ಕೊಕ್ಕಡ: ಎಂಡೋ ಸಂತ್ರಸ್ತರ ಕುಟುಂಬದವರ ಸಮಲೋಚನಾ ಸಭೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಎಂಡೋ ಸಂಸ್ರಸ್ತರ ಸಮಸ್ಯೆಗಳ ಪರಿಹಾರಕ್ಕಾಗಿ ನೂತನವಾಗಿ ಆಯ್ಕೆಯಾಗಲಿರುವ ಆರೋಗ್ಯ ಸಚಿವರು, ಕರಾವಳಿಯ ಶಾಸಕರು, ಅಧಿಕಾರಿಗಳು ಹಾಗೂ ಸಂತ್ರಸ್ತರ ಸಭೆಯನ್ನು ಕರೆದು ಸಮಸ್ಯೆಗಳ ಪರಿಹಾರವನ್ನು ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಭರವಸೆಯನ್ನು ನೀಡಿದ್ದಾರೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಅವರು ಆ.2 ರಂದು ಕೊಕ್ಕಡದಲ್ಲಿ ಎಂಡೋ ಸಂತ್ರಸ್ತರ ಕುಟುಂಬದವರ ಸಮಲೋಚನಾ ಸಭೆಯಲ್ಲಿ ಮಾತನಾಡಿದರು.ಎಂಡೋ ಸಂತ್ರಸ್ತರಿಗೆ ಮಾಸಾಸನವನ್ನು ಹೆಚ್ಚಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿಯನ್ನು ನೀಡಿದ್ದು, ಅದನ್ನು ಪುರಸ್ಕರಿಸಿರುವ ಶಾಸಕರು ಈ ಬಗ್ಗೆ ಗಮನ ಹರಿಸುವಂತೆ ಅಧಿಕಾರಿಗಳಿಗೆ ಇಗಾಗಲೇ ಸೂಚಿಸಿದ್ದಾರೆ. ಸಂತ್ರಸ್ತರಿಗೆ ಶಾಶ್ವತ ಪುನರ್ ವಸತಿಯ ಬಗ್ಗೆ ಮುಂದಿನ ಸಭೆಯಲ್ಲಿ ಪರಿಹಾರವನ್ನು ಮಾಡುವುದಾಗಿ ಕೂಡಾ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ಎಂಡೋ ಸಂತ್ರಸ್ತರ ಸಮಸ್ಯೆಗಳು ರಾಜ್ಯದ ಬಹುಮುಖ್ಯ ಸಮಸ್ಯೆಯಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳು ಈ ಹಿಂದಿನ ತಮ್ಮ ಸರಕಾರದ ಅವಧಿಯಲ್ಲಿ ಆದ ಕ್ರಮಗಳ ಬಗ್ಗೆ ಮಾಹಿತಿನೀಡಿದ್ದಾರೆ ಎಂದರು.

ಸಭೆಯಲ್ಲಿ ಸಂತ್ರಸ್ತರ ಪೋಷಕರು ಈಗ ಕೊಕ್ಕಡದಲ್ಲಿ ನಡೆಸುತ್ತಿರುವ ಡೇ ಕೇರ್ ಸಂಟರ್ ನ ಅವ್ಯವಸ್ಥೆಗಳ ಬಗ್ಗೆ ಶಾಸಕರ ಗಮನಕ್ಕೆ ತಂದರು.
ಸಂತ್ರಸ್ತ ಮಕ್ಕಳಿಂದಲೇ ಶೌಚಾಲಯವನ್ನು ತೊಳೆಸುತ್ತಿದ್ದಾರೆ. ಸರಿಯಾಗಿ ಆಹಾರವನ್ನು ನೀಡಲಾಗುತ್ತಿಲ್ಲ. ಸಂತ್ರಸ್ತರಿಗೆ ಈ ಹಿಂದೆ ಮಧ್ಯಾಹ್ನ ಹೊತ್ತು ಮಲಗಲು ಅವಕಾಶವಿತ್ತು. ಈಗ ಎಲ್ಲಾ ಬೆಡ್ ಗಳನ್ನು ತೆಗೆದುಹಾಕಲಾಗಿದೆ. ಪೋಷಕರು ಗೇಟ್ ನೊಳಗೆ ಬರಲು ನಿರ್ಬಂಧ ಹೇರಲಾಗಿದೆ. ಸಂಸ್ಥೆಯ ಈ ನಡವಳಿಕೆಯಿಂದ ಸಂತ್ರಸ್ತರಿಗೆ ಅನಾರೋಗ್ಯ ಸಮಸ್ಯೆಗಳು ಉಂಟಾಗಿದೆ ಎಂದು ದೂರಿದರು.
ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ ಶಾಸಕರು ತಕ್ಷಣ ಕೇಂದ್ರಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹಾರ ಮಾಡುವಂತೆ ಸೂಚಿಸಿದರು.
ಎಂಡೋ ಸಂತ್ರಸ್ತರ ಹೋರಾಟಗಾರ ಶ್ರೀಧರ್ ಗೌಡ ಕೆಂಗುಡೇಲು, ಕೊಕ್ಕಡ ಸಹಕಾರಿ ಬ್ಯಾಂಕ್ ಅಧ್ಯಕ್ಷ ನಾರಾಯಣ ಗೌಡ,   ಸುಬ್ರಹ್ಮಣ್ಯ ಗೌಡ ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.