ಕನಿಷ್ಟ ಖರ್ಚಿನಲ್ಲಿ ಮಳೆಕೊಯ್ಲು ಮಾಡುತ್ತಿರುವ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕರ್ತರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕಳೆದ ಬಾರಿಯ ಬೇಸಿಗೆಯ ಬಿಸಿಲ ತಾಪ ಜನರ ಮೈ ಬಿಸಿಯೇರಿಸಿದ್ದೂ ಮಾತ್ರವಲ್ಲದೆ ಆಂತರಿಕ ಒಳಮನಸ್ಸಿನ ಮೇಲೂ ತಾಪ ಬೀಳಿಸಿದೆ. ಇದೀಗ ಮಳೆ ಬರಲಾರಂಭಿಸಿ ಒಂದೂವರೆ ತಿಂಗಳು ಕಳೆದರೂ ಕೂಡ ಇಂದೂ ತಾಲೂಕಿನ ಬಹುತೇಕ ಮನೆಗಳಲ್ಲಿ ಕಳೆದ ಬೇಸಿಗೆಯ ಬಿಸಿಲ ಬೇಗೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ಇದೆಲ್ಲದರ ಪರಿಣಾಮವಾಗಿ ಎಲ್ಲರೂ ಜಲ ಮರುಪೂರಣ, ಮಳೆಕೊಲು, ಜಲಮೂಲಗಳ ರಕ್ಷಣೆ ಇತ್ಯಾಧಿ ವಿಚಾರಗಳ ಬಗ್ಗೆ ಮಾತನಾಡ ಲಾರಂಭಿಸಿದ್ದಾರೆ. ತಮ್ಮ ಸುತ್ತ ಮುತ್ತಲ ಭೂಮಿ, ಮನೆ ಮೇಲ್ಚಾವಣಿಯಲ್ಲಿ ಯತೇಚ್ಚವಾಗಿ ಬಿದ್ದು ಹಾಗೇ ಸುಮ್ಮನೇ ಹರಿದು ನದಿ, ಸಮುದ್ರ ಸೇರುವ ಮಳೆಯ ಕೋಟ್ಯಾಂತರ ಹನಿಗಳ ರಕ್ಷಣೆಗೆ ತನ್ನದೇ ಶೈಲಿಯಲ್ಲಿ ಕಾರ್ಯ ಯೋಜನೆ ರೂಪಿಸಲು ಇದು ಪ್ರೇರಣೆ ಒದಗಿಸಿದೆ. ಇದೆಲ್ಲದರ ನಡುವೆ ಗ್ರಾ. ಯೋಜನೆಯ ಐವರು ಪ್ರಮುಖ ಕಾರ್ಯಕರ್ತರು ತಾವೇ ಸ್ವತಃ ಮುಂದೆ ಬಂದು ಅತ್ಯಂತ ಸರಳ ರೀತಿಯಲ್ಲಿ ಮಳೆ ನೀರು ಉಳಿಸುವ, ಮರು ಪೂರಣ ಮಾಡುವ ರೀತಿಯೊಂದನ್ನು ಪರಿಚಯಿಸಿದ್ದು, ಇದರ ಮೂಲಕ  ಪ್ರತೀ ಮನೆಯೂ ಮಳೆಕೊಲು ಮಾಡುವಂತಾಗಬೇಕು ಎಂಬ ಪರಿಕಲ್ಪನೆಗೆ ಜೀವ ತುಂಬುವ ಹೆಜ್ಜೆ ಇಟ್ಟಿದ್ದಾರೆ.

1-2 ಸಾವಿರದಲ್ಲಿ ಮಳೆನೀರು ಕೊಯ್ಲು: ಸ್ಲಾಬ್ ಅಥವಾ ಹೆಂಚಿನ ಮನೆಯೇ ಇರಲಿ ಅದರ ಮೇಲ್ಚಾವಣಿಯ ಮೇಲೆ ಬೀಳುವ ಮಳೆ ನೀರನ್ನು ಒಂದೇ ಪೈಪ್ ಮೂಲಕ ಸಹಜವಾಗಿ ಕೆಳಗೆ ಇಟ್ಟಿರುವ 200 ಲೀಟರ್‌ನ ಡ್ರಂನ ಒಳಗೆ ಬೀಳುವಂತೆ ಮಾಡಿ ಅಲ್ಲಿಂದ ಅತ್ಯಂತ ಸರಳ ರೀತಿಯಲ್ಲಿ ಫಿಲ್ಟರ್ ಮಾಡಿ ನೇರವಾಗಿ ಬಾವಿ, ಅಥವಾ ಕೊಳವೆ ಬಾವಿಗೆ ಮರುಪೂರಣ ಮಾಡುವ ಕಾರ್ಯ ಅನುಷ್ಠಾಸುತ್ತಿದ್ದಾರೆ.

ಮೊದಲ ಹಂತದಲ್ಲಿ ರಾಜ್ಯದಲ್ಲಿ 5 ಸಾವಿರ ಸರಳ ಘಟಕದ ಗುರಿ:

ಇದು ನೀರಿಂಗಿಸುವ ಅತ್ಯಂತ ಸರಳ ವಿಧಾನ ಎಂದು ನಾವು ಅಂದುಕೊಂಡಿದ್ದೇವೆ. ಕೇವಲ 1 ರಿಂದ 2 ಸಾವಿರ ಖರ್ಚಿನಲ್ಲಿ ಬಡವ ಶ್ರೀಮಂತ ಎಂಬಭೇದವಿಲ್ಲದೆ ಪ್ರತಿಯೊಬ್ಬರೂ ಈ ಘಟಕ ಮಾಡಿಕೊಳ್ಳಬಹುದು. ಈ ಬಗ್ಗೆ ಗ್ರಾ. ಯೋಜನೆಯವರು ಮಾತ್ರವಲ್ಲದೆ ಯಾರೇ ಆಸಕ್ತರು ಮುಂದೆ ಬಂದರೆ ನಮ್ಮ ಕಾರ್ಯಕರ್ತರು ತರಬೇತಿ ನೀಡಲು ಸಿದ್ಧ. ಇದೀಗ ನಾವು ಜಾರಿಗೆ ತಂದಿರುವ ಈ ಮಾದರಿಯನ್ನು ಗ್ರಾ. ಯೋಜನೆ ಮೂಲಕ ರಾಜ್ಯಾಧ್ಯಂದ ಮೊದಲ ಹಂತದಲ್ಲಿ 5 ಸಾವಿರ ಘಟಕ ಅನುಷ್ಠಾನಿಸಲು ಗುರಿಇಟ್ಟುಕೊಂಡು ಮುಂದಡಿಯಿಟ್ಟಿದ್ದೇವೆ.
-ಡಾ. ಎಲ್. ಹೆಚ್ ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು

ಅಚ್ಚು, ಮುಂಡಾಜೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.