ಪುಂಜಾಲಕಟ್ಟೆ: ಇಲ್ಲಿನ ಮಾಲಾಡಿ ಗ್ರಾಮದ ಪುರಿಯ ನಿವಾಸಿ ಗಣೇಶ್ ಶೆಟ್ಟಿ ಮತ್ತು ವಾರಿಜಾ ಶೆಟ್ಟಿ ದಂಪತಿ ಪುತ್ರ ಸಂದೇಶ್ ಶೆಟ್ಟಿ (30.ವ) ಅವರು ವಿದೇಶದ ದೋಹಾ ಕತಾರ್ನಲ್ಲಿ ಕಂಪ್ರೆಶರ್ ಸಿಡಿದು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.
ಮೂಲತಃ ಪುಂಜಾಲಕಟ್ಟೆ ಸಮೀಪದ ಮಾಲಾಡಿ ಪುರಿಯ ನಿವಾಸಿಯಾಗಿರುವ ಇವರಿಗೆ ಜು. 23 ರಂದು ಈ ದುರ್ಘಟನೆ ಸಂಭವಿಸಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಸಂದೇಶ್ ಅವರು ಕತಾರ್ನಲ್ಲಿ ಎಸಿ ಮೆಕ್ಯಾನಿಕ್ ಆಗಿದ್ದು, ಕತಾರ್ ಸ್ಟೇಡಿಯಂನಲ್ಲಿ ಕೆಲಸ ನಿರ್ವಹಿಸುತ್ತಿರುವಾಗ ಕಂಪ್ರೆಶರ್ ಸಿಡಿದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಸಂದೇಶ್ ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದು, ಅವರ ಪತ್ನಿ 20 ದಿನಗಳ ಹಿಂದೆಯಷ್ಟೇ ವಿಸಿಟಿಂಗ್ ವೀಸಾದಲ್ಲಿ ಕತಾರ್ಗೆ ತೆರಳಿದ್ದರು.
ಸಂದೇಶ್ ಅವರ ಅಜ್ಜಿ ಮನೆ (ತಾಯಿಯ ಮನೆ) ಪುರಿಯದಲ್ಲಿದ್ದು, ಅವರು ಪುಂಜಾಲಕಟ್ಟೆಯಲ್ಲೆ ತಮ್ಮ ಶಿಕ್ಷಣ ಪೂರೈಸಿದ್ದರು.