ಬೆಳ್ತಂಗಡಿ ಎಸ್.ವಿ ಸ್ಟುಡಿಯೋ ಮಾಲಕ ಲೋಕೇಶ್ ಶೆಟ್ಟಿ ಹೃದಯಾಘಾತದಿಂದ ನಿಧನ

ಬೆಳ್ತಂಗಡಿ: ಇಲ್ಲಿಯ ಬೆಳ್ತಂಗಡಿ ನಗರ ನಿವಾಸಿ ಎಸ್.ವಿ ಸ್ಟುಡಿಯೋ & ವೀಡಿಯೊ ಮಾಲಕ, ಉದ್ಯಮಿ ಲೋಕೇಶ್ ಶೆಟ್ಟಿ(60.ವ)ಯವರು ಆ.2ರಂದು ರಾತ್ರಿ ಹೃದಯಾಘಾತದಿಂದ ನಿಧನರಾದರು.
ಇವರು  ಜೇಸಿಐ ಬೆಳ್ತಂಗಡಿ ಮಂಜುಶ್ರೀ ಪೂರ್ವಾಧ್ಯಕ್ಷರಾಗಿದ್ದು, ಸೀನಿಯರ್ ಜೇಸಿ ಸದಸ್ಯರಾಗಿದ್ದರು. ಬೆಳ್ತಂಗಡಿ ಕೇಬಲ್ ನೆಟ್‌ವರ್ಕ್ ಉದ್ಯಮ ನಡೆಸುತ್ತಿದ್ದರು ಹಾಗೂ ವಿ4 ನ್ಯೂಸ್ ಚಾನೆಲ್‌ನಲ್ಲಿ ವೀಡಿಯೋ ಜರ್ನಲಿಸ್ಟ್ ಆಗಿ ಕರ್ತವ್ಯ ನಿರ್ವಹಿಸಿದ್ದರು.
ಮೃತರು ಪತ್ನಿ ಹೇಮ, ಪುತ್ರ ಸಂಕೇತ್, ಪುತ್ರಿ ಸುರಕ್ಷಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

ಸಂಜೆ ಅಂತ್ಯಸಂಸ್ಕಾರ: ಲೋಕೇಶ್ ರವರ ಅಳಿಯ ದೂರದ ಊರಿಂದ ಆಗಮಿಸಲಿರುವ ಕಾರಣ ಮೃತರ ಅಂತ್ಯಕ್ರಿಯೆಯು ಸಂಜೆ4.00 ಗಂಟೆಯ ನಂತರ ನಡೆಯಲಿದ್ದು, ಪಾರ್ಥೀವ ಶರೀರವನ್ನು ಚರ್ಚ್‌ರೋಡ್ ಬಳಿ ಇರುವ ಶೀಥಲೀಕೃತ ಶವಾಗಾರದಲ್ಲಿ ಸಂರಕ್ಷಿಸಿ ಇಡಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.