ನಿಡ್ಗಲ್- ಪಜಿರಡ್ಕ ರಸ್ತೆ ಅವ್ಯವಸ್ಥೆ

Advt_NewsUnder_1
Advt_NewsUnder_1

ಕಲ್ಮಂಜ: ಇಲ್ಲಿಯ ನಿಡ್ಗಲ್ ಪೇಟೆಯಿಂದ ಪಜಿರಡ್ಕ ದೇವಸ್ಥಾನಕ್ಕೆ ಹೋಗುವ ಅನಾದಿಕಾಲದಿಂದಲೂ ಇರುವ ರಸ್ತೆಯು ಕೆಸರು ಕೊಂಪೆಯಾಗಿದ್ದು, ಇಲ್ಲಿ ಸಾರ್ವಜನಿಕರು ನಡೆದಾಡಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಪೂರ್ತಿ ಹೊಂಡಗಳಿಂದ ಕೂಡಿದ್ದು, ವಾಹನ ಸವಾರರು ಭೀತಿಯಿಂದ ವಾಹನ ಚಲಾಯಿಸುವ ಪರಿಸ್ಥಿತಿ ಒದಗಿಬಂದಿದೆ. ಈ ರಸ್ತೆಯಲ್ಲಿ ನಿಡ್ಗಲ್ ಬಳಿ ಇರುವ ಕಾಲುಸಂಕ ಬೀಳುವ ಸ್ಥಿತಿಗೆ ಬಂದಿದ್ದು, ಅನಾಹುತ ಸಂಭವಿಸುವ ಮೊದಲೇ ಎಚ್ಚೆತ್ತು ಕೊಳ್ಳಬೇಕಾಗಿದೆ.


ಕಲ್ಮಂಜ ದೇವಸ್ಥಾನವು ಊರಿನ ದೇವಸ್ಥಾನವಾಗಿರುವ ಕಾರಣ ಇಲ್ಲಿ ಸಾವಿರಾರು ಜನ, ವಾಹನಗಳು ಓಡಾಡುತ್ತಿದ್ದು, ರಸ್ತೆ ದುರಸ್ತಿಕಾರ್ಯ ಮಾತ್ರ ಮರೀಚಿಕೆಯಾಗಿಯೇ ಉಳಿದಿದೆ.
ಇನ್ನಾದರೂ ಶಾಸಕರು, ಜನಪ್ರತಿನಿಧಿಗಳು, ಈ ಕಡೆ ಗಮನಹರಿಸಿ ಈ ರಸ್ತೆಯನ್ನು ಕಾಂಕ್ರಿಟೀಕರಣ (ಡಾಂಬರೀಕರಣ)ಗೊಳಿಸಲು ಅನುದಾನವನ್ನು ಸರಕಾರದಿಂದ ಬಿಡುಗಡೆಮಾಡಿಸಿ ಸಂಚಾರಕ್ಕೆ ಯೋಗ್ಯ ರಸ್ತೆಯನ್ನಾಗಿ ಮಾಡಿಕೊಡಬೇಕೆಂದು ಗ್ರಾಮಸ್ಥರ ಆಗ್ರಹ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.