ಮಲವಂತಿಗೆಯಲ್ಲಿ ನದಿ ತಿರುವು ನಡೆದಿಲ್ಲ: ಪಿಡಬ್ಲ್ಯುಡಿ ಇಲಾಖೆಯಿಂದ ವರದಿ ತರಿಸಿ ಕ್ರಮ

Advt_NewsUnder_1
Advt_NewsUnder_1
Advt_NewsUnder_1

ಮಲವಂತಿಗೆ: ಇಲ್ಲಿನ ಗ್ರಾಮದ ಮೂಲಕ ಹರಿದು ಬರುವ ನೇತ್ರಾವತಿ ನದಿಗೆ ಗುಂಪಕಲ್ಲು ಎಂಬಲ್ಲಿ ಸ್ಥಳೀಯ ನಿವಾಸಿಯೊಬ್ಬರು ಜೆಸಿಬಿ ಮೂಲಕ ನದಿ ತೀರಕ್ಕೆ ಅಕ್ರಮ ಪ್ರವೇಶ ಮಾಡಿ, ನದಿಯ ಸಾಂಪ್ರದಾಯಿಕ ಹರಿವನ್ನು ತಡೆಗಟ್ಟಿ ನದಿಯ ದಿಕ್ಕನ್ನು ಇನ್ನೊಂದೆಡೆಗೆ ತಿರುಗಿಸಿದ್ದಾರೆಂಬ ದೂರಿನ ಹಿನ್ನೆಲೆಯಲ್ಲಿ ತಹಶಿಲ್ದಾರ್ ಗಣಪತಿ ಶಾಸ್ತ್ರಿ ಅವರು ಸ್ಥಳ ಪರಿಶೀಲನೆ ನಡೆಸಿದ್ದು, ಮೇಲ್ನೋಟಕ್ಕೆ ಅಲ್ಲಿ ನದಿ ತಿರುವಿನಂತಹಾ ಪ್ರಕರಣ ಕಂಡು ಬಂದಿಲ್ಲ.
ಈ ಬಗ್ಗೆ ಲೋಕೋಪಯೋಗಿ ಇಲಾಖೆಯ ವರಿಂದ ವರದಿ ಕೇಳಲಾಗಿದೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕ ದೂರಿನ ಬಗ್ಗೆ ಪ್ರತಿಕ್ರೀಯಿಸಿರುವ ಸ್ಥಳೀಯ ಕೃಷಿಕ ರಾಘವ ಗೌಡ ಅವರು, ತನಗಿರುವ ಜಾಗದ ಪೈಕಿ 20 ಸೆಂಟ್ಸ್‌ನಷ್ಟು ಭೂಮಿ ನೀರಿನ ಕೊರೆತಕ್ಕೆ ಈಗಾಗಲೇ ಹೋಗಿದೆ. ಆ ಹಿನ್ನೆಲೆಯಲ್ಲಿ ಪಕ್ಕದ ನದಿಯನ್ನು ಮಳೆಗಾಲ ಪೂರ್ವವಾಗಿಯೆ ಸ್ವಲ್ಪ ಆಳ ಮಾಡಿ ಸರಾಗ ನೀರು ಹರಿಯುವಂತೆ ಮಾಡಿಕೊಡಲಾಗಿದೆ. ಅಲ್ಲಿಂದ ತೆಗೆದ ಮಣ್ಣನ್ನು ನಮ್ಮ ಜಾಗದ ಕಡೆಗೇ ಹಾಕಲಾಗಿದ್ದು ಯಾರಿಗೂ ತೊಂದರೆ ಮಾಡಿರುವುದಿಲ್ಲ ಎಂದು ಸ್ಪಷ್ಟೀಕರಿಸಿದ್ದಾರೆ.
ಸ್ಥಳ ಪರಿಶೀಲನೆ ಬಳಿಕ, ಸದ್ರಿ ನದಿ ಹರಿವು ಮತ್ತು ದಿಕ್ಕಿನ ಬಗ್ಗೆ ಪಿಡಬ್ಲ್ಯುಡಿ ಇಲಾಖೆ ಇಂಜಿನಿಯರ್ ಗಳಿಂದ ವರದಿ ಕೇಳಿದ್ದು ಅಂತೆಯೇ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ತಹಶಿಲ್ದಾರ್ ತಿಳಿಸಿದ್ದಾರೆ. ಸರಕಾರಿ ಜಾಗ ಅತಿಕ್ರಮಣ, ನದಿ ಪರಂಬೋಕು ಬಳಕೆಗೆ ಯಾರಿಗೂ ಅವಕಾಶವಿಲ್ಲ. ಹಾಗೆ ಮಾಡಿದಲ್ಲಿ ಅಂತವರ ವಿರುದ್ಧ ಕ್ರಮತೆಗೆದು ಕೊಳ್ಳಲಾಗುವುದು ಎಂದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.