶಿಷ್ಟ ಸಂಸ್ಕೃತಿಯುಳ್ಳ ಭಾಷೆಯಾಗಿದೆ. ಕುಂದಾಪ್ರ ಕನ್ನಡ ಭೌಗೋಳಿಕವಾಗಿ  ಕುಂದಾಪುರ ತಾಲೂಕಿನ ನುಡಿಯಾದರೂ ಇಂದು ಈ ಭಾಷೆ ಮಾತನಾಡುವವರು ಎಲ್ಲಾ ಕಡೆ ಇದ್ದಾರೆ. ಉಜಿರೆಯಲ್ಲಿಯೂ ಸಹ ಈ ಭಾಷೆ ಬಗ್ಗೆ ಕಾರ್ಯಕ್ರಮ ಆಗುತ್ತಿರುವುದು ಸಂತೋಷ ‘ ಎಂದು ಉಜಿರೆಯ ಎಸ್.ಡಿ.ಎಮ್ ಪ.ಪೂ ಕಾಲೇಜಿನ ಪ್ರಾಚಾರ್ಯ ಪ್ರೊ.ದಿನೇಶ್ ಚೌಟ ಹೇಳಿದರು.
ಇವರು ಕಾಲೇಜಿನ ಸಂಹಿಕ ಭಾಷಾ ವೇದಿಕೆಯವರು ನಡೆಸಿದ ‘ವಿಶ್ವ ಕುಂದಾಪ್ರ ಕನ್ನಡ ದಿನ‘ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಜಿರೆಯ ಎಸ್.ಡಿ.ಎಮ್ ಪದವಿ ಕಾಲೇಜಿನ ಪ್ರಾಧ್ಯಾಪಕರಾದ ಮಹೇಶ್ ಶೆಟ್ಟಿ, ಹರೀಶ್ ಶೆಟ್ಟಿ ಹಾಗೂ ಎಸ್. ಡಿ.ಎಮ್  ಪ್ರೌಢಶಾಲಾ ಶಿಕ್ಷಕ ವಿಜಯೇಂದ್ರ ದೇವಾಡಿಗರು  ಕುಂದಾಪ್ರ ಕನ್ನಡದ ಕೆಲವು ಅನನ್ಯತೆಗಳನ್ನು ತಿಳಿಸಿದರು.
ಎಸ್. ಡಿ.ಎಮ್  ಪ.ಪೂ ಕಾಲೇಜಿನ ಪ್ರಾಧ್ಯಾಪಕ ಡಾ. ಪ್ರಸನ್ನಕುಮಾರ್ ಐತಾಳ್ ಕುಂದಾಪುರ ಕನ್ನಡದ ಇತಿಹಾಸ ಹಾಗೂ ಸ್ವಾರಸ್ಯವನ್ನು ತಿಳಿಸಿದರು. ಪ್ರಾಧ್ಯಾಪಕಿಯರಾದ ಅಮೃತಾ ಶೆಟ್ಟಿ ಹಾಗೂ ಅರ್ಚನಾ ಕಾಮತ್ ಅವರು ವಿವಿಧ ಕುಂದಾಪುರ ಕನ್ನಡ ಗಾಯನವನ್ನು ಪ್ರಸ್ತುತಪಡಿಸಿದರು. ವಿದ್ಯಾರ್ಥಿ ಅಚಿಂತ್ಯನು ಕುಂದಾಪ್ರ ಒಗಟು ಕೇಳಿ ರಂಜಿಸಿದರು.  ಸಂಸ್ಕೃತ ಪ್ರಾಧ್ಯಾಪಕ ಡಾ. ಪ್ರಸನ್ನಕುಮಾರ್ ಐತಾಳ್ ನಿರೂಪಿಸಿ , ಕನ್ನಡ ಪ್ರಾಧ್ಯಾಪಕ ಡಾ. ರಾಜೇಶ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.