ರಕ್ತೇಶ್ವರಿಪದವು ಶಾಲಾ ಸಂಸತ್ತು ರಚನೆ

ರಕ್ತೇಶ್ವರಿಪದವು: ಇಲ್ಲಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ 2019-20ನೇ ಸಾಲಿನ ಶಾಲಾಮಂತ್ರಿ ಮಂಡಲವನ್ನು ರಚಿಸಲಾಯಿತು. ಶಾಲಾ ನಾಯಕಿಯಾಗಿ ಮಾನ್ಯ(5ನೇ), ಉಪನಾಯಕಿಯಾಗಿ ಅಂಜಲಿ(4ನೇ) ಆಯ್ಕೆಯಾದರು. ವಿದ್ಯಾ ಮತ್ತು ಶಿಸ್ತು ಮಂತ್ರಿಯಾಗಿ ಅಕ್ಷಯ್ ಕೆ(5ನೇ), ಉಪ ವಿದ್ಯಾ ಮತ್ತು ಶಿಸ್ತು ಮಂತ್ರಿಯಾಗಿ ಮಿಥೇಶ್ ಕುಮಾರ್ ಕೆ(4ನೇ), ಸ್ವಚ್ಛತಾ ಮಂತ್ರಿಯಾಗಿ ಪ್ರಿಯಾಂಕ(5ನೇ), ಉಪ ಸ್ವಚ್ಛತಾ ಮಂತ್ರಿಯಾಗಿ ರಚನಾ ಎಂ(4ನೇ), ಆಹಾರ-ಆರೋಗ್ಯ ಮಂತ್ರಿಯಾಗಿ ಪ್ರಹ್ಲಾದ್(5ನೇ), ಉಪಆಹಾರ-ಆರೋಗ್ಯ ಮಂತ್ರಿಯಾಗಿ ಚದ್ಮಿಕ(4ನೇ), ನೀರಾವರಿ ಮತ್ತು ಕೃಷಿ ಮಂತ್ರಿಯಾಗಿ ಸುಶಾಂತ್(5ನೇ), ಉಪ ನೀರಾವರಿ ಮತ್ತು ಕೃಷಿ ಮಂತ್ರಿಯಾಗಿ ಮನ್ವಿತ್ ಆರ್ ಜೆ(4ನೇ), ಸಾಹಿತ್ಯ-ಸಾಂಸ್ಕೃತಿಕ ಮಂತ್ರಿಯಾಗಿ ಪ್ರಜ್ವಲ್(5ನೇ), ಉಪ ಸಾಹಿತ್ಯ-ಸಾಂಸ್ಕೃತಿಕ ಮಂತ್ರಿಯಾಗಿ ಕೃತಿಕಾ(4ನೇ), ಸಂಸತ್ತಿನ ಸಭಾಧ್ಯಕ್ಷೆಯಾಗಿ ವನ್ಯ(4ನೇ) ವಿರೋಧ ಪಕ್ಷದ ನಾಯಕನಾಗಿ ಪ್ರಸಾದ್(5ನೇ), ವಿರೋಧ ಪಕ್ಷದ ಉಪನಾಯಕನಾಗಿ ಮೋಕ್ಷಿತ್ ಕೆ(4ನೇ) ಆಯ್ಕೆಯಾದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯಶಿಕ್ಷಕಿ ಚೈತ್ರಪ್ರಭಾ ಶ್ರೀಶಾಂ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿ, ಶುಭಹಾರೈಸಿದರು. ಸಹಶಿಕ್ಷಕಿ ಲಾವಣ್ಯ ಕೆ, ಕಂಪ್ಯೂಟರ್ ಗೌರವ ಶಿಕ್ಷಕಿ ವಿದ್ಯಾಶ್ರೀ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.