ಗುಂಡೂರಿ: ಮಹಿಳೆ ಆತ್ಮಹತ್ಯೆಗೆ ಶರಣು

ವೇಣೂರು: ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಗುಂಡೂರಿನಲ್ಲಿ ಜು.18 ರಂದು ಮುಂಜಾನೆ ಸಂಭವಿಸಿದೆ.
ಗುಂಡೂರಿ ಗ್ರಾಮದ ನೇರಳಪಲ್ಕೆ ನಿವಾಸಿ ಶ್ರೀಮತಿ ಭಾರತಿ (38) ಆತ್ಮಹತೆಗೆ ಶರಣಾದವರು. ಬಂಟ್ವಾಳ ತಾಲೂಕಿನ ಮಣಿಹಳ್ಳ ನಿವಾಸಿ ಮಾಧವ ಪೂಜಾರಿಯವರಿಗೆ ಕಳೆದ 20 ವರ್ಷಗಳ ಹಿಂದೆ ಭಾರತಿಯವರನ್ನು ಮದುವೆ ಮಾಡಿಕೊಡಲಾಗಿತ್ತು.

ಅನ್ಯೋನ್ಯವಾಗಿದ್ದ ದಂಪತಿ ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು. ಆದರೆ ಗಂಡನೊಂದಿಗೆ ಆ ಬಳಿಕ ವೈಮನಸ್ಸು ಉಂಟಾಗಿ, ಕಳೆದ ಸುಮಾರು 8 ವರ್ಷಗಳಿಂದ ಗಂಡನಿಂದ ದೂರವಾಗಿ ಇಬ್ಬರು ಪುತ್ರಿಯರೊಂದಿಗೆ ಗುಂಡೂರಿಯ ತಾಯಿ ಮನೆಯಲ್ಲೇ ನೆಲೆಸಿದ್ದರು. ಮೂಲವ್ಯಾದಿ ಖಾಯಿಲೆಯಿಂದ ಬಳಲುತ್ತಿದ್ದ ಇವರು ಕಳೆದ 6 ತಿಂಗಳಿನಿಂದ ಖಾಯಿಲೆ ಉಲ್ಬಣಗೊಂಡಿತ್ತು ಎನ್ನಲಾಗಿದೆ. ಗುರುವಾರ ಮನೆಮಂದಿ ಮಲಗಿದ್ದ ವೇಳೆ ಬೆಳಿಗ್ಗೆ 5.30೦ರ ಸುಮಾರಿಗೆ ಮನೆ ಸಮೀಪದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವೇಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.