ಯಳಚಿತ್ತಾಯ ನಗರಕ್ಕೆ ರೂ.14.18ಲಕ್ಷ ಅನುದಾನ: ಭರವಸೆ ಈಡೇರಿಸಿದ ಎಂಎಲ್‌ಸಿ ಕೆ. ಹರೀಶ್ ಕುಮಾರ್

ಬೆಳ್ತಂಗಡಿ: ಇಲ್ಲಿಯ ಉಜಿರೆ ಹಾಗೂ ಲಾಯಿಲ ಗ್ರಾಮ ವ್ಯಾಪ್ತಿಗೆ ಬರುವ ಕಾಂಬ್ರೇಡ್ ಯಳಚಿತ್ತಾಯ ನಗರ ಪ.ಜಾತಿ ಕಾಲೋನಿಗೆ ರಸ್ತೆ ಕಾಂಕ್ರಿಟಿಕರಣಕ್ಕೆ ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್‌ರವರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆ ಅನುದಾನಡಿಯಲ್ಲಿ 14.18 ಲಕ್ಷ ಮಂಜೂರಾಗಿದೆ.
ಈ ಭಾಗದಲ್ಲಿ ಪ.ಜಾತಿ, ಪ.ಪಂಗಡ ಹಾಗೂ ಇತರ ನಲುವತ್ತು ಬಡ ಕುಟುಂಬಗಳು ವಾಸ್ತವ್ಯವಿದ್ದು, ರಸ್ತೆ ಹಾಗೂ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದರು. ಚುನಾವಣೆಗೆ ಮೊದಲು ನೀಡಿದ ಭರವಸೆಯನ್ನು ಈಡೇರಿಸದ ಜನಪ್ರತಿನಿಧಿಗಳ ಮತ್ತು ಅಧಿಕಾರಿ ವರ್ಗಗಳ ವಿರುದ್ಧ ಆಕ್ರೋಶಿತಗೊಂಡ ಸ್ಥಳೀಯ ಗ್ರಾಮಸ್ಥರು ಮತದಾನ ಬಹಿಷ್ಕರಿಸುವುದಾಗಿ ಪತ್ರಿಕಾಗೊಷ್ಠಿ ನಡೆಸಿದ್ದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಎಂಎಲ್‌ಸಿ ಕೆ. ಹರೀಶ್ ಕುಮಾರ್ ಭೇಟಿ ನೀಡಿ ಈ ಬಾರಿ ನಾನು ನನ್ನ ಪ್ರದೇಶ ಅಭಿವೃದ್ಧಿ ಅನುದಾನದಡಿಯಲ್ಲಿ ರಸ್ತೆ ಕಾಂಕ್ರಿಟೀಕರಣದ ಬೇಡಿಕೆಯನ್ನು ಈಡೇರಿಸುವುದಾಗಿ ತಿಳಿಸಿ ಮತದಾನ ಬಹಿಷ್ಕಾರವನ್ನು ಹಿಂಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಅದೆ ರೀತಿ ಇದೀಗ ಕಾಂಬ್ರೇಡ್ ಯಲಚಿತ್ತಾಯ ನಗರಕ್ಕೆ ಕರ್ನಾಟಕ ಸರಕಾರದ ವಿಧಾನ ಪರಿಷತ್ ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆ ಅನುದಾನದಡಿಯಲ್ಲಿ 14.18 ಲಕ್ಷ ರೂಗಳನ್ನು ಮಂಜೂರುಗೊಳಿಸಿ ಸ್ಥಳೀಯ ಗ್ರಾಮಸ್ಥರ ಪ್ರಶಂಸೆಗೆ ಗುರಿಯಾಗಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.