ಗಾಳಿ -ಮಳೆ: ಮರ ಬಿದ್ದು ಮನೆಗೆ ಹಾನಿ; ಕಂದಾಯ ಇಲಾಖೆಯಿಂದ 46700ಪರಿಹಾರ

ಪಣೆಜಾಲು: ಕುವೆಟ್ಟು ಗ್ರಾಮದ ಪಣೆಜಾಲು ಸಮೀಪದ ರತ್ನಗಿರಿ ಎಂಬಲ್ಲಿ ಜೊಹರಾ ಅವರ ವಾಸದ ಮನೆಯ ಮೇಲೆ ಮರಬಿದ್ದು ಬಹುತೇಕ ಭಾಗನಾಶವಾಗಿದೆ. ಜು. 12 ರಂದು ಸಂಜೆ ಸುರಿದ ಗಾಳಿ ಮಳೆಗೆ ಈ ಅವಘಡ ನಡೆದಿದೆ. ಮನೆಯಲ್ಲಿ ಮಹಿಳೆ ಜೊಹರಾ ಮತ್ತು ಮೂವರು ಮಕ್ಕಳು ಮಾತ್ರ ವಾಸಿಸುತ್ತಿದ್ದು ಇವರು ತೊಂದರೆಗೆ ಸಿಲುಕಿದ ವಿಚಾರವನ್ನು ಕುವೆಟ್ಟು ಗ್ರಾ.ಪಂ ಅಧ್ಯಕ್ಷ ಅಶೋಕ್ ಕೋಟ್ಯಾನ್ ಅವರು ಕಂದಾಯ ಇಲಾಖೆ ಗಮನಕ್ಕೆ ತಂದಿದ್ದಾರೆ.


ತಕ್ಷಣ ಸ್ಪಂದಿಸಿದ ತಹಶಿಲ್ದಾರ್ ಗಣಪತಿ ಶಾಸ್ತ್ರಿ ಹಾಗೂ ತಂಡ ಸ್ಥಳಕ್ಕೆ ಭೇಟಿ ನೀಡಿ ಕಂದಾಯ ಇಲಾಖೆ ಮೂಲಕ ತುರ್ತು ಪರಿಹಾರ ನಿಧಿಯಿಂದ 46700 ರೂ. ಮಂಜೂರುಗೊಳಿಸಿ ಚೆಕ್ ಹಸ್ತಾಂತರ ನಡೆಸಿದರು.
ಈ ಸಂದರ್ಭ ಕಂದಾಯ ನಿರೀಕ್ಷಕ ರವಿ ಕುಮಾರ್, ಸಿಬ್ಬಂದಿ ಉಷಾ, ಅಮೀನ್ ಲಾಡ್ಕಾನ್, ಅಂಕಿತ್ ಜೈನ್ ಇವರು ಉಪಸ್ಥಿತರಿದ್ದರು. ತುರ್ತು ಪರಿಹಾರ ನಿಧಿಯಿಂದ ಬಿದ್ದ ಮರವನ್ನು ತೆರವುಗೊಳಿಸಿ ಭಾಗಶಃ ಹಾನಿಯಾದ ಮನೆಗೆ ಟರ್ಪಾಲ್ ಹಾಕಿ ತುರ್ತು ವ್ಯವಸ್ಥೆ ಕಲ್ಪಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.