HomePage_Banner_
HomePage_Banner_
HomePage_Banner_

ಕಲ್ಲೇರಿ: ನವಚೇತನ ತೋಟಗಾರಿಕೆ ಕೇಂದ್ರ ವತಿಯಿಂದ ಅಡಿಕೆ ಮರ ಹತ್ತುವ ಮೋಟಾರ್ ಪ್ರಾತ್ಯಕ್ಷಿಕೆ

ಕಲ್ಲೇರಿ: ಇಲ್ಲಿಯ ನವಚೇತನ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ವತಿಯಿಂದ ಅಡಿಕೆ ಮರ ಹತ್ತುವ 2 ಸ್ಟ್ರೋಕ್ ಮೋಟಾರು ಇಂಜಿನ್ ಪ್ರಾತ್ಯಕ್ಷಿಕೆ ಕಲ್ಲೇರಿ ಹಾಲು ಉತ್ಪಾದಕರ ಸಂಘದ ಅಡಿಕೆ ತೋಟದಲ್ಲಿ ನಡೆಯಿತು.
ನವಚೇತನ ತೋಟಗಾರಿಕೆ ರೈತ ಉತ್ಪಾದಕರ ಕಂಪೆನಿ ಅಧ್ಯಕ್ಷ ದುಗ್ಗಪ್ಪ ಗೌಡ ಪೊಸೊಂದೋಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ತೋಟಗಾರಿಕೆ ಕಂಪನಿ ವತಿಯಿಂದ ರೈತರಿಗೆ ಉಪಯೋಗವಾಗುವ ಎಲ್ಲಾ ರೀತಿಯ ಮಾಹಿತಿ, ಸಹಕಾರ ನೀಡುವುದು ಹಾಗೂ ಕೃಷಿಗೆ ಉತ್ತಮ ಮಾರುಕಟ್ಟೆ ಒದಗಿಸಲು, ಕೃಷಿಕರಿಗೆ ವಿವಿಧ ರೀತಿಯ ಸಹಕಾರ ನೀಡಲು ಮುಂದಾಗಿದ್ದೇವೆ. ಕೃಷಿಕರು ಇದರ ಪ್ರಯೋಜನ ಪಡೆಯುವಂತೆ ತಿಳಿಸಿದರು.

ಅಡಿಕೆ ಕೃಷಿ ತೋಟದಲ್ಲಿ ಅಡಿಕೆ ಕೀಳುವ ಮತ್ತು ಕೊಳೆ ರೋಗ ನಿಯಂತ್ರಣಕ್ಕೆ ಜೌಷಧಿ ಬೋರ್ಡೊ ದ್ರಾವಣ ಸಿಂಪಡಿಸಲು ಕೆಲಸಗಾರರ ಸಮಸ್ಯೆಯಿಂದಾಗಿ ಅಡಿಕೆ ಕೃಷಿಯಲ್ಲಿ ತೊಂದರೆ ಅನುಭವಿಸಿವುದನ್ನು ಗಮನಿಸಿ, ಬಂಟ್ವಾಳ ತಾಲೂಕಿನ ಸಜೀಪ ಪಣೋಲಿಬೈಲು ಸಮೀಪ ಗಣಪತಿ ಭಟ್ಟರು ಸುಮಾರು ೫ ವರ್ಷಗಳ ಕಾಲ ಸತತ ಸಂಶೋಧನೆ ನಡೆಸಿ ಅಡಿಕೆ ಮರ ಏರುವ  ಬೈಕ್ ಯಂತ್ರ ವ್ಯವಸ್ಥೆಯನ್ನು ಆವಿಷ್ಕರಿಸಿದ್ದು, ಈ ಅವಿಷ್ಕಾರಕ್ಕೆ ಮಹೀಂದ್ರಾ ಕಂಪೆನಿಯ ಮುಖ್ಯಸ್ಥರು ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಅಡಿಕೆ ಮರವನ್ನು ಹತ್ತುವ ಬಗ್ಗೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆಯನ್ನು ನೀಡಿದರು. ಹಲವಾರು ಕೃಷಿಕರು ಮರ ಹತ್ತುವ ಪ್ರಯತ್ನ ಮಾಡಿ ಸಂತೋಷ ಪಡೆದಿರುತ್ತಾರೆ. ಕಲ್ಲೇರಿ ನವಚೇತನ ತೋಟಗಾರಿಕಾ ಕಂಪೆನಿ ಉಪಾಧ್ಯಕ್ಷ ವಿನ್ಸೆಂಟ್ ಬ್ರಾಗ್ಸ್, ಸದಸ್ಯರಾದ ಸತ್ಯಶಂಕರ, ಪುರಂದರ ಎನ್, ತಿಮ್ಮಯ್ಯ ಗೌಡ, ಕಾರ್ಯನಿರ್ವಹಣಾಧಿಕಾರಿ ನಾರಾಯಣ ಶೆಟ್ಟಿ, ಲೆಕ್ಕಪರಿಶೋಧಕ ನಿತಿನ್ ಕುಮಾರ್, ಹಾಲು ಉತ್ಪಾದಕರ ಸಂಘದ ಪದಾಧಿಕಾರಿಗಳು, ಸಾಹಿತಿ ಪಾ| ರಾಮಕೃಷ್ಣ ಶಾಸ್ತ್ರಿ, ರಾಜರಾಮ್ ಕಾಡೂರು, ತಿಲಕ್ ಉರುವಾಲು, ಧರ್ಣಪ್ಪ ಗೌಡ ಅಂಡಿಲ, ಪಂಚಾಯತ ಸದಸ್ಯ ರತ್ನಾಕರ ರಾವ್, ಹಾಲು ಉತ್ಪಾದಕರ ಸಂಘ ಕಾರ್ಯನಿರ್ವಹಣಾ ಅಧಿಕಾರಿ ಜಯರಾಜ್ ಜೈನ್, ಸುಸುತ್ರ ಭಟ್, ಶ್ರೀಶ ಕುಮಾರ್ ಭಟ್, ಆದಂ ಮಡಪಾಡಿ, ಯೊಗೀಶ್ ಪೊಸೊಂದೋಡಿ, ವಿವೇಕ್ ಪೊಸೊಂದೋಡಿ, ರತನ್ ಕುಮಾರ್, ರವೀಂದ್ರ ಕುಮಾರ್, ಕಿಶೋರ್, ಜಗನ್ನಾಥ, ಮಾದವ ಗೌಡ, ಪ್ರಭಾಕರ ಗೌಡ ಹಾಗೂ ಸುಮಾರು 200 ಕ್ಕೂ ಹೆಚ್ಚು ಕೃಷಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.