ಮಹಡಿಯಿಂದ ಬಿದ್ದು ಸಾವು

ಉಜಿರೆ: ಜ್ವರದಿಂದ ಬಳಲುತ್ತಿದ್ದ ಉಜಿರೆಯ ರಾಧಾ ಟೆಕ್ಸ್‌ಟೈಲ್ಸ್‌ನ ಮಾಲಕರಾಗಿದ್ದ ಮಹೇಂದರ್(34ವ) ತೀವ್ರ ಅಸ್ವಸ್ಥಗೊಂಡು ಆಯ ತಪ್ಪಿ ಮಹಡಿಯಿಂದ ಬಿದ್ದು ಮೃತಪಟ್ಟ ಘಟನೆ   ಉಜಿರೆಯಲ್ಲಿ ಸಂಭವಿಸಿದೆ.
ಮೂಲತಃ ರಾಜಸ್ತಾನದವರಾದ ಇವರು ಬೆಳಾಲು ಕ್ರಾಸ್ ಸಮೀಪದ ಕುವೆಂಪು ನಗರದಲ್ಲಿದಲ್ಲಿ ವಾಸ್ತವ್ಯವಿದ್ದು, ವಾರಗಳಿಂದ ಜ್ವರ ಸಹಿತ ಇತರ ಆರೋಗ್ಯ ಸಮಸ್ಯೆಯಿಂದ ಬಳಲುತಿದ್ದರೆನ್ನಲಾಗಿದೆ.  ಅಂದು ಬೆಳಗ್ಗೆ 6.30ರ ವೇಳೆ ಎರಡನೇ ಮಹಡಿಯಲ್ಲಿ ನಿಂತು ವಾಂತಿ ಮಾಡುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದು ಈ ದುರ್ಘಟನೆ ನಡೆದಿದೆ. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.