ಉದ್ಯೋಗ ಖಾತ್ರಿ ಯೋಜನೆಯ ಅಸರ್ಮಕ ಕಾಮಗಾರಿ

ಲಾಯಿಲ: ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ನಡೆಸಲಾದ ಕಾಮಗಾರಿ ಸಮರ್ಪಕವಾಗಿಲ್ಲ ಇದರ ಬಗ್ಗೆ ಸಮಗ್ರ ತನಿಖೆ ನಡೆಸಿ, ಸದ್ರಿ ಕಾಮಗಾರಿಯನ್ನು ಸರಿಪಡಿಸಬೇಕು ಹಾಗೂ ಗುತ್ತಿಗೆದಾರರ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿ ತಾ.ಪಂ ಕಾರ್ಯರ್ವಹಣಾಧಿಕಾರಿ ಮತ್ತು ಗ್ರಾ.ಪಂ ಪಿಡಿಒ ರವರಿಗೆ ಡಿ.ಎಸ್.ಎಸ್ (ಅಂಬೇಡ್ಕರ್ ವಾದ) ತಾಲೂಕು ಸಂಘಟನಾ ಸಂಚಾಲಕ ನಾಗರಾಜ್ ಎಸ್ ಲಾಯಿಲ ದೂರು ನೀಡಿ ಆಗ್ರಹಿಸಿದ್ದಾರೆ.
ಲಾಯಿಲ ಗ್ರಾಮದ ಕಕ್ಕೇನದಿಂದ ಅಂಬೇಡ್ಕರ್ ನಗರ ಪ.ಜಾ ಕಾಲೋನಿಗೆ ಹಾದು ಹೋಗುವ ರಸ್ತೆಗೆ ಇತ್ತೀಚೆಗೆ ಕಾಂಕ್ರೀಟ್ ರಸ್ತೆ ಮತ್ತು ತಡೆಗೋಡೆ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ನಡೆಸಲಾಗಿದ್ದು, ಇದೀಗ ತಡೆಗೋಡೆಗೆ ಕಟ್ಟಲಾದ ಕಲ್ಲುಗಳಿಗೆ ಸಮರ್ಪಕವಾಗಿ ಸಿಮೆಂಟ್ ಬಳಸದೆ ಮಳೆಯ ನೀರಿಗೆ ಕರಗಿ, ತಡೆಗೋಡೆ ಹಾಗೂ ಕಾಂಕ್ರೀಟ್ ರಸ್ತೆ ಕುಸಿದು ಬೀಳುವ ಹಂತದಲ್ಲಿದ್ದು ಈ ರಸ್ತೆಯಲ್ಲಿ ಶಾಲಾ ಮಕ್ಕಳು,ಜನಸಾಮಾನ್ಯರು, ವಾಹನಗಳು ಒಡಾಡುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಅನಾಹುತ ನಡೆಯುವ ಸಂಭವವಿದೆ. ಸದ್ರಿ ಕಾಮಗಾರಿ ತೀರ ಕಳಪೆ ಗುಣಮಟ್ಟ ಆಗಿರುವುದರಿಂದ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಗುತ್ತಿಗೆದಾರರಾದ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಮರು ಕಾಮಗಾರಿಯನ್ನು ಮಾಡಿಸುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.
ತಾ.ಪಂ ಕಾರ್ಯನಿರ್ವಹಣಾಧಿಕಾರಿ ಕೆ.ಇ ಜಯರಾಂ ರವರು ಸದ್ರಿ ಕಾಮಗಾರಿಯನ್ನು ಸರಿಪಡಿಸಿ ತಪ್ಪಿತಸ್ಥರ ವಿರುದ್ದ ಶಿಸ್ತು ಕ್ರಮ ಜರಗಿಸಲು ಆದೇಶಿಸಿರುತ್ತಾರೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.