ಕಂಟೈನರ್‌ನಲ್ಲಿ ಅಕ್ರಮ ಜಾನುವಾರು ಸಾಗಾಟ ಪತ್ತೆ

Advt_NewsUnder_1
Advt_NewsUnder_1

7 ಮಂದಿ ಆರೋಪಿಗಳ ಸೆರೆ- 2 ವಾಹನಗಳ ವಶ

ಬೆಳ್ತಂಗಡಿ: ಮಹಾರಾಷ್ಟ ಕೊಲ್ಲಾಪುರದಿಂದ ಕಾಸರಗೋಡಿಗೆ ಕಂಟೈನರ್‌ವೊಂದರಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಪ್ರಕರಣವನ್ನು ಬಂಟ್ವಾಳ ಉಪವಿಭಾಗದ ಎಎಸ್‌ಪಿ ಸೈದುಲ್ಲಾ ಅಡಾವತ್ ನೇತೃತ್ವದ ಪೊಲೀಸ್ ತಂಡ ಪತ್ತೆ ಹಚ್ಚಿ7 ಮಂದಿ ಆರೋಪಿಗಳನ್ನು ಬಂಧಿಸಿದ ಘಟನೆ ಜು.13ರಂದು ವರದಿಯಾಗಿದೆ.

ಕಂಟೈನರ್ ವಾಹನ ಚಾಲಕ ವೇಣೂರು ಮೂಡಿಕೋಡಿ ನಿವಾಸಿ ಹೈದರ್(39ವ), ಸಹ ಚಾಲಕ ಕಾಸರಗೋಡು ಅಲಂಬಾಡಿ ನಿವಾಸಿ ಅಬ್ದುಲ್ ರಹಿಮಾನ್(34ವ), ಹಾಸನ ಬೇಲೂರು ನಿವಾಸಿ ಮಂಜೇಗೌಡ(35ವ), ಕಾಸರಗೋಡು ವಿದ್ಯಾನಗರ ನಿವಾಸಿ ಬಾಬು(58ವ), ಲಾರಿಗೆ ಬೆಂಗಾವಲಾಗಿ ಕಾರಿನಲ್ಲಿ ಬರುತ್ತಿದ್ದ ಕಾಸರಗೋಡು ನಿವಾಸಿ ಅಬ್ದುಲ್ ರಹಿಮಾನ್(20ವ), ಕಾಸರಗೋಡು ಅಲಂಬಾಡಿ ನಿವಾಸಿ ಮಹಮ್ಮದ್ ಮುಸ್ತಾಫ(20ವ), ಚಾಲಕ ಕಾಸರಗೋಡು ಅಲಂಬಾಡಿ ನಿವಾಸಿ ಮಹಮ್ಮದ್ ಅಕ್ಬರ್(27ವ) ಬಂಧಿತ ಆರೋಪಿಗಳು.

ಖಚಿತ ಮಾಹಿತಿಯನ್ವಯ ಬಂಟ್ವಾಳ ವಿಭಾಗದ ಎಎಸ್‌ಪಿ ನೇತೃತ್ವದ ಪೊಲೀಸರ ತಂಡ ಚಾರ್ಮಾಡಿ ಮೂಲಕ ಬೆಳ್ತಂಗಡಿಗೆ ಆಗಿ ಹೋಗುತ್ತಿದ್ದ ಕಂಟೈನರ್‌ನ್ನು ಪಣಕಜೆ ಎಂಬಲ್ಲಿ ತಡೆದು ತಪಾಸಣೆ ನಡೆಸಿದಾಗ ಜಾನುವಾರು ಸಾಗಾಟದ ಭಾರೀ ಅಕ್ರಮ ಬೆಳಕಿಗೆ ಬಂದಿತ್ತು. ಆರೋಪಿಗಳಿಂದ 9 ಲಕ್ಷ ರೂ. ಮೌಲ್ಯದ ವಾಹನ ಮತ್ತು 15ಲಕ್ಷ ರೂ. ಮೌಲ್ಯದ 15ಕೋಣ, 2 ಎಮ್ಮೆಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.


ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ, ಎಸ್.ಐ ರವಿ ಬಿ.ಎಸ್, ಧರ್ಮಸ್ಥಳ ಠಾಣೆಯ ಎಸ್.ಐ ಅವಿನಾಶ್ ಮತ್ತು ಸಿಬಂದಿಗಳು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.