ಕಾಜೂರು ಆಡಳಿತ ಮಂಡಳಿಗೆ ಚುನಾವಣೆ: ನಿರ್ದೇಶಕರ ಆಯ್ಕೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮಿತ್ತಬಾಗಿಲು: ತಾಲೂಕಿನ ಇತಿಹಾಸ ಪ್ರಸಿದ್ಧ ಸರ್ವಧರ್ಮೀಯರ ಸೌಹಾರ್ದತೆಯ ಸಮನ್ವಯ ಕೇಂದ್ರ ಕಾಜೂರು ರಹ್ಮಾನಿಯ ಜುಮ್ಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಇಲ್ಲಿನ ಆಡಳಿತ ಮಂಡಳಿ ರಚನೆಗೆ ಕರ್ನಾಟಕ ವಕ್ಫ್ ಬೋರ್ಡ್ ಆದೇಶಾನುಸಾರ ಜು. 21 ರಂದು ನಡೆದ ಚುನಾವಣೆಯಲ್ಲಿ 11  ಮಂದಿ ನಿರ್ದೇಶಕರ ಆಯ್ಕೆ ನಡೆಯಿತು.
252 ಮತ ಚಲಾವಣೆ: 9  ಮತಗಳು ತಿರಸ್ಕೃತ:
ಜಮಾಅತ್ ವ್ಯಾಪ್ತಿಯಲ್ಲಿ ಅಧಿಸೂಚನೆಯಂತೆ ವಕ್ಫ್ ನಿಯಮ ಪ್ರಕಾರ ಸದಸ್ಯತ್ವ ಪಡೆದ ಕಾಜೂರು, ಗೌಸಿಯಾ ನಗರ, ಕುಕ್ಕಾವು ಇಲ್ಲಿನ ಗುರುತು ಚೀಟಿ ಹೊಂದಿದ 300 ಮತದಾರರ ಪೈಕಿ 252 ಮತಗಳು ಚಲಾವಣೆಯಾಗಿದ್ದು 9  ಮತಗಳು ತಿರಸ್ಕೃತಗೊಂಡಿತ್ತು. ಸಂಜೆಯೇ ಮತ ಎಣಿಕೆ ನಡೆದು ಚುನಾಯಿತರಾದವರನ್ನು ಘೋಷಿಸಿ ಪ್ರಮಾಣ ಪತ್ರ ನೀಡಲಾಯಿತು.
ರಾಜ್ಯ ವಕ್ಫ್ ಮಂಡಳಿಯ ಆಡಿಟ್ ವಿಭಾಗದ ಲೆಕ್ಕಾಧಿಕಾರಿ ನಝೀರ್ ಅಹಮ್ಮದ್ ಅವರು ವಿಶೇಷ ಚುನಾವಣಾಧಿಕಾರಿಯಾಗಿ, ಸಹಾಯಕ ಅಧಿಕಾರಿಗಳಾಗಿ ಜಿಲ್ಲಾ ವಕ್ಫ್ ಲೆಕ್ಕವಿಭಾಗದ ಅನ್ವರ್‌ಮುಸ್ತಫಾ, ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕ್ಕರ್ ಹಾಜಿ ಮತ್ತು ಕಾಜೂರು ಆಡಳಿತಾಧಿಕಾರಿ ಮುಹಮ್ಮದ್ ರಫಿ (ಮಾಜಿ ಸೈನಿಕರು) ಇವರು ಕರ್ತವ್ಯ ನಿರ್ವಹಿಸಿದರು. ಬೆಳ್ತಂಗಡಿ ಠಾಣೆಯ ಎಸ್‌ಐ ರವಿ ಬಿ.ಎಸ್ ಭದ್ರತೆ ಉಸ್ತುವಾರಿ ವಹಿಸಿದ್ದರು.

ವಿಜೇತರಾದವರು ಮತ್ತು ಪಡೆದ ಮತಗಳು:
ಮುಹಮ್ಮದ್ ಕಮಾಲ್(170), ಬದ್ರುದ್ದೀನ್(154), ಅಬೂಬಕ್ಕರ್ ಸಿದ್ದೀಕ್ ಜೆ.ಎಚ್ (151), ಅಬ್ಬಾಸ್ ಕೆ.ಎಚ್ (141), ಮುಹಮ್ಮದ್ ಅಲಿ ಎ. ಯು (128), ಯಾಕೂಬ್ ಎನ್.ಎಂ (115), ಅಬ್ದುಲ್ ರಹಿಮಾನ್ ಕೆ (111), ಉಮರ್‌ಕುಂಞಿ (111), ಅಬ್ದುಲ್ ಖಾದರ್ (107), ಇಬ್ರಾಹಿಂ ಕೆ. ಯು (105) ಮತ್ತು ಸಿದ್ದೀಕ್ (88) ಮತಗಳನ್ನು ಪಡೆದು ಚುನಾಯಿತರಾದರು.
ಬೆಳಿಗ್ಗೆ ನಿಗದಿತ ಸಮಯಕ್ಕೆ ಮತದಾನ ಪ್ರಕ್ರಿಯೆ ಪ್ರಾರಂಭವಾಗಿತ್ತು. ಸಾರ್ವತ್ರಿಕ ಚುನಾವಣೆಯಂತೆ ಮತಪೆಟ್ಟಿಗೆ, 100 ಮೀಟರ್ ವ್ಯಾಪ್ತಿಯಲ್ಲಿ ನಿಷೇದಾಜ್ಞೆ, ಸಾಕಷ್ಟು ಪೊಲೀಸ್ ಭದ್ರತೆಯಲ್ಲಿ ಚುನಾವಣೆ ನಡೆಯಿತು. ಇದಕ್ಕೂ ಮುನ್ನ 11 ಸ್ಥಾನಗಳಿಗೆ ನಾಮಪತ್ರ ಸಲ್ಲಿಸಿದ್ದ 26 ಮಂದಿ ಅಭ್ಯರ್ಥಿಗಳು ಮನೆ ಮನೆ ಭೇಟಿ ಚುನಾವಣಾ ಪ್ರಚಾರ ನಡೆಸಿ ಮತದಾರರ ಮನಸೆಳೆಯುವ ಪ್ರಯತ್ನ ಮಾಡಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.