ಅಮೆರಿಕದ ಮಣ್ಣಲ್ಲಿ ಗಂಡುಕಲೆಯ ಗೆಜ್ಜೆ ನಾದ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

5ನೇ ಬಾರಿ ಸಾಗರ ದಾಟಿದ ಯಕ್ಷಸಾಧಕ ಧರ್ಮಸ್ಥಳ ಚಂದ್ರಶೇಖರ

ಧರ್ಮಸ್ಥಳ: ಅಮೆರಿಕ ದೇಶದ 15 ಕ್ಕೂ ಅಧಿಕ ರಾಜ್ಯಗಳಲ್ಲಿ ಜೂ. 29 ರಿಂದ ಆರಂಭವಾಗಿರುವ ಯಕ್ಷ ಪರ್ಯಟನೆ ತಂಡದಲ್ಲಿ ಕರಾವಳಿಯ ಗಂಡು ಕಲೆ ಯಕ್ಷಗಾನದ ಗಟ್ಟಿ ಹೆಜ್ಜೆ ಹಾಕುತ್ತಿರುವವರು ಧರ್ಮಸ್ಥಳ ಚಂದ್ರಶೇಖರ ಅವರು. ಕಳೆದ 29 ವರ್ಷಗಳಿಂದ ಯಕ್ಷ ಕಲೆಗೆ ತನ್ನ ಬದುಕನ್ನು ಮುಡಿಪಾಗಿರಿಸಿಕೊಂಡಿರುವ ಅವರ ಈ ಸಾಗರದಾಚೆಗಿನ ಯಶಸ್ವಿ ಪಯಣ ಇದು ಐದನೇಯದ್ದು.
ಈ ಬಾರಿ ಅವರ ಪ್ರಯಾಣ ಜೋಡಣೆಯಾಗಿರುವುದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಅಮೆರಿಕದ ನ್ಯೂಜೆರ್ಸಿಯ ಪುತ್ತಿಗೆ ಮಠದಲ್ಲಿ ಆರಂಭವಾಗುತ್ತಿರುವ 34 ನೇ ಘಟಕ ಉದ್ಘಾಟನೆಯ ಕಾರ್ಯಕ್ರಮದ ಜೊತೆಗೆ. ಈ ಬಾರಿಯ ತಂಡ ಅಮೆರಿಕದ 12ರಾಜ್ಯಗಳಲ್ಲಿ ಯಕ್ಷಪರ್ಯಟನೆ ನಡೆಸಿ 15 ಕಾರ್ಯಕ್ರಮಗಳನ್ನು ಸಾದರ ಪಡಿಸುತ್ತಿದೆ.
2 ಗಂಟೆಗಳ ಯಕ್ಷ ಪ್ರದರ್ಶನ:
ಅಮೆರಿಕ ಜನರ ಮನೋಧರ್ಮಕ್ಕೆ ತಕ್ಕಂತೆ 2 ಗಂಟೆಗಳ ಯಕ್ಷ ಪ್ರದರ್ಶನ ನಡೆಯಲಿದೆ. ಆಯ್ದ ಭಾಗಗಳನ್ನು ಮುಖ್ಯವಾಗಿಟ್ಟುಕೊಂಡು ನಡೆಯುವ ಈ ಪ್ರದರ್ಶನಕ್ಕಾಗಿ 10 ಮಂದಿ ಕಲಾವಿದರು ಬೇಕಾಗಿದ್ದು, ಭಾರತದಿಂದ 8 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಉಳಿದಂತೆ ಇಬ್ಬರು ಅನಿವಾಸಿ ಭಾರತೀಯರು ನೆರವಾಗಲಿದ್ದಾರೆ. ಈ ಪೈಕಿ ಚಂದ್ರಶೇಖರ ಧರ್ಮಸ್ಥಳ ಅವರು ಬೆಳ್ತಂಗಡಿ ತಾಲೂಕಿನ ಏಕೈಕ ಕಲಾವಿದರಾಗಿ ತಾಲೂಕಿನ ಕೀರ್ತಿ ಎತ್ತಿಹಿಡಿದಿದ್ದಾರೆ.
ಈ ಕಾರ್ಯಕ್ರಮದ ಹಿಮ್ಮೇಳದಲ್ಲಿ ಯಕ್ಷಕಲಾ ಕ್ಷೇತ್ರದ ಅಗ್ರಮಾನ್ಯ ಹೆಸರು ಸತೀಶ್ ಶೆಟ್ಟಿ ಪಟ್ಲ, ಪ್ರಮುಖರಾದ ಪದ್ಮನಾಭ ಉಪಾಧ್ಯಾಯ, ಜಯರಾಮ ಭಟ್ ಪದ್ಯಾಣ, ಮುಮ್ಮೇಳದಲ್ಲಿ ಪ್ರಸಿದ್ಧರಾದ ಎಂ.ಎಲ್ ಸಾಮಗ, ಮೋಹನ್ ಬೆಳ್ಳಿಪ್ಪಾಡಿ, ಮಹೇಶ್ ಮಣಿಯಾಣಿ, ಪ್ರಶಾಂತ್ ಶೆಟ್ಟಿ ಭಾಗವಹಿಸಲಿದ್ದಾರೆ. ಇವರ ಈ ಪಯಣದ ಮಧ್ಯೆ ಸೆ. 1 ರಂದು ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಭಾಗವಹಿಸ ಲಿರುವ ವಿಶ್ವ ಕನ್ನಡ ಸಮ್ಮೇಳನದಲ್ಲೂ ಕೂಡ ಈ ತಂಡದಿಂದ ಒಂದು ಪ್ರದರ್ಶನ
ಜೋಡಿಸಲ್ಪಟ್ಟಿದೆ.
12 ವರ್ಷಗಳಿಂದ ಧರ್ಮಸ್ಥಳ ಮೇಳದಲ್ಲಿ ಸೇವೆ:
ಬಪ್ಪನಾಡು ಮೇಳ, ಕರ್ನಾಟಕ, ಎಡನೀರು, ಪುತ್ತೂರು, ಸಾಲಿಗ್ರಾಮ ಮೇಳಗಳಲ್ಲಿ ಸೇರಿ ಒಟ್ಟು 29 ವರ್ಷಗಳ ಯಕ್ಷ ಕ್ಷೇತ್ರದ ಸೇವೆಯಲ್ಲಿರುವ ಚಂದ್ರಶೇಖರ್ ಅವರು ಪ್ರಸ್ತುತ ಕಳೆದ 12 ವರ್ಷಗಳಿಂದ ಧರ್ಮಸ್ಥಳ ಮೇಳದ ಪ್ರಮುಖ ಕಲಾವಿದರಲ್ಲಿ ಓರ್ವರಾಗಿ ಗುರುತಿಸಿಕೊಂಡಿದ್ದಾರೆ.
ಅಪೂರ್ವ ಕಲಾವಿದ ಚಂದ್ರಶೇಖರ್ ಅವರ ಕಲಾಸೇವೆಯನ್ನು ಗುರುತಿಸಿ ಈಗಾಗಲೇ ಅವರಿಗೆ ಪೇಜಾವರ ಶ್ರೀ ರಾಮವಿಠಲ ಪ್ರಶಸ್ತಿ, ಸೇರಿದಂತೆ ದೇಶ ವಿದೇಶಗಳ ಅನೇಕ ಕಾರ್ಯಕ್ರಮಗಳಲ್ಲಿ ಸನ್ಮಾನ ಗೌರವ ಲಭಿಸಿದೆ.
ಕನ್ನಡ- ಹಿಂದಿ ಭಾಷಾ ಯಕ್ಷ ಕಲಾವಿದ:
ಈಗಾಗಲೇ ಚಂದ್ರಶೇಖರ್ ಅವರು ಕನ್ನಡ ಭಾಷೆ ಮಾತ್ರವಲ್ಲದೆ ಹಿಂದಿ ಭಾಷೆಯಲ್ಲೂ ಯಕ್ಷಗಾನ ಪಾತ್ರಗಳಿಗೆ ಜೀವತುಂಬಿದ್ದಾರೆ. ವಿದೇಶ ರಾಷ್ಟ್ರಗಳಲ್ಲೂ ಮಾತ್ರವಲ್ಲದೆ ವಿಶೇಷವಾಗಿ ಹಿಂದಿ ಭಾಷಾ ಪ್ರಾಂತ್ಯಗಳಾದ ಉತ್ತರ ಭಾರತದ ಹರಿದ್ವಾರ, ಕಾಶಿ, ಅಯೋಧ್ಯೆ, ಜಮ್ಮು -ಕಾಶ್ಮೀರ, ಚಂಡೀಘಡ, ನವದೆಹಲಿ ಇಲ್ಲೂ ಕೂಡ ಅವರು ಪಾತ್ರ ನಿರ್ವಹಿಸಿ ಅಭಿಮಾನಿಗಳನ್ನು ಹೊಂದಿದ್ದಾರೆ.
ಕೌಟುಂಬಿಕ ಹಿನ್ನೆಲೆ ಇಲ್ಲದೆ ಅನಿರೀಕ್ಷಿತವಾಗಿ ಯಕ್ಷ ಕ್ಷೇತ್ರಕ್ಕೆ ಬಂದ ಚಂದ್ರಶೇಖರ್:
ಡಾ| ಕೋಳ್ಯೂರು ರಾಮಚಂದ್ರ ರಾವ್, ವರ್ಕಾಡಿ ತಾರನಾಥ ಬಲ್ಯಾಯ ಇವರಿಂದ ಯಕ್ಷಗಾನ ಕಲೆ ಅಭ್ಯಸಿಸಿಕೊಂಡಿರುವ ಚಂದ್ರಶೇಖರ್ ಅವರು ಇದೀಗ ಸ್ವತಃ ಗುರುಗಳೇ ಹೆಮ್ಮೆ ಪಡುವ ರೀತಿಯಲ್ಲಿ ಯಕ್ಷಪಯಣ ಮುಂದುವರಿಸುತ್ತಿದ್ದಾರೆ. ಶಾಲೆ ಬಿಟ್ಟ ಮೇಲೆ ಹೊಟೇಲ್ ಕೆಲಸಕ್ಕೆ ಸೇರಿದ್ದ ಅವರು ಯಕ್ಷಗಾನದ ಬಗ್ಗೆ ಯಾವುದೇ ಕೌಟುಂಬಿಕ ಹಿನ್ನೆಲೆ ಇಲ್ಲದಿದ್ದರೂ ಅನಿರೀಕ್ಷಿತವಾಗಿ ಇತ್ತ ಆಕರ್ಷಿತರಾಗಿ ಈ ಕ್ಷೇತ್ರಕ್ಕೆ ಪಾದರ್ಪಣೆಗೈದಿದ್ದಾರೆ. ಇಂದು ಇವರು ಏರಿದ ಎತ್ತರ ಅಪೂರ್ವವಾದುದು. ಈಗಾಗಲೇ ಅಮೆರಿಕ, ಲಂಡನ್, ದುಬಾಯಿ 2 ಬಾರಿ, ಮಸ್ಕತ್ 2ಬಾರಿ, ಬೆಹರೇನ್ ಒಂದು ಬಾರಿ, ಹೀಗೆ ಒಟ್ಟು 5 ದೇಶಗಳಲ್ಲಿ ಚಂದ್ರಶೇಖರ್ ತನ್ನ ಯಕ್ಷ ಹೆಜ್ಜೆ ಇರಿಸಿದ್ದಾರೆ.
ಸ್ತ್ರೀ ವೇಶಕ್ಕೂ ಸೈ, ಬಣ್ಣದ ವೇಶಕ್ಕೂ ಜೈ:
ಬಹುತೇಕ ಪುಂಡುವೇಷಗಳಲ್ಲಿ ಅಪೂರ್ವ ಪಾತ್ರ ವಹಿಸುತ್ತಿರುವ ಅವರು ಅಭಿಮನ್ಯು, ಬಬ್ರುವಾಹನ, ಕೃಷ್ಣ, ವಿಷ್ಣು, ಅಶ್ವಥಾಮ, ಹಿರಣ್ಯಾಕ್ಷ, ಶಿಶುಪಾಲ ಹೀಗೆ ಪ್ರಮುಖ ಪಾತ್ರಗಳಲ್ಲಿ ಮನೋಜ್ಞವಾಗಿ ನಟಿಸುತ್ತಾರೆ. ಜೊತೆಗೆ ಪುರಾಣದ ಎಲ್ಲಾ ಸ್ತ್ರೀ ಪಾತ್ರಗಳಲ್ಲೂ ಅವರು ಸೈ ಎನಿಸುವಂತೆ ಬಣ್ಣ ಹಚ್ಚಿದ್ದಾರೆ. ಅಷ್ಟು ಮಾತ್ರವಲ್ಲದೆ ಮಹಿಷಾಸುರನಂತಹ ಬಣ್ಣದ ವೇಷದಲ್ಲೂ ಅಪೂರ್ವವಾಗಿ ಅವರು ನಟಿಸಿ ಎಲ್ಲರ ಬಹುಮೆಚ್ಚುಗೆಗೆ ಪಾತ್ರರಾಗಿರುವ ಕಲಾವಿದ.

ಅಚ್ಚು ಮುಂಡಾಜೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.