ನಾವೂರು ಗ್ರಾಮದ ಅಭಿವೃದ್ಧಿ ವಂಚಿತ ಪ್ರದೇಶಕ್ಕೆ ತಾಲೂಕು ಮಟ್ಟದ ಅಧಿಕಾರಿಗಳ ಭೇಟಿ

ನಾವೂರು: ನಾವೂರು ಗ್ರಾಮದ ಅಭಿವೃದ್ಧಿ ವಂಚಿತ ಪ್ರದೇಶಗಳ ಬಗ್ಗೆ ಕಳೆದ ವಾರದ ಸುದ್ದಿ ಬಿಡುಗಡೆ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟವಾದ ಬೆನ್ನಿಗೇ ಸದ್ರಿ ಪ್ರದೇಶದ ವೀಕ್ಷಣೆಗೆ ತಾಲೂಕು ಮಟ್ಟದ ಸಂಬಂಧಿತ ಅಧಿಕಾರಿಗಳು ಭೇಟಿ ನೀಡಿದರು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಕೆ.ಇ ಜಯರಾಂ, ಸಮಾಜ ಕಲ್ಯಾಣಾಧಿಕಾರಿ ಎಚ್.ಎಂ ಪಾಟೀಲ್, ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಕಿರಣ್, ಉದ್ಯೋಗ ಖಾತರಿ ಯೋಜನೆಯ ಉಪ ನಿರ್ದೇಶಕರು, ಜಿ.ಪಂ ಇಂಜಿನಿಯರಿಂಗ್ ಉಪ ವಿಭಾಗದ ಹರೀಶ್ ಕಾರಿಂಜ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಶೋಕ್ ಮೊದಲಾದವರು ನಿಯೋಗದಲ್ಲಿದ್ದರು.


ಈ ವೇಳೆ ಸ್ಥಳೀಐ ಪಂಚಾಯತ್ ಕಡೆಯಿಂದ ಅಧ್ಯಕ್ಷೆ ಲಲಿತಾ, ಉಪಾಧ್ಯಕ್ಷ ಗಣೇಶ್, ಸದಸ್ಯ ಹರೀಶ್ ಸಾಲಿಯಾನ್ ಮೂರ್ತಾಜೆ ಮೊದಲಾದವರು ಉಪಸ್ಥಿತರಿದ್ದರು.
ಈ ಸಮಸ್ಯೆಯನ್ನು ಪತ್ರಿಕೆ ಮೂಲಕ ಸಾಮಾಜಿಕವಾಗಿ ಬಿಂಬಿಸಿದ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಪ್ರಧಾನ ಕಾರ್ಯದರ್ಶಿ ಜಯಾನಂದ ಪಿಲಿಕಲ, ಸಂಚಾಲಕ ಶೇಖರ್ ಲಾಲ ಅವರುಗಳು ಉಪಸ್ಥಿತರಿದ್ದು ಸಮಸ್ಯೆಗಳನ್ನು ಅಧಿಕಾರಿಗಳ ನಿಯೋಗದ ಮುಂದೆ ಬಿಚ್ಚಿಟ್ಟರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.