ನಡ: ರೈತರಿಗೆ ಸಸ್ಯ ಸಂರಕ್ಷಣಾ ಪದ್ಧತಿಗಳ ತರಬೇತಿ

ನಡ: ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಶಿವಮೊಗ್ಗ, ವಲಯ ಕೃಷಿ ಮತ್ತು ತೊಟಗಾರಿಕಾ ವಿಜ್ಞಾನ ಕೇಂದ್ರ ಬ್ರಹ್ಮಾವರ, ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳ ಸಂಯುಕ್ತ ಅಶ್ರಯದಲ್ಲಿ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಯೋಜನೆಯಡಿ ರೈತರಿಗೆ ಸಸ್ಯ ಸಂರಕ್ಷಣಾ ಪದ್ದತಿಗಳ ತರಬೇತಿ ಕಾರ್ಯಕ್ರಮವು ಇಂದು(ಆ.2) ನಡದಲ್ಲಿ ಜರುಗಿತು.


ಬೆಳ್ತಂಗಡಿ ಕೃಷಿ ಅಧಿಕಾರಿ ಹುಮೇರಾಜಬಿನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ಕೃಷಿಕ ರಮೇಶ್ ಮಯ್ಯ ಸಸ್ಯಸಂರಕ್ಷಣಾ ಪದ್ದತಿಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಬ್ರಹ್ಮಾವರ ಕೆವಿಜಿ ವಿಜ್ಞಾನ ಕೇಂದ್ರದ ವಿಜ್ಞಾನಿ ಸಂತೋಷ್, ಡಾ| ಬಸಮ್ಮ, ಮಧುಮಾಲಾ, ಸುನಿಲ್, ಪಶುಸಂಗೋಪಣಾ ವೈದ್ಯಾಧಿಕಾರಿ ಡಾ| ರಾಜವರ್ಮ, ಕೃಷಿ ಇಲಾಖೆಯ ಸಮುದಾಯ ಸಹಾಯಕ ಮುಳ್ಳೂರು, ಸಿಆರ್‌ಪಿ ಜಯಂತ್ ಮತ್ತಿತರ ಅಧಿಕಾರಿಗಳು, ರೈತರು, ಗ್ರಾಮಸ್ಥರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.