“ಸಹಕಾರಿ ಸಂಘಗಳ ಆದಾಯ ತೆರಿಗೆ ಬಗ್ಗೆ ಹೋರಾಟಕ್ಕೆ ದುಮುಕುವ ಅಗತ್ಯತೆ”

ಬೆಳ್ತಂಗಡಿ: ಸಹಕಾರಿ ಸಂಘದಲ್ಲಿ ಲಾಭದ ಮೇಲೆ ಆದಾಯ ತೆರಿಗೆ ಆಕರಣೆ ಆರಂಭವಾಗಿ ವರ್ಷಗಳೇ ಆಗಿದ್ದು, ಹೈದರಾಬಾದ್‌ನ ಸಿಟಿಝೆನ್ ಸಹಕಾರಿ ಸಂಘಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಸುಪ್ರಿಂ ಕೋರ್ಟ್ ನೀಡಿದ ತೀರ್ಪಿನಂತೆ ಇತರ ಸಹಕಾರಿ ಸಂಸ್ಥೆಗಳಲ್ಲೂ ಸದಸ್ಯತನ ವರ್ಗೀಕರಣ ಮಾಡಿ ಯಾವುದೇ ಡಿವಿಡೆಂಟ್ (ಲಾಭಾಂಶ) ನೀಡದಿರುವ ಹಾಗೂ ಆಡಳಿತದಲ್ಲಿ ಅವಕಾಶ ನಿರಾಕರಿಸಿರುವ ಸಹ ಸದಸ್ಯರೊಂದಿಗಿನ ವ್ಯವಹಾರದಲ್ಲಿ ಗಳಿಸಿದ ಲಾಭದ ಮೇಲೆ ಆದಾರ ತೆರಿಗೆ ಆಕರಣೆ ತಡೆದಿಲ್ಲ. ಈ ದೃಷ್ಟಿಯಿಂದ ಸಹಕಾರಿ ಸಂಸ್ಥೆಗಳು, ಮುಖ್ಯವಾಗಿ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘಗಳು ತನ್ನ ಎಲ್ಲಾ ರೀತಿಯ ಸದಸ್ಯರಿಗೂ ಲಾಭಾಂಶ ಮತ್ತು ಆಡಳಿತದಲ್ಲಿ ಪಾಲು ನೀಡುವ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ. ಸಹಕಾರಿ ಕಾನೂನಿನಲ್ಲಿ ಈ ಬಗ್ಗೆ ಅವಕಾಶ ಕಲ್ಪಿಸಿಕೊಂಡು ಸಂಘಗಳ ಬೈಲಾಗಳಲ್ಲೂ ಅವಕಾಶ ಮಾಡಿಕೊಂಡು ಮುಂದುವರಿಸಬೇಕಾಗಿದೆ. ಈ ಬಗ್ಗೆ ಸರಕಾರದಲ್ಲಿ ಕಾನೂನು ತಿದ್ದುಪಡಿ ಆಗುವ ಅಗತ್ಯವಿದ್ದು ಸಾಮೂಹಿಕ ಹೋರಾಟ ಅಗತ್ಯವಿದೆ ಎಂದು ಮುಂಡಾಜೆ “ಪಾಕ್ಸ್” ಅಧ್ಯಕ್ಷ, ಹಿರಿಯ ಸಹಕಾರಿ ಎನ್.ಎಸ್ ಗೋಖಲೆ ಹೇಳಿದರು.
ಇದು ಕೇವಲ ತಾಲೂಜು ಯಾ ಜಿಲ್ಲಾ ಮಟ್ಟದಲ್ಲಿ ಬಡೆಯುವುದಕ್ಕಿಂತ ರಾಜ್ಯವ್ಯಾಪಿ ನಡೆಯಬೇಕಾಗಿರುವುದರಿಂದ ಅಗತ್ಯವಾದ ಕ್ರಮಕ್ಕಾಗಿ ಅವಿಭಜಿತ ದ.ಕ ಜಿಲ್ಲೆಯ ಎರಡೂ ಹಕಾರಿ ಯೂನಿಯನ್‌ಗಳನ್ನು, ಜಿಲ್ಲಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರನ್ನು ಈಗಾಗಲೇ ಕೇಳಿಕೊಳ್ಳಲಾಗಿದೆ. ಎಲ್ಲಾ ಸಹಕಾರಿ ಸಂಘಗಳೂ ತಡ ಮಾಡದೆ ಜಾಗೃತರಾಗಿ ಹೋರಾಟಕ್ಕೆ ದುಮುಕಬೇಕಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಂಡಾಜೆ ಪಾಕ್ಸ್ ಉಪಾಧ್ಯಕ್ಷ ವಿ.ಟಿ ಸೆಬಾಸ್ಟಿಯನ್, ನಿರ್ದೇಶಕರಾದ ಕೆ ಕೊರಗಪ್ಪ ನಾಯ್ಕ ಮತ್ತು ಮೋಹನಚಂದ್ರ ಗೋಖಲೆ, ಕಾರ್ಯನಿರ್ವಹಣಾಧಿಕಾರಿ ನಾರಾಯಣ ಫಡ್ಕೆ ಉಪಸ್ಥಿತರಿದ್ದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.