ಅಳದಂಗಡಿ ಶತಾಯುಷಿ ನಾಗಮ್ಮನಿಧನ 

ಅಳದಂಗಡಿ : ಇಲ್ಲಿನ ಗುರುದೇವ ಕೊಡಂಗೆ ಮನೆಯ ದಿ| ಚೆಲುವಯ್ಯ ಪೂಜಾರಿಯವರ ಧರ್ಮಪತ್ನಿ ನಾಗಮ್ಮ (100ವ) ಅವರು ವಯೋಸಹಜ ಜ.29ರಂದು ನಿಧನರಾದರು.
ಮೃತರು ನಾಟಿವೈದ್ಯರಾಗಿದ್ದು ಊರಲ್ಲಿ ಚಿರಪರಿಚಿತರಾಗಿದ್ದರು. ಮೃತರು ಪುತ್ರ ಪ್ರಗತಿಪರ ಕೃಷಿಕ, ಅಳದಂಗಡಿ ಸಿ.ಎ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಸಂಜೀವ ಪೂಜಾರಿ ಕೊಡಂಗೆ, ಪುತ್ರಿಯರಾದ ಲಲಿತಾ, ಲೀಲಾ, ಜಯಂತಿ, ಸೊಸೆ, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದಾರೆ.
ಮೃತರ ಮನೆಗೆ ಮಾಜಿ ಶಾಸಕ ಕೆ.ವಸಂತ ಬಂಗೇರ, ಬೆಳ್ತಂಗಡಿ ಶ್ರೀ.ಗು.ನಾ.ಸ್ವಾ.ಸೇ ಸಂಘದ ಅಧ್ಯಕ್ಷ ಸೋಮನಾಥ ಬಂಗೇರ, ಪ್ರಗತಿಪರ ಕೃಷಿಕ ಗಂಗಾಧರ ಮಿತ್ತಮಾರ್, ತಾ.ಪಂ ಮಾಜಿ ಸದಸ್ಯ ಹೆಚ್. ಧರ್ಣಪ್ಪ ಪೂಜಾರಿ, ಅಳದಂಗಡಿ ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ಶಿರ್ಲಾಲು ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಸುನೀಲ್ ಕುಮಾರ್, ಶಿರ್ಲಾಲು ಗ್ರಾ.ಪಂ ಮಾಜಿ ಅಧ್ಯಕ್ಷೆ ಗುಣಮ್ಮ, ಶಿರ್ಲಾಲು ಬದ್ಯಾರು ಲೋಕನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಧರ ಪೂಜಾರಿ, ಪ್ರಗತಿಪರ ಕೃಷಿಕರಾದ ವಿಶ್ವನಾಥ ಪೂಜಾರಿ ಕುದ್ಯಾಡಿ, ವಿಶ್ವನಾಥ ಪುದ್ದರ ಬೈಲು ಶಿರ್ಲಾಲು ಹಾಗೂ ಊರವರು, ಗಣ್ಯರು ಅಗಮಿಸಿ ಅಂತಿಮ ನಮನ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.