ವೇಣೂರು ಜೈನ್ ಮಿಲನ್‌ನಿಂದ ಆಹಾರೋತ್ಸವ

65ಕ್ಕೂ ಅಧಿಕ ಬಗೆಯ ತಿಂಡಿ ತಿನಸು; ಮನೆಯಲ್ಲೇ ತಯಾರಿಸಿ ತಂದರು!

ವೇಣೂರು: ಭಾರತೀಯ ಜೈನ್ ಮಿಲನ್ ವೇಣೂರು ವತಿಯಿಂದ ಇಲ್ಲಿಯ ಶ್ರೀ ಬಾಹುಬಲಿ ಸಭಾಭವನದಲ್ಲಿ ಜರಗಿದ ಆಹಾರೋತ್ಸವ ಕಾರ್ಯಕ್ರಮದಲ್ಲಿ ೬೫ಕ್ಕೂ ಅಧಿಕ ಬಗೆಯ ತಿಂಡಿ ತಿನಸುಗಳು ಘಮಘಮಿಸಿದ್ದು, ನೂರಾರು ಮಂದಿ ಆಹಾರ ಪ್ರಿಯರು ವಿವಿಧ ಖಾದ್ಯಗಳನ್ನು ಸವಿದರು.
ಆಟಿ ತಿಂಗಳಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ಅಲ್ಲಲ್ಲಿ ಸಾಂಪ್ರದಾಯಿಕವಾಗಿ ನಡೆಯುತ್ತದೆ. ವೇಣೂರು ಜೈನ ಬಾಂಧವರು ತಮ್ಮ ಮನೆಯಲ್ಲೇ ತಯಾರಿಸಿದ ವಿವಿಧ ಬಗೆಯ ಖಾದ್ಯಗಳನ್ನು ಆಹಾರೋತ್ಸವದಲ್ಲಿ ಪ್ರದರ್ಶನಕ್ಕೆ ಇಟ್ಟು ಉಣಬಡಿಸಿದರು. ಆಹಾರೋತ್ಸವದಲ್ಲಿ ಕ್ಲೀರ, ಬನ್ಸ್, ಗೆಣಸಿನ ಉಪ್ಕರಿ, ನಿಪ್ಪಟ್ಟು, ದಿವಿ ಹಲಸು ಪೋಡಿ, ನೀರುದೋಸೆ, ಇಡ್ಲಿ, ಸಾಂಬಾರ್, ಚಟ್ನಿ, ಕ್ಯಾಬೇಜ್ ಮಂಜೂರಿ, ಗೋಬಿ ಮಂಜೂರಿ, ಶ್ಯಾವಿಗೆ ಮೆಣಸಿನಗಟ್ಟಿ, ಬೂಂದಿ ಲಾಡು, ಬಾಳೆಕಾಯಿ ಚಿಪ್ಸ್, ಸಿಹಿ ಕಡುಂಬು, ಕಟ್ಟುಮಂಡಿಗೆ, ಬಸಳೆಪುಂಡಿ, ಗಾರ್ಯ, ಹೆಸರು ಉಪ್ಕರಿ, ಕ್ಯಾಬೇಜ್ ವಡೆ, ಉದ್ದಿನ ಕಡುಂಬು, ಮನರ, ಚಕ್ಕುಲಿ, ರವೆ ಚಕ್ಕುಲಿ, ಪತ್ರೋಡೆ, ಉಪ್ಪಿನಕಾಯಿ ಸೇರಿದಂತೆ ಇನ್ನಿತ್ತರ ವಿಶೇಷ ಬಗೆಯ ಖಾದ್ಯಗಳು ಆಹಾರೋತ್ವದಲ್ಲಿ ಮೇಳೈಸಿದವು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.