ರಾಜ್ಯ ನಿವೃತ್ತ ನೌಕರ ಸಂಘದ ಮಹಾಸಭೆ, ಹಿರಿಯರಿಗೆ ಸನ್ಮಾನ

ಬೆಳ್ತಂಗಡಿ: ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಬೆಳ್ತಂಗಡಿ ಶಾಖೆಯ 2018-19ನೇ ಸಾಲಿನ ವಾರ್ಷಿಕ ಮಹಾಸಭೆ ಜು.6 ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಸಂಘದ ಅಧ್ಯಕ್ಷ ಬಿ.ವಿಠಲ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರುಗಿತು.
ಈ ಸಂದರ್ಭದಲ್ಲಿ 75 ವರ್ಷ ಪೂರೈಸಿದ ಸಂಘದ ಹಿರಿಯ ಸದಸ್ಯರುಗಳಾದ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ನಾಭಿರಾಜ ಇಂದ್ರ, ರಮಾನಾಥ ಯು, ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ಮಾಲತಿ ಇವರುಗಳನ್ನು ಸನ್ಮಾನಿಸಲಾಯಿತು. ಸಂಘದ ಹಿರಿಯ ಸದಸ್ಯರುಗಳಾದ ಶಿಕ್ಷಣ ಇಲಾಖೆಯ ವೆಂಕಟ್ರಮಣ ಭಟ್, ರಘುನಾಥ ರೈ, ನಾಗೇಶ್ ಶೆಣೈ ಇವರುಗಳು ಸನ್ಮಾನಿಸಿದರು.
ಸಂಘದ ಉಪಾಧ್ಯಕ್ಷರುಗಳಾದ ಸನ್ಮತ್ ಕುಮಾರ್, ಧನಲಕ್ಷ್ಮೀ, ಕಾರ್ಯದರ್ಶಿ ಹೆಚ್ ಪದ್ಮಕುಮಾರ್, ಕೋಶಾಧಿಕಾರಿ ವಿಶ್ವಾಸ್ ರಾವ್, ಜೊತೆ ಕಾರ್ಯದರ್ಶಿ ಐರಿನ್ ಪಿಂಟೋ ಮತ್ತು ನಿವೃತ್ತ ನೌಕರ ಸಂಘದ ಸದಸ್ಯರುಗಳು ಹಾಜರಿದ್ದರು.
ಸಂಘದ ಉಪಾಧ್ಯಕ್ಷ ಸನ್ಮತ್ ಕುಮಾರ್ ಸ್ವಾಗತಿಸಿ, ಕಾರ್ಯದರ್ಶಿ ಹೆಚ್ ಪದ್ಮಕುಮಾರ್ ವರದಿ ವಾಚಿಸಿದರು. ಕೋಶಾಧಿಕಾರಿ ವಿಶ್ವಾಸ್ ರಾವ್ ಲೆಕ್ಕಪತ್ರ ಮಂಡಿಸಿದರು. ಲೆಕ್ಕಪತ್ರ ಪರಿಶೋಧಕ ರಮಾನಂದ ರಾವ್ ವಿವರ ನೀಡಿದರು. ಹೊಸದಾಗಿ ಸೇರ್ಪಡೆಗೊಂಡ ಕಾಸಿಂ ಮಲ್ಲಿಗೆ ಮನೆ, ನಾರಾವಿ ಶಿಕ್ಷಕಿ ಪ್ರೇಮಾ ತಮ್ಮನ್ನು ಪರಿಚಯ ಮಾಡಿಕೊಂಡರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.