ಇಂದು ಗುಂಡಿ ರಚಿಸಿ ಆಹಾರ ನೀಡುವ ಗಿಡ ನೆಟ್ಟರೆ ನಗದು ಪ್ರೋತ್ಸಾಹ ಧನ!

ಮುಂಡಾಜೆ ಸಹಕಾರಿ ಸಂಘದಿಂದ ಹೊಸ ಘೋಷಣೆ

ಮುಂಡಾಜೆ: ಅಂತರ್ಜಲ ಅಭಿವೃದ್ಧಿಗಾಗಿ, ಪರಿಸರ ರಕ್ಷಣೆಗಾಗಿ ಮುಂಡಾಜೆ ಸಹಕಾರಿ ಸಂಘದ ವ್ಯಾಪ್ತಿಗೊಳಪಡುವ ಮುಂಡಾಜೆ, ಕಲ್ಮಂಜ, ಚಾರ್ಮಾಡಿ, ನೆರಿಯ ಪಂಚಾಯತ್ ವ್ಯಾಪ್ತಿಯ ಸಂಘದ ಎಲ್ಲಾ ಸದಸ್ಯರುಗಳು ತಮ್ಮ ಮನೆಯಲ್ಲಿ ಕನಿಷ್ಟ ಒಂದು ಇಂಗುಗುಂಡಿ ಮತ್ತು ಆಹಾರ ನೀಡುವ ಒಂದಾದರೂ ಗಿಡ ನೆಟ್ಟು ಪೋಷಿಸಿದಲ್ಲಿ ಅವರಿಗೆ ಸಂಘದ ಮಹಾಸಭೆಯಲ್ಲಿ ವಿಶೇಷ ನಗದು ಪ್ರೋತ್ಸಾಹ ನೀಡಲು ನಿರ್ಧರಿಸಿ ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ.
ಸಂಘದ ಅಧ್ಯಕ್ಷ ಎನ್.ಎಸ್ ಗೋಖಲೆ, ಉಪಾಧ್ಯಕ್ಷ ವಿ.ಟಿ ಸೆಬಾಸ್ಟಿಯನ್, ಸಿಇಒ ನಾರಾಯಣ ಫಡ್ಕೆ ಅವರು ಈ ಪ್ರಕಟಣೆ ನೀಡಿದ್ದು, ಸಹಕಾರಿ ಸಂಘದ ಕೇಂದ್ರ ಕಚೇರಿ ಹೊಂದಿರುವ ಮುಂಡಾಜೆ ಗ್ರಾಮ ಸಹಿತ ಶಾಖೆಗಳಿರುವ ಪಂಚಾಯತ್, ರೈತ ಸೇವಾ ಕೂಟಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಅವರು ಈ ವಿಜ್ಞಾಪನೆ ಮಂಡಿಸಿದ್ದಾರೆ. 2019 ರಲ್ಲಿ ಬರ ನಮ್ಮೆಲ್ಲರನ್ನೂ ಕಣ್ತೆರೆಸುವಂತೆ ಮಾಡಿದೆ. ಈ ಪರಿ ಅಂತರ್ಜಲ ಕುಸಿತಕ್ಕೆ ಕಾಂಕ್ರೀಟ್ ರಸ್ತೆ, ಅತಿಯಾದ ಪ್ಲಾಸ್ಟಿಕ್ ಬಳಕೆ ಇತ್ಯಾಧಿಗಳು ಕಾರಣವಾಗಿದ್ದು ಈ ಬಗ್ಗೆಯೂ ಗಮನಹರಿಸುವಂತೆ ಪತ್ರದ ಮೂಲಕ ಭಿನ್ನವಿಸಿಕೊಳ್ಳಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.