HomePage_Banner_
HomePage_Banner_
HomePage_Banner_

ಕೊಯ್ಯೂರು ದೇವಕಿ ನಿಧನ

ಕೊಯ್ಯೂರು: ಇಲ್ಲಿಯ ಡೆಂಬುಗ ಕೊಂಗುಜೆ ನಿವಾಸಿ ದಿ| ಬಾಬು ಗೌಡರ ಧರ್ಮಪತ್ನಿ ದೇವಕಿ (83.ವ) ಯವರು ಅಲ್ಪಕಾಲದ ಅಸೌಖ್ಯದಿಂದ ಜು.20 ರಂದು ಸ್ವಗೃಹದಲ್ಲಿ ನಿಧನರಾದರು.
ಶ್ರೀಮಂತ ಕುಟುಂಬದಲ್ಲಿ ಜನಿಸಿದ ಇವರು ಪ್ರಗತಿಪರ ಕೃಷಿಕರಾಗಿದ್ದು, ಶಿಕ್ಷಣ, ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಿಗೆ ಕೊಡಗೈ ದಾನಿಯಾಗಿದ್ದರು ಹಾಗೂ ಜಾನಪದ ಕ್ರೀಡೆಗಳನ್ನು ಪ್ರೋತ್ಸಾಹಿಸುವ ಮೂಲಕ ಎಲ್ಲಾರ ಪ್ರೀತಿಗೆ ಪಾತ್ರರಾಗಿದ್ದರು.
ಮೃತರ ಪುತಿಯರಾದ ಹೇಮಾವತಿ ಗಂಗಾಧರ ಗೌಡ, ಶೀಲಾ ತಿಮ್ಮಯ್ಯ ಗೌಡ, ವಾರಿಜ ಬಾಲಕೃಷ್ಣ ಗೌಡ, ಅಳಿಯಂದಿರು, ಮೊಮ್ಮಕ್ಕಳು, ಮರಿಮಕ್ಕಳು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ. ಮೃತರ ಮನೆಗೆ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮಸ್ಥರು ಭೇಟಿ ನೀಡಿ ಸಂತಾಪ ಸೂಚಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.