ಕಡಿರುದ್ಯಾವರ: ಕೆಸರುಗದ್ದೆ ಕ್ರೀಡಾಕೂಟ ಹಾಗೂ ಕೃಷಿ ಮಾಹಿತಿ

ಕಡಿರುದ್ಯಾವರ: ಎಸ್. ಡಿ. ಎಂ. ಪಾಲಿಟೆಕ್ನಿಕ್‌ನ ಎನ್. ಎಸ್. ಎಸ್. ಘಟಕ ಹಾಗೂ ಜೆಸಿಐ-ಉಜಿರೆ ವತಿಯಿಂದ ಕಡಿರುದ್ಯಾವರ ಹೇಡ್ಯದ  ಚೀಂಕ್ರ ಗೌಡ ಮತ್ತು  ಗೋಪಾಲ ಗೌಡ ಇವರ ಜಮೀನಿನಲ್ಲಿ ಕೆಸರುಗದ್ದೆ ಕ್ರೀಡಾಕೂಟ ಹಾಗೂ ಕೃಷಿ ಮಾಹಿತಿ  ಕಾರ್ಯಕ್ರಮವನ್ನು ಅಯೋಜಿಸಲಾಗಿತ್ತು.

ಸಹಕಾರಿ ಸಂಘ-ಬಂಗಾಡಿ ಇದರ ಅಧ್ಯಕ್ಷ ಲಕ್ಷ್ಮಣ ಗೌಡ, ನಾವೂರು ಶಾಲಾಭಿವೃದ್ದಿ ಸಮಿತಿಯ  ಸುರೇಶ್ ಗೌಡ, ಗ್ರಾಮಪಂಚಾಯತ್ ಅಧ್ಯಕ್ಷೆ  ವನಿತಾ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಎನ್. ಎಸ್. ಎಸ್. ಯೋಜನಾಧಿಕಾರಿ ಪ್ರವೀಣ್ ಮತ್ತು ಉಪಯೋಜನಾಧಿಕಾರಿ ಯಜ್ಞೇಶ್, ಜೆಸಿಐ ಅಧ್ಯಕ್ಷ ಸಂಪತ್ ಕುಮಾರ್, ಉಪಾಧ್ಯಕ್ಷ ನಿಕಿತ್ ಜೈನ್, ಕಾಲೇಜಿನ ಅಧ್ಯಾಪಕರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಕೆಸರು ಗದ್ದೆಯಲ್ಲಿ ವಿವಿಧ ಮನೋರಂಜನೆಯ ಆಟಗಳನ್ನು ಹಮ್ಮಿಕೊಳ್ಳಲಾಗಿತ್ತು ಮತ್ತು ಕೃಷಿ ಮಾಹಿತಿ ನೀಡಲಾಯಿತು. ವಿಶ್ವನಾಥ ಗೌಡ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಿದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.