ಬೆಳ್ತಂಗಡಿ ಸೋಶಿಯಲ್ ಮೀಡಿಯಾದಲ್ಲಿ ಈ ವಾರ

ನೇತ್ರಾವತಿ ನದಿಯಲ್ಲಿ ಸಿದ್ದಾರ್ಥ್ ಆತ್ಮಹತ್ಯೆ
ಮಂಗಳೂರು ಉಳ್ಳಾಲದಲ್ಲಿ ಕೆಫೆ ಕ್ವಾಫಿ ಡೇ ಉದ್ಯಮಿ ಸಿದ್ಧಾರ್ಥ ಅವರ ನಿಗೂಢ ಕಣ್ಮರೆ ಮತ್ತು ಬಳಿಕ ನೇತ್ರಾವತಿ ನದಿಯಲ್ಲಿ ನಡೆದ ಕಾರ್ಯಾಚರಣೆ ವೀಡಿಯೋ ಮತ್ತು ಫೋಟೋಗಳು ಜು. 30 ಮತ್ತು 31 ರಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಪ್ರಚಾರ ಪಡೆಯಿತು.
ಮೃತದೇಹದ ಶೋಧ ಕಾರ್ಯದ ನಡುವೆಯೂ ಸಿದ್ಧಾರ್ಥ ಅವರು, ಹೊಳೆಗೆ ಹಾರಿರದೆ ಬೇರೆ ವಾಹನದಲ್ಲಿ ತೆರಳಿದ ಕೇರಳ ರಾಜ್ಯದ ಮೂಲಕ ವಿದೇಶಕ್ಕೆ ಹೋಗಿರಬಹುದು ಎಂದೂ ಜನ ನವ ಮಾಧ್ಯಮಗಳಲ್ಲಿ ಚರ್ಚಿಸುತ್ತಿದ್ದುದು ಕಂಡು ಬಂತು. ಈ ನಡುವೆ ಅವರ ಮೃತದೇಹದ ಶೋಧಕ್ಕಾಗಿ ನಿಯೋಜಿಸಿದ ತಂಡದಲ್ಲಿ ತಾಲೂಕಿನ ಖ್ಯಾತ ಈಜುಗಾರ ಮುಹಮ್ಮದ್ ಬಂದಾರು ಅವರೂ ತೋಡಗಿಸಿಕೊಂಡಿದ್ದ ವೀಡಿಯೋ, ಫೋಟೋ ಕೆಲವರು ಟ್ರೋಲ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಚಾಯ್‌ವಾಲಾ – ಕಾಫಿವಾಲಾ…
ಕಾಫಿ ಡೇ ಉದ್ಯಮಿ, ಬಹುಕೋಟಿ ಆಸ್ತಿವಂತ ಸಿದ್ಧಾರ್ಥ್ ಅವರ ಸಾವಿನ ಸುತ್ತ ಐಟಿ ಅಧಿಕಾರಿಗಳ ಕಿರುಕುಳದ ಆರೋಪವೂ ಜೀವ ಪಡೆದುಕೊಂಡಿದೆ. ಈ ನಡುವೆ ಮೇಲಿನ ವ್ಯಂಗ್ಯಚಿತ್ರವೊಂದನ್ನು ಕೆಲವರು ಸೋಷಿಯಲ್ ಮೀಡಿಯಾಗಳಲ್ಲಿ ಟ್ರೋಲ್ ಮಾಡಿದ್ದಾರೆ. ಐಟಿ ದಾಳಿಯ ಸಂಕೇತದ ಸಂದೇಶ ನೀಡುವ ರೀತಿಯಲ್ಲಿ ಪ್ರಧಾನಿ ಮೋದೀಜಿ ಅವರು ಚಹಾವನ್ನು ಸಿದ್ದಾರ್ಥ್ ಅವರ ತಲೆಮೇಲೆ ಸುರಿದಂತೆ ಚಿತ್ರಿಸಿ ಅದಕ್ಕೆ ಬರಹವೊಂದನ್ನೂ ಟ್ಯಾಗ್ ಮಾಡಿ ಪ್ರಕಟಿಸಿದ್ದಾರೆ.

 

ಸ್ಪೀಕರ್ ಸೌಂಡ್ ಕೇಳೋಕೆ ಎಲ್ರೀಗೂ ತುಂಬಾನೇ ಕಿರಿಕಿರಿ..
ಯಾಕೆಂದ್ರೆ ಇನ್ಮುಂದೆ ಸ್ಪೀಕರ್ ಕಾಗೆ ರೀ..

ಹೀಗೆಂದು ವಾಟ್ಸ್ ಆಪ್‌ಗಳಲ್ಲಿ ಪ್ರಾಸಬದ್ಧ ಹಾಸ್ಯ ಚುಟುಕೊಂದು ಹರಿದಾಡುತ್ತಿದೆ. ಕರ್ನಾಟಕ ವಿಧಾನ ಸಭೆಯ ಸ್ಪೀಕರ್ ಆಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನೇಮಕಗೊಳ್ಳುತ್ತಿರುವಂತೆ ಈ ಕವನವನ್ನು ಯಾರೋ ಹುಟ್ಟುಹಾಕಿದ್ದಾರೆ.

 

 

ಸೇತುವೆ ಏರಿದ ಬಸ್ಸು
ಕಲ್ಮಂಜ ಗ್ರಾಮದ ನಿಡಿಗಲ್ ಸೇತುವೆಯಲ್ಲಿ 1993 ರಲ್ಲಿ ಬೆಳ್ತಂಗಡಿ -ನೆರಿಯ ಸರಕಾರಿ ಬಸ್ಸೊಂದು ಸೇತುವೆ ತಡೆಬೇಲಿ ಕಮಾನಿನ ಮೇಲೆ ಹತ್ತಿದ 25 ವರ್ಷಗಳ ಹಿಂದಿನ ಅಪಘಾತದ ವರದಿ ಪ್ರಕಟಿತ ಪೇಪರ್ ಕಟ್ಟಿಂಗ್ ಅನ್ನು ಕೆಲವರು ಸೋಷಿಯಲ್ ಮೀಡಿಯಾ ಗ್ರೂಪ್‌ಗಳಲ್ಲಿ ಹಂಚಿಕೊಂಡಿದ್ದಾರೆ. ಆಶ್ಚರ್ಯಕರವಾಗಿ ಅಂದು ಘಟಿಸಿದ್ದ ಈ ಅಪಘಾತದ ನೆನಪನ್ನು ಜನತೆಗೆ ಮತ್ತೆ ಹುಟ್ಟುಹಾಕಿದ್ದಾರೆ.

ಅಳದಂಗಡಿ ಬಿಎಸ್‌ಎನ್‌ಎಲ್ ಟವರ್‌ಗೆ ಡೀಸಿಲ್ ಹಾಕಲು ದೇಣಿಗೆ!
ಬಿಎನ್‌ಎಲ್ ನೆಟ್‌ವರ್ಕ್ ಪ್ರಾಬ್ಲೆಂ ಅದರ ಗ್ರಾಹಕರನ್ನು ಕೆಲ ದಿನಗಳಿಂದ ಇನ್ನಿಲ್ಲದಂತೆ ಕಾಡುತ್ತಿದೆ. ಈ ನಡುವೆ ಗ್ರಾಮಾಂತರ ಭಾಗದಲ್ಲಿ ಮೊಬೈಲ್ ಟವರ್‌ಗಳು ಇರುವಲ್ಲಿ ವಿದ್ಯುತ್ ಕೈ ಕೊಟ್ಟರೆ ಅಲ್ಲಿರುವ ಜನರೇಟರ್ ಚಾಲೂಗೊಳಿಸಲು ಇಲಾಖೆಯಲ್ಲಿ ಡೀಸಿಲ್ ವ್ಯವಸ್ಥೆ ಇಲ್ಲ ಎಂಬ ಆಕ್ರೋಶವೂ ಗ್ರಾಹಕರ ದೂರಿನ ಅಂಶಗಳಲ್ಲಿ ಒಂದು. ಈ ನಡುವೆ ಅಳದಂಗಡಿ ಬಿಎಸ್‌ಎನ್‌ಎಲ್ ಟವರ್‌ಗೆ ಡೀಸಿಲ್ ಹಾಕಲು ದೇಣಿಗೆ! ಎಂಬ ಹಣ ಸಂಗ್ರಹದ ಬಾಕ್ಸೊಂದನ್ನು ಒಂದೆಡೆ ಜನ ಓಡಾಟದ ಬಳಿ ಇಟ್ಟಿರುವ ಫೋಟೋವೊಂದನ್ನು ಜನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನಿಮಗಿದು ಗೊತ್ತೇ
ಎಂಬ ಶಿರ್ಷಿಕೆಯಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ರಸ್ತೆಗಳಲ್ಲಿರುವ ವಿಭಾಜಕ ಮಾರ್ಕ್‌ಗಳಲ್ಲಿ ಚಾಲಕರಿಗೆ ನೀಡುವ ಚಾಲನಾ ನಿಯಮ ಸಂದೇಶದ ಫೋಟೊ ವೊಂದು ಈ ವಾರ ವಾಟ್ಸ್‌ಆಪ್ ಗಳಲ್ಲಿ ಹರಿದಾಡಿದೆ. ಇದರಿಂದ ಜನತೆಗೆ ಉತ್ತಮ ಮಾಹಿತಿ ಕೂಡ ಲಭಿಸಿದದಂತಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.