ಮಚ್ಚಿನ ನಿವೃತ್ತ ಶಿಕ್ಷಕ ಪಿ.ಶ್ರೀಧರ ಭಟ್ ಪುಳಿಕಳ ನಿಧನ

ಮಚ್ಚಿನ: ಇಲ್ಲಿಯ ಪುಳಿಕಳ ನಿವಾಸಿ ನಿವೃತ್ತ ಶಿಕ್ಷಕ ಪಿ. ಶ್ರೀಧರ ಭಟ್ (78.ವ)ರವರು ಜು.27 ರಂದು ಸ್ವಗೃಹದಲ್ಲಿ ನಿಧನರಾದರು.ಇವರು ಆರಂಬೋಡಿ, ಕುವೆಟ್ಟು, ಮಚ್ಚಿನ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಸರಳ, ಸೌಜನ್ಯ ಸ್ವಭಾವದ ಇವರು ಉತ್ತಮ ಕೃಷಿಕರಾಗಿದ್ದು, ಬಳ್ಳಮಂಜ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭ ಹಾಗೂ ತುಳು ಶಿವಳ್ಳಿ ಸಭಾ ಮಚ್ಚಿನ ವಲಯದಿಂದ ಸನ್ಮಾನಿಸಲ್ಪಟ್ಟಿದ್ದರು.
ಮೃತರು ಪತ್ನಿ ಸೀತಾರತ್ನ, ಪುತ್ರರಾದ ರವಿಶಂಕರ್, ಹರೀಶ್, ಪುತ್ರಿಯರಾದ ನ್ಯಾಯವಾದಿ ವಿಜಯ, ಅನುರಾಧ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.