ಉಜಿರೆ ಎಸ್‌ಡಿಎಂ ಐಟಿ: ದೈವನರ್ತಕ, ಸಿವಿಲ್ ಇಂಜಿನಿಯರ್ ರವೀಶ್ ಪರವ ಅವರಿಗೆ ಡಾಕ್ಟರೇಟ್

 

ಉಜಿರೆ: ತುಳುನಾಡಿನ ಕುಂಬಳೆ ಸೀಮೆಯಲ್ಲಿ ಪ್ರಮುಖ ದೈವನರ್ತನ ಸೇವೆಯ ಜೊತೆಗೆ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಉಪನ್ಯಾಸಕರಾಗಿರುವ ಪಡುಮಲೆಯ ರವೀಶ್ ಪರವ ಅವರಿಗೆ ವಿಟಿಯು ತಾಂತ್ರಿಕ ವಿದ್ಯಾಲಯ ಡಾಕ್ಟರೇಟ್ ನೀಡಿದೆ.
ಸಿವಿಲ್ ಕಾಮಗಾರಿ ಕ್ಷೇತ್ರದಲ್ಲಿ ಪ್ರಸ್ತುತ ಅನುಭವಿಸುತ್ತಿರುವ ಮರಳಿನ ಕೊರತೆಗಾಗಿ, ನೇತ್ರಾವತಿ ಮತ್ತು ಗುರುಪುರ ನದಿ ಅಳಿವೆ ಮರಳುಗಾರಿಕೆಯಿಂದ ದೊರೆತ ಮರಳನ್ನು ಕಬ್ಬಿಣದ ಸರಳುಗಳಿರುವ ಕಾಂಕ್ರೀಟ್‌ನಲ್ಲಿ ಬಳಸುವುದರಿಂದ ಆಗುವ ಪರಿಣಾಮಗಳ ಕುರಿತು ಅವರು ಅಧ್ಯಯನ ನಡೆಸಿ, ವಿಟಿಯು ಮಾಜಿ ರಿಜಿಸ್ಟ್ರಾರ್ ಮತ್ತು ಮಂಗಳೂರಿನ ತಾಂತ್ರಿಕ ಮಹಾವಿದ್ಯಾಲದ ನಿರ್ದೇಶಕ ಡಾ. ಕೆ. ಇ ಪ್ರಕಾಶ್ ಮತ್ತು ಬೆಳಗಾವಿ ಎಐಟಿಎಂ ಸಿವಿಲ್ ವಿಭಾಗದ ಪ್ರೊಫೆಸರ್ ಡಾ. ಬಿ.ಟಿ ಸುರೇಶ್‌ಬಾಬು ಅವರ ಮಾರ್ಗದರ್ಶನದಲ್ಲಿ ಮಂಡಿಸಿದ “ಇಂಪಾಕ್ಟ್ ಸಾಲಿಸಿಟಿ ಓನ್ ಕ್ವಾಲಿಟಿ ಆಫ್ ಎಸ್ಟುವರಿ ಸ್ಯಾಂಡ್ ಓನ್ ಕ್ರಾಂಕ್ರೀಟ್ ಇನ್ ಕೋಸ್ಟಲ್ ರೀಜನ್ ಆಫ್ ಕರ್ನಾಟಕ” ಮಹಾಪ್ರಬಂಧಕ್ಕೆ ಈ ಡಾಕ್ಟರೇಟ್ ಪದವಿ ದೊರೆತಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.