ಶಾಲೆಗಳಲ್ಲಿ ಸುರಕ್ಷಾ ಸಮಿತಿ ರಚನೆಗೆ ಆದೇಶ

ಮಕ್ಕಳ ಭದ್ರತೆಯ ಹಿನ್ನಲೆರಚಿಸದಿದ್ದಲ್ಲಿ ಸೂಕ್ತ ಕ್ರಮ

ಬೆಳ್ತಂಗಡಿ: ಶಾಲಾ ಮಕ್ಕಳ ಭದ್ರತೆಯ ದೃಷ್ಟಿ ಯಿಂದ ಎಲ್ಲಾ ಖಾಸಗಿ ಶಾಲೆಗಳಲ್ಲಿ ಅ.14ರ ಒಳಗಾಗಿ ಶಾಲಾ ವಾಹನ ಸುರಕ್ಷಾ ಸಮಿತಿಯನ್ನು ಕಡ್ಡಾಯವಾಗಿ ರಚಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶನ ನೀಡಿದೆ.
ನಿಗದಿತ ಕಾಲಮಿತಿಯೊಳಗೆ ಸಮಿತಿ ರಚಿಸದಿದ್ದರೆ ಕಾನೂನಾತ್ಮಕವಾಗಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಇಲಾಖೆಯ ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮಾಹಿತಿ ಪಡೆದು ಆ.20ರೊಳಗೆ ಸಂಪೂರ್ಣ ವಿವರವನ್ನು ಇಲಾಖೆಯ ಕೇಂದ್ರ ಕಚೇರಿಗೆ ಕಳುಹಿಸಿಕೊಡಬೇಕು ಎಂದು ಇಲಾಖೆ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರಿಗೆ ಸೂಚನೆ ನೀಡಿದೆ.
ಕರ್ನಾಟಕ ಮೋಟಾರು ವಾಹನ ನಿಯಮಗಳು-1989ಕ್ಕೆ ತಂದಿರುವಂತೆ ಶಾಲಾ ಮಕ್ಕಳ ವಾಹನ ನಿಯಮ 2012(4)ರಲ್ಲಿ ತಿಳಿಸಿರುವಂತೆ ಶಾಲಾ ಮುಖ್ಯಸ್ಥರು ಕಡ್ಡಾಯವಾಗಿ ಶಾಲಾ ವಾಹನ ಸುರಕ್ಷಾ ಸಮಿತಿಯನ್ನು ರಚನೆ ಮಾಡಲೇ ಬೇಕು. ಇದರ ಬಗ್ಗೆ ಪೂರ್ಣ ಜವಾಬ್ದಾರಿಯನ್ನು ಜಿಲ್ಲಾ ಉಪನಿರ್ದೇಶಕರಿಗೆ ನೀಡಲಾಗಿದೆ.
ಸಮಿತಿಯಲ್ಲಿ ಶಾಲಾ ಶಿಕ್ಷಕರು ಅಥವಾ ಆಡಳಿತ ಮಂಡಳಿಯ ಸದಸ್ಯರು, ವಿದ್ಯಾರ್ಥಿಗಳ ಪಾಲಕರು, ಷೋಷಕರು ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳು ಸದಸ್ಯರಾಗಿರುತ್ತಾರೆ. ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳಲ್ಲಿ ಶಾಲಾ ವಾಹನದ ನೋಂದಣಿ ದಾಖಲೆಗಳು, ಪ್ರಮಾಣಪತ್ರ, ಚಾಲನಾ ಪರವಾನಿಗೆ ಪತ್ರ, ತುರ್ತು ನಿರ್ಗಮನ ದ್ವಾರ, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಸಹಿತ ಶಾಲಾ ವಾಹನ ಮಕ್ಕಳ ಸುರಕ್ಷತೆಗೆ ಬೇಕಾದ ಎಲ್ಲಾ ನಿಯಮಗಳನ್ನು ಪಾಲಿಸುತ್ತಿದೆಯೇ ಎಂಬುದರ ಮೇಲ್ವಿಚಾರಣೆಯನ್ನು ನೇಮಕಗೊಳ್ಳುವ ಈ ಸಮಿತಿ ಮಾಡಲಿದೆ.
ಸರಕಾರದ ಈ ಅಧಿಸೂಚನೆಯಿಂದ ಶಾಲಾ ಮಕ್ಕಳ ಸುರಕ್ಷತೆ ಜೊತೆಗೆ ಖಾಸಗಿ ಒಪ್ಪಂದ ವಾಹನಗಳಲ್ಲಿ ಶಾಲಾ ಮಕ್ಕಳಿಗೆ ಸಾರಿಗೆ ಸೌಲಭ್ಯ ಒದಗಿಸುವ ಖಾಸಗಿ ಪ್ರವರ್ತಕರಿಗೂ ಅನುಕೂಲಕರವಾಗಿದೆ. ಕರ್ನಾಟಕ ಮೋಟಾರು ವಾಹನಗಳ ತೆರಿಗೆ ಕಾಯಿದೆ 1957ರ ಕಲಂ 16ರ ಪ್ರಕಾರ ಈ ವಾಹನಗಳಿಗೆ ಷರತ್ತಿಗೊಳಪಟ್ಟು ಶೇ 50 ತೆರಿಗೆ ವಿನಾಯಿತಿ ಇದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.