ಕಳಿಯ : ಬೈಕಿನಿಂದ ಬಿದ್ದು ಓರ್ವ ಮಹಿಳೆ ಮೃತ್ಯು

ನ್ಯಾಯತರ್ಪು: ಇಲ್ಲಿಯ ನಾಳ ಸಮೀಪದ ಗೋವಿಂದೂರು ಎಂಬಲ್ಲಿ ಬೈಕ್‌ನಲ್ಲಿ ಸಂಚರಿಸುತ್ತಿರುವ ಸಂದರ್ಭದಲ್ಲಿ ಮಹಿಳೆಯೋರ್ವರು ರಸ್ತೆಗೆ ಎಸೆಯಲ್ಪಟ್ಟು ಗಂಭಿರ ಗಾಯಗೊಂಡು ಮೃತಪಟ್ಟ ಘಟನೆ ಆ.1 ರಂದು ವರದಿಯಾಗಿದೆ.
ಕಳಿಯ ಗ್ರಾಮದ ಬಟ್ಟೆಮಾರು ನಿವಾಸಿ ಆದಂ ರವರ ಧರ್ಮಪತ್ನಿ ಬೀಪಾತುಮ್ಮ(55.ವ) ಘಟನೆಯಲ್ಲಿ ಮೃತಪಟ್ಟ  ದುರ್ದೈವಿ.
ಬೀಪಾತುಮ್ಮರವರು ಔಷಧ ತರಲೆಂದು ತಮ್ಮ ಪುತ್ರನ ಜೊತೆಯಲ್ಲಿ ಬೈಕಿನಲ್ಲಿ ಕಲ್ಲೇರಿಗೆ ತೆರಳಿದ್ದು, ಅಲ್ಲಿಂದ ವಾಪಾಸ್ಸಾಗುವ ಸಂದರ್ಭದಲ್ಲಿ ಗೋವಿಂದೂರು ಸಮೀಪ ಬೈಕಿನಿಂದ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಸ್ಥಳೀಯರ ಸಹಾಯದಿಂದ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದು, ಅಷ್ಟರಲ್ಲಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಬೀಪಾತುಮ್ಮ ರವರ ಪತಿ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಎರಡು ದಿನಗಳ ಹಿಂದೆಯಷ್ಟೆ ಊರಿಗೆ ಬಂದಿದ್ದರು. ಮೃತರು ಪತಿ ಆದಂ, ಐವರು ಪುತ್ರರು , ಓರ್ವ ಪುತ್ರಿ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.
ಮೃತರ ಮರಣೋತ್ತರ ಪರೀಕ್ಷೆಯನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ನಡೆಸಲಾಯಿತು. ಈ ಸಂಬಂಧ ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.