ಆಟಿಡೊಂಜಿ ದಿನ ವಿಶೇಷ ತುಳು ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

   

ಧರ್ಮಸ್ಥಳ: ತುಳುನಾಡು ಹಾಗೂ ತುಳು ಸಂಸ್ಕೃತಿಯ ವಿಶಿಷ್ಟ ಆಚರಣೆಗಳಲ್ಲಿ ಒಂದಾದ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಶ್ರೀ. ಧ.ಮಂ.ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ಆಯೋಜಿಸಲಾಗಿತ್ತು. ಗ್ರಾಮೀಣ ಪ್ರದೇಶಗಳಲ್ಲಿನ ಪ್ರಾಚೀನ ಸಂಪ್ರದಾಯ, ಆಚಾರ-ವಿಚಾರಗಳನ್ನು ಇಂದಿನ ಯುವಜನಾಂಗಕ್ಕೆ ಪುಟಾಣಿ ಮಕ್ಕಳ ಮೂಲಕ ತಿಳಿಯಪಡಿಸಿ ಅವರಲ್ಲಿ ಆಸಕ್ತಿ ಮೂಡಿಸುವ ಆಶಯದೊಂದಿಗೆ ಸದ್ರಿಕಾರ್ಯಕ್ರಮವನ್ನು ಪ್ರಹಸನದ ರೂಪದಲ್ಲಿ ನಿರೂಪಿಸಲಾಗಿತ್ತು.


ಶ್ರೀ.ಧ.ಮಂ.ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್‌ರವರು ಆಗಮಿಸಿ ವಿವಿಧ ಚಟುವಟಿಕೆಗಳನ್ನು ಪರಿಶೀಲಿಸಿ ಪ್ರೋತ್ಸಾಹಿಸಿ, ಕಾರ್ಯಕ್ರಮಕ್ಕೆ ಶುಭ ಕೋರಿದರು. ಈ ಒಂದು ದಿನದ ಕಾರ್ಯಕ್ರಮವನ್ನು ಎಲ್ಲರೂ ವರ್ಷಪೂರ್ತಿ ನೆನಪಿನಲ್ಲಿಟ್ಟುಕೊಂಡು ನಮ್ಮಉಡುಪಿ ಹಾಗೂ ದ.ಕ.ಜಿಲ್ಲೆಗಳ ವಿಶಿಷ್ಟತೆಗಳನ್ನು ಆಚರಿಸುವ ಮೂಲಕ ಕಾಪಾಡಬೇಕು ಎಂದು ಶ್ರೀ. ಧ.ಮಂ.ಟ್ರಸ್ಟ್‌ನ ಕಾರ್ಯದರ್ಶಿಗಳಾದ ಡಾ.ಬಿ. ಯಶೋವರ್ಮರವರು ದೀಪ ಪ್ರಜ್ವಲಿಸುವ ಮೂಲಕ ಈ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ತುಳು ಭಾಷೆ, ಸಾಹಿತ್ಯ ಮತ್ತು ಸಂಪ್ರದಾಯದ ಆಚರಣೆಗಳು ಸದಾ ಕಾಲಕ್ಕೂ ಶಾಶ್ವತವಾಗಿ ಮುಂದುವರಿಯಬೇಕೆಂಬ ತಮ್ಮಇಚ್ಛೆಯನ್ನು ಅಭಿವ್ಯಕ್ತಪಡಿಸಿದರು. ಅವರು ಕಾರ್ಯಕ್ರಮಗಳೆಲ್ಲವನ್ನೂ ಕೂಲಂಕುಶವಾಗಿ ಪರೀಕ್ಷಿಸಿ, ಪುಟಾಣಿಗಳನ್ನು ಪ್ರೋತ್ಸಾಹಿಸಿ, ಸ್ವತ: ಚೆನ್ನೆಮಣೆಯಾಟ ಆಡಿ ಆನಂದಿಸಿದರಲ್ಲದೆ, ಇನ್ನಿತರ ಸೃಜನಾತ್ಮಕ ಕಾರ್ಯ-ಚಟುವಟಿಕೆಗಳನ್ನು ಪ್ರಶಂಸಿಸಿ, ಹಿರಿಯ ಮತ್ತು ಕಿರಿಯ ವಿದ್ಯಾರ್ಥಿಗಳ ನಾಟಕಗಳ ಅಭಿನಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.


ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ತುಳು ನಾಡಿನ ಪ್ರಾಚೀನ ವಸ್ತುಗಳ ಪ್ರದರ್ಶನ ಏರ್ಪಡಿಸಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಸ್ತುಗಳನ್ನು ಗುರುತಿಸಿ ಹೆಸರಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ವಿಜೇತರಿಗೆ ಅಭ್ಯಾಗತರಾಗಿ ಆಗಮಿಸಿದ ಶಾಲಾ ಸಂಚಾಲಕರಾದ ಅನಂತಪದ್ಮನಾಭ ಭಟ್ ಮತ್ತು ಬಿ. ಭುಜಬಲಿ ಮತ್ತು ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿಗಳಾದ ಸೋಮಶೇಖರ ಶೆಟ್ಟಿ ಬಹುಮಾನ ನೀಡಿ, ಸಂತಸದ ನುಡಿಗಳನ್ನಾಡಿ ಪ್ರೋತ್ಸಾಹಿಸಿದರು.

ಆಟಿ ತಿಂಗಳ ಮಹತ್ವವನ್ನು ಬಿಂಬಿಸುವ ಭಿತ್ತಿ ಪತ್ರ ಪ್ರದರ್ಶನದೊಂದಿಗೆ ತುಳು ಗಾದೆಗಳು, ತುಳು ಹಾಡುಗಳು, ತುಳು ಭಾಷೆಯ ಪುಸ್ತಕಗಳ ಪ್ರದರ್ಶನ, ಸೋಬಾನ-ಪಾರ್ದನ ಗೀತೆಗಳು, ತುಳು ಪದಗಳ ಅರ್ಥಸಹಿತ ಕಲಿಕೆ, ದಿನ, ನಕ್ಷತ್ರ, ತಿಂಗಳು, ಸಂವತ್ಸರಗಳ ಹೆಸರುಗಳನ್ನು ತುಳುಭಾಷೆಯಲ್ಲಿ ಈ ಸಂದರ್ಭದಲ್ಲಿವಿದ್ಯಾರ್ಥಿಗಳಿಗೆ ಕಲಿಸಲಾಯಿತು. ತುಳು ನಾಡಿನ ಗ್ರಾಮೀಣ ಆಟಗಳಾದ ಕಲ್ಲಾಟ, ಜಿಬಿಲಿ, ಚೆನ್ನೆಮಣೆ, ಗೋಲಿ, ಕವಡೆ (ಪಗಡೆ) ಇತ್ಯಾದಿ ಆಟಗಳನ್ನು ಆಡಿ ವಿದ್ಯಾರ್ಥಿಗಳು ಅತ್ಯಧಿಕ ಸಂತಸಗೊಡರು. ಮಾವಿನ ಎಲೆ, ಅಡಿಕೆಹಾಳೆ ಮತ್ತುತೆಂಗಿನಗರಿಗಳ ಹೂಗುಚ್ಛ ತಯಾರಿ, ತೆಂಗಿನಗರಿಯ ತಟ್ಟಿ ತಯಾರಿಸಿ, ಶಾಲಾ ಮುಂಭಾಗದ ತಳಿರು-ತೋರಣ ಹಾಗೂ ವೇದಿಕೆ ಅಲಂಕಾರದಲ್ಲಿ ಸಾಂಪ್ರದಾಯಿಕವಾಗಿ ಬಳಸಲಾಗಿತ್ತು.


ಸಾಂಪ್ರದಾಯಿಕ ಉಡುಗೆ-ತೊಡುಗೆಗಳು ಅಂದರೆ ಸೀರೆ, ಲಂಗ-ದಾವಣಿ, ಧೋತಿ-ಶಲ್ಯ ಇತ್ಯಾದಿಗಳಲ್ಲಿ ಶಾಲೆಗೆ ಆಗಮಿಸಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರಲ್ಲದೆ, ತುಳುಭಾಷೆಯಲ್ಲಿವಿಶೇಷ ಫಟಾಫಟ್ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ತುಳುಭಾಷೆಯಲ್ಲಿ ಪುರಾಣದ ಕಥೆಗಳನ್ನು ( ರಾಮಾಯಣ- ಮಹಾಭಾರತ) ಆಲಿಸುವುದರೊಂದಿಗೆ ತುಳುನಾಡಿನ ಖಾದ್ಯಗಳನ್ನು ತಿಂದು ಬಾಯಿ ಚಪ್ಪರಿಸಿದರು.


ತುಳುನಾಡಿನ ತಿಂಡಿ-ತಿನಿಸುಗಳ ಪ್ರದರ್ಶನವು ಮಾವಿನ ಹಣ್ಣಿನ ಪಾಯಸ, ಹಲಸಿನ ಹಣ್ಣಿನ ಕಡುಬು, ಮುಳ್ಕ, ಬಾಳೆ ಹೂವಿನ ಚಟ್ನಿ , ಕೆಸುವಿನ ಎಲೆಯ ಪತ್ರೊಡೆ ಮತ್ತು ಚಟ್ನಿ, ಚೊಗಟೆ ಸೊಪ್ಪಿನ ದೋಸೆ, ಮುರುಗನ ಹುಳಿ ಸಾರು, ಕಯಾಮೆ ಅಕ್ಕಿ ಅನ್ನ ಹಾಗೂ ಮೆಂತ್ಯ ಸೊಪ್ಪಿನ ಚಿತ್ರಾನ್ನ , ಗಂಜಿ ಮುಂತಾದವುಗಳನ್ನು ಒಳಗೊಂಡಿತ್ತು.ಇದೇ ಸಂದರ್ಭದಲ್ಲಿ ಕೋಳಿ ಅಂಕ, ಕಂಬಳ, ಭೂತಕೋಲ, ಆಟಿಕಳೆಂಜ ಮತ್ತುಗದ್ದೆ ಬೇಸಾಯದ ದೃಶ್ಯಾವಳಿಗಳನ್ನುಎಲ್.ಸಿ.ಡಿ. ಮೂಲಕ ಪ್ರದರ್ಶಿಸಲಾಯಿತು.ಉಜಿರೆಯ ಸಿಬಿಎಸ್ಸಿ ಶಾಲಾ ಪ್ರಾಂಶುಪಾಲ ಮನಮೋಹನ್ ನಾಯಕ್, ಸ್ಥಳೀಯರಾದ ಶ್ರೀನಿವಾಸ್‌ರಾವ್, ಉಜಿರೆಯ ಎಸ್.ಡಿ.ಎಂ.ಕಾಲೇಜಿನ ಬಿ.ಇಡಿ. ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಮತ್ತು ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳಾ ಎಂ. ವಿ., ಅಧ್ಯಾಪಕ ವೃಂದ ಮತ್ತು ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಸಹಭಾಗಿತ್ವದಲ್ಲಿ ಈ ವಿಶೇಷ ತುಳು ಕಾರ್ಯಕ್ರಮವು ಬಹಳ ಸೊಗಸಾಗಿ ಮೂಡಿಬಂದಿತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.