HomePage_Banner_
HomePage_Banner_
HomePage_Banner_

ಕಟ್ಟದಬೈಲು ಶಾಲೆಯಲ್ಲಿ ನಿವೃತ್ತ ಯೋಧರಿಗೆ ಗೌರವಾರ್ಪಣೆ

ಓಡಿಲ್ನಾಳ: ಇಲ್ಲಿನ ಕಟ್ಟದಬೈಲು ಸ.ಹಿ.ಪ್ರಾ. ಶಾಲೆಯಲ್ಲಿ ಜು.28 ರಂದು ಶಾಲೆಯ ವಜ್ರಮಹೋತ್ಸವ ಆಚರಣೆಯ ಪ್ರಯುಕ್ತ ವಜ್ರ ಸಿಂಚನ ಜುಲಾಯಿ ತಿಂಗಳ ಕಾರ್ಯಕ್ರಮದಂತೆ , 20ನೇ ಕಾರ್ಗಿಲ್ ವಿಜಯೋತ್ಸವ ಹಾಗೂ ನಿವೃತ್ತ ಯೋಧರನ್ನು ಅಭಿನಂದಿಸುವ ಕಾರ್ಯಕ್ರಮ ನಡೆಯಿತು.


ಭಾರತೀಯ ನೌಕಾಸೇನೆಯ ನಿವೃತ್ತ ಪೆಟ್ಟಿ ಆಫೀಸರ್, ಬೆಳ್ತಂಗಡಿ ತಹಶೀಲ್ದಾರ ಗಣಪತಿ ಶಾಸ್ತ್ರಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. 20ನೇ ಕಾರ್ಗಿಲ್ ವಿಜಯೋತ್ಸವದ ಪ್ರಯುಕ್ತ ಭಾರತೀಯ ಭೂಸೇನಾ ದಂಡ ನಾಯಕ ಜನರಲ್ ಬಿಪಿನ್ ರಾವತ್‌ರವರು ಬಿಡುಗಡೆಗೊಳಿಸಿದ ಶೋಕ ಗೀತೆಯನ್ನು ಪ್ರದರ್ಶಿಸಿ, ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಯೋಧರನ್ನು ಶಾಲಾ ವಿದ್ಯಾರ್ಥಿಗಳು ಪೂರ್ಣಕುಂಭದೊಂದಿಗೆ ಸ್ವಾಗತಿಸಿ ಗೌರವ ವಂದನೆಯನ್ನು ಸಲ್ಲಿಸಿದರು. ಕಾರ್ಯಕ್ರಮದಲ್ಲಿ 20 ಮಂದಿ ನಿವೃತ್ತ ಯೋಧರನ್ನು ಶಾಲಾ ಸ್ಥಾಪಕಾಧ್ಯಕ್ಷ ಪಿ.ಶಂಕರ್ ಭಟ್, ಜೈನ್ ಶಾಲಾ ಸ್ಥಾಪಕರ ಪುತ್ರ ಸತ್ಯಮೂರ್ತಿ ಜೈನ್, ಸ್ವರ್ಣ-ವಜ್ರನಿಧಿ ಸಮಿತಿ ಅಧ್ಯಕ್ಷ ವಾಸುದೇವ ರಾವ್.ಕೆ, ಎಸ್.ಡಿ.ಎಂ.ಸಿ ಅಧ್ಯಕ್ಷ ವಸಂತ ಶೆಟ್ಟಿ ಮಠ ಇವರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ನಿವೃತ್ತ ಮೇಜರ್ ಜನರಲ್, ಬೆಳ್ತಂಗಡಿ ಮಾಜಿ ಸೈನಿಕ ಸಂಘದ ಗೌರವಾಧ್ಯಕ್ಷ ಎಂ.ವಿ. ಭಟ್, ಭಾರತೀಯ ನೌಕಾಸೇನೆಯ ನಿವೃತ್ತ ಚೀಫ್ ಪೆಟ್ಟಿ ಆಫಿಸರ್, ಮಾಜಿ ಸೈನಿಕ ಸಂಘದ ಅಧ್ಯಕ್ಷ ಶ್ರೀಕೃಷ್ಣ ಭಟ್, ಭಾರತೀಯ ಭೂಸೇನೆಯ ನಿವೃತ್ತ ಸಾರ್ಜಂಟ್, ಮಾಜಿ ಸೈನಿಕ ಸಂಘದ ಕಾರ್ಯದರ್ಶಿ ಹೆರಾಲ್ಡ್ ಸಿಕ್ವೇರಾ, ಭಾರತೀಯ ವಾಯುಸೇನೆ ನಿವೃತ್ತ ಸಾರ್ಜಂಟ್, ಮುನ್ನೂರು ಗ್ರಾಮ ಪಂಚಾಯತ್ ಪಿಡಿಒ ರವೀಂದ್ರ ರಾಜೀವ ನಾಯಕ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಎಡ್ವರ್ಡ್ ಡಿಸೋಜ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಮೊಹಮ್ಮದ್ ಫಾರೂಕ್ .ಎಚ್. ಕಾರ್ಯಕ್ರಮ ನಿರ್ವಹಿಸಿ, ವಸಂತ ಶೆಟ್ಟಿ ಧನ್ಯವಾದವಿತ್ತರು. ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಹಾಗೂ ಶಿಕ್ಷಕರು ಸಹಕರಿಸಿದರು. ನಂತರ ರಾಷ್ಟ್ರಪ್ರೇಮವನ್ನು ಬೆಳೆಸುವ ಬಾರ್ಡರ್ ಹಿಂದಿ ಚಲನಚಿತ್ರವನ್ನು ಪ್ರದರ್ಶಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.