ರಸ್ತೆಗೆ ಹಾಕಲಾಗಿದ್ದ ಬೇಲಿ ತೆರವಿಗೆ ಹೈಕೋರ್ಟ್ ಆದೇಶ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ತಹಶೀಲ್ದಾರ್ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ

ಉಜಿರೆ: ಇಲ್ಲಿನ ತಿಮರೋಡಿ ಎಂಬಲ್ಲಿ ಸಾರ್ವಜನಿಕ ಬಳಕೆಯ ರಸ್ತೆಗೆ ಹಾಕಲಾಗಿದ್ದ ಬೇಲಿಯನ್ನು ತೆರವುಗೊಳಿಸುವಂತೆ ರಾಜ್ಯ ಹೈಕೋರ್ಟ್ ನೀಡಿದ ಆದೇಶದ ಮೇರೆಗೆ ಜು. 16 ರಂದು ತಹಶೀಲ್ದಾರ್ ಗಣಪತಿ ಶಾಸ್ತ್ರಿ ಅವರ ನೇತೃತ್ವದಲ್ಲಿ ಪೊಲೀಸ್ ಭದ್ರತೆಯೊಂದಿಗೆ ತೆರವು ಕಾರ್ಯಾಚರಣೆ ನಡೆಸಲಾಯಿತು.

ಈ ಸಂದರ್ಭ ಬೇಲಿ ಹಾಕಿದ್ದಾರೆಂಬ ಆರೋಪ ಎದುರಿಸುತ್ತಿರುವ ಮಹೇಶ್ ಶೆಟ್ಟಿ, ಈ ಹಿಂದೆ ರಸ್ತೆ ನಿರ್ಮಾಣದಿಂದ ತೊಂದರೆಯಾಗಲಿದೆ, ಅದಕ್ಕೆ ಅವಕಾಶ ಕೊಡಬಾರದೆಂದು ಆಕ್ಷೇಪಣೆ ಸಲ್ಲಿಸಿದ್ದ ಅಕ್ರಮ-ಸಕ್ರಮ ಅರ್ಜಿದಾರರಾದ ಸರೋಜ ಮಹೇಶ್ ಸ್ಥಳದಲ್ಲಿ ಉಪಸ್ಥಿತರಿದ್ದರು. ದೂರುದಾರರಾದ ಜಯಪ್ರಕಾಶ್ ಶೆಟ್ಟಿ ಮತ್ತು ಭಾಸ್ಕರ ನಾಯ್ಕ ಅವರೂ ಕೂಡ ಈ ವೇಳೆ ಹಾಜರಿದ್ದರು.
ತಹಶೀಲ್ದಾರರು ಸ್ಥಳದಲ್ಲಿ ಹೈಕೋರ್ಟ್ ಆದೇಶವನ್ನು ಓದಿ ಹೇಳಿ 94 ಲಿಂಕ್ಸ್ (19ಮೀಟರ್) ಉದ್ದ, ಮತ್ತು20ಲಿಂಕ್ಸ್ (4ಮೀಟರ್) ಅಗಲದಲ್ಲಿ ಜೆಸಿಬಿ ಮೂಲಕ ರಸ್ತೆ ನಿರ್ಮಾಣ ಮಾಡಿದರು. ಈ ವೇಳೆ ಮಹೇಶ್ ಶೆಟ್ಟಿ ಅವರು ತಹಶೀಲ್ದಾರರ ಬಳಿ ದೂರಿಕೊಂಡು, ಇದರ ಹಿಂದೆ ಷಡ್ಯಂತ್ರ ಇದೆ ಎಂದು ಹಲವು ತಾಸು ವಾದ ಮಾಡಿದರು.

ತಹಶೀಲ್ದಾರ್, ಕಂದಾಯ ನಿರೀಕ್ಷಕರಿಗೆ ಖುದ್ದು ಹಾಜರಾಗುವಂತೆ ಹೈಕೋರ್ಟ್ ಸೂಚನೆ: ಹೈಕೋರ್ಟ್ ಆದೇಶದಲ್ಲಿ ತಿಳಿಸಿದಂತೆ ಸ್ಥಳದಲ್ಲಿ ಕೈಗೊಂಡ ಜಾರಿ ಕ್ರಮದ ಬಗ್ಗೆ ಜು. 17 ರಂದು ವರದಿ ನೀಡುವಂತೆ ತಿಳಿಸಿದ್ದು, ಈ ವೇಳೆ ದೂರುದಾರರು, ತಮಗೆ ಸ್ಥಳದಲ್ಲಿ ಕೈಗೊಂಡ ಕ್ರಮ ಸಮಾಧಾನಕಾರವಾಗಿಲ್ಲ ಎಂದು ಆಕ್ಷೇಪಣೆ ಸಲ್ಲಿಸಿದ್ದೂ ಮಾತ್ರವಲ್ಲದೆ ಇದೇ ಕಾರಣಕ್ಕೆ ಮಹಜರಿಗೆ ಸಹಿ ಮಾಡದೆ ಇರುವುದನ್ನು ನ್ಯಾಯಾಲಯದ ಗಮನಕ್ಕೆ ತಂದರು. ಈ ವೇಳೆ ಖುದ್ದು ತಹಶೀಲ್ದಾರ್ ಮತ್ತು ಕಂದಾಯ ನಿರೀಕ್ಷಕರು ಜು. 18ರಂದು(ಇಂದು) ಹೈಕೋರ್ಟ್‌ಗೆ ಹಾಜರಾಗುವಂತೆ ಸೂಚನೆ ನೀಡಿ ವಿಚಾರಣೆ ಮುಂದೂಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.