HomePage_Banner_
HomePage_Banner_
HomePage_Banner_

ಬಿದ್ದು ಗಾಯಗೊಂಡಿರುವ ವಿಕಲಚೇತನ ಸುಮಂತ್ ನೆರವಿಗೆ ಮನವಿ

ವಿಮುಕ್ತಿ ಸಂಸ್ಥೆ ನಡೆಸುವ ದಯಾ ವಿಶೇಷ ಶಾಲೆ ವಿದ್ಯಾರ್ಥಿ ಸುಮಂತ್ (8 ವ.) ಡೌನ್ ಸಿಂಡ್ರೋಮ್ ಎಂಬ ಅನುವಂಶೀಯ ಖಾಯಿಲೆಯಿಂದ ಬಳಲುತ್ತಿದ್ದು ಈ ಮಧ್ಯೆ ಜುಲೈ 8 ರಂದು ಮನೆಯಲ್ಲಿ ಆಕಸ್ಮಿಕವಾಗಿ ಆಯತಪ್ಪಿ ಬಿದ್ದು, ವೈದ್ಯಕೀಯ ತಪಾಸಣೆಯ ಬಳಿಕ ಬಹಳ ಗಂಭೀರ ಸ್ವರೂಪದ ಸಮಸ್ಯೆ ಕಂಡು ಬಂದಿದೆ. ಅವರ ಕುತ್ತಿಗೆಯ ಮೂಳೆ ಜಾರಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇದೀಗ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಗಿದೆ.
ಘಟನೆ ನಡೆದ ತಕ್ಷಣವೇ ಹತ್ತಿರದ ಕ್ಲಿನಿಕ್‌ಗೆ ಕರೆದೊಯ್ದು ನಂತರ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ವರ್ಗಾಹಿಸಲಾಯಿತು. ಇದೀಗ ವೈದ್ಯರ ಅಭಿಪ್ರಾಯದಂತೆ 3 ಲಕ್ಷಕ್ಕೂ ಹೆಚ್ಚು ಹಣ ಬೇಕಾಗಬಹುದು ಎಂದು ತಿಳಿಸಿದ್ದಾರೆ. ಅವರ ಕುಟುಂಬವು ಆರ್ಥಿಕವಾಗಿ ತೀರಾ ಹಿಂದುಳಿದಿದ್ದು ಇಷ್ಟು ದೊಡ್ಡ ಮೊತ್ತವನ್ನು ಭರಿಸಲು ಅಸಾಧ್ಯವಾಗಿದೆ. ಅವರ ಪೋಷಕರು ಕೂಲಿ ಕೆಲಸವನ್ನೇ ಅವಲಂಬಿಸಿದ್ದು 3 ಸೆಂಟ್ಸ್ ಜಾಗದಲ್ಲಿ ಜೀವಿಸುತ್ತಿದ್ದಾರೆ. ಆದ್ದರಿಂದ ದಾನಿಗಳು ಈ ಬಾಲಕನ ಚಿಕಿತ್ಸೆಗಾಗಿ ಗರಿಷ್ಟ ನೆರವು ನೀಡಿ ಸಹಕರಿಸಬೇಕಾಗಿ ವಿನಂತಿಸಿಕೊಂಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಕುಶಾಲಪ್ಪ ಗೌಡ9591238118ಖಾತೆದಾರ: ಪಾರ್ವತಿ, A/c.No: 01202250007716 . IFSC code : SYNB 0000120 ಸಿಂಡಿಕೇಟ್ ಬ್ಯಾಂಕ್ ಬೆಳ್ತಂಗಡಿ ಶಾಖೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.