ಜಗದೀಶ್ ಡಿ ನೇತೃತ್ವದಲ್ಲಿ 15 ನೇ ವರ್ಷದ ಸ್ವಯಂಪ್ರೇರಿತ ರಕ್ತದಾನ ಶಿಬಿರ

ಬೆಳ್ತಂಗಡಿ: ರಕ್ತದಾನದ ವೇಳೆ ವ್ಯಕ್ತಿಯ ರಕ್ತದ ಸಂಪೂರ್ಣ ಪರೀಕ್ಷೆಗಳು ಉಚಿತವಾಗಿ ನಡೆಯಲಿದ್ದು ಇದರಿಂದ ಸದೃಢ ಆರೋಗ್ಯದ ಖಾತ್ರಿ ಕೂಡ ಆದಂತಾಗುತ್ತದೆ. ರಕ್ತ ಜೀವ ಉಳಿಸುವ ತುರ್ತು ಜೀವಧಾನ ಸಾಧನವಾಗಿದ್ದು, ಇಂದು ಆರೋಗ್ಯವಾಗಿದ್ದೇವೆಂದು ಭಾವಿಸುವ ನಮಗೇ ಯಾವಾಗ ರಕ್ತದ ಆವಶ್ಯಕತೆ ಬೀಳಬಹುದು ಎಂದು ಗೊತ್ತಿಲ್ಲ. ಆದ್ದರಿಂದ ಅರೋಗ್ಯವಂತರಾಗಿರುವ ಎಲ್ಲರೂ ವೈದ್ಯಕೀಯ ನಿಯಮದಂತೆ ರಕ್ತದಾನ ಮಾಡಬೇಕು ಎಂದು ತಹಶಿಲ್ದಾರ್ ಗಣಪತಿ ಶಾಸ್ತ್ರಿ ಹೇಳಿದರು.

ಬೆಳ್ತಂಗಡಿ ತಾಲೂಕು ಔಷಧ ವ್ಯಾಪಾರಸ್ತರ ಸಂಘದ ಪ್ರಧಾನ ನೇತೃತ್ವದಲ್ಲಿ ಪ್ರಾದೇಶಿಕ ರಕ್ತ ಪೂರಣ ಕೇಂದ್ರ ಸರಕಾರಿ ವೆನ್ಲಾಕ್ ಆಸ್ಪತ್ರೆ ಮಂಗಳೂರು, ಜೇಸಿಐ ಬೆಳ್ತಂಗಡಿ, ಜೇಸಿರೆಟ್, ಲೇಡಿ ಜೇಸಿವಿಂಗ್ ಇದರ ಆಶ್ರಯದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ ಎನ್ನೆಸ್ಸೆಸ್ ಘಟಕ ಮತ್ತು ಬೆಳ್ತಂಗಡಿ ಪೊಲೀಸ್ ಠಾಣೆ ಸಹಭಾಗಿತ್ವದಲ್ಲಿ ಜೇಸಿ ಭವನ ಬೆಳ್ತಂಗಡಿಯಲ್ಲಿ ನಡೆದ 15ನೇ ವರ್ಷದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.


ಮುಖ್ಯ ಅತಿಥಿಯಾಗಿ ಮಾತನಾಡಿದ ಸಬ್ ಇನ್ಸ್‌ಪೆಕ್ಟರ್ ರವಿ ಬಿ.ಎಸ್ ಅವರು, ರಕ್ತದಾನವನ್ನು ಪೊಲೀಸ್ ದೃಷ್ಟಿಕೋನದಲ್ಲಿ ನೋಡಿದರೆ ತಾಲೂಕಿನಲ್ಲಿ ವರ್ಷದಲ್ಲಿ ಒಂದೆರಡು ಕೊಲೆ ಪ್ರಕರಣದ ಸಾವುಗಳಾದರೆ ಅಪಘಾತ ರಕ್ತಶ್ರಾವದಿಂದ ಸಾಯುವವರ ಸಂಖ್ಯೆ 35 ರಷ್ಟು. ಆದ್ದರಿಂದ ಅಪಘಾತದಂತಹಾ ತುರ್ತು ಸಂದರ್ಭಗಳಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ವೀಡಿಯೋ ಫೋಟೋ ಹಾಕುವ ಬದಲು ರಕ್ತಶ್ರಾವಕ್ಕೊಳಗಾಗುವ ರೋಗಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿದಲ್ಲಿ ಹಿಂದೆ ಇದ್ದ ಕಾನೂನಿನ ತೊಂದರೆ ಈಗ ನಿಯಮ ಬದಲಾಗಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಬೆಳ್ತಂಗಡಿ ಸರಕಾರಿ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಆಂಟನಿ ಟಿ.ಪಿ, ಜೇಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಪ್ರಶಾಂತ್ ಲಾಲ, ವೆನ್ಲಾಕ್ ಅಸ್ಪತ್ರೆಯ ವೈದ್ಯ ಡಾ.ವಿನಾಯಕ್ ಸಂದರ್ಭೋಚಿತವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ಸರಕಾರಿ ಪ್ರ. ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಯೋಜನಾಧಿಕಾರಿ ಡಾ.ಸುಮನಾ ಶೆಟ್ಟಿ ಮತ್ತು ಪ್ರೋ. ಗಂಗಾಧರ್, ಪ್ರೊಬೆಷನರಿ ಸಬ್‌ಇನ್ಸ್‌ಪೆಕ್ಟರ್ ಭರತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾ| ಔಷಧ ವ್ಯಾಪಾರಸ್ತರ ಸಂಘದ ಅಧ್ಯಕ್ಷ, ಪಟ್ಟಣ ಪಂಚಾಯತ್ ಸದಸ್ಯ ಜಗದೀಶ್ ಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಆಶಾ ಪ್ರಶಾಂತ್ ಜೇಸಿವಾಣಿ ವಾಚಿಸಿದರು. ಗಣೇಶ್ ಶಿರ್ಲಾಲು ನಿರೂಪಿಸಿದರು. ಚಿದಾನಂದ ಇಡ್ಯ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ರಕ್ತನಿಧಿ ವಿಭಾಗದ ಆಂಟನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಔಷಧ ವ್ಯಾಪಾರಸ್ತರ ಸಂಘದ ಕಾರ್ಯದರ್ಶಿ ಸುಜಿತ್ ಭಿಡೆ ಮುಂಡಾಜೆ ವಂದಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.