ಮಚ್ಚಿನ: ವನಮಹೋತ್ಸವ, ಹಣ್ಣಿನ ಸಸಿ ವಿತರಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮಚ್ಚಿನ: ಇಲ್ಲಿಯ ಸರೋಳಿ ಶ್ರೀ ಕುಕ್ಕೆ ಲಿಂಗ ಮಲೆಕುಡಿಯರ ಸಂಘ ಹಾಗೂ ಬೆಳ್ತಂಗಡಿ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ವನಮಹೋತ್ಸವ ಮತ್ತು ಮಕ್ಕಳಿಗೆ ಹಣ್ಣಿನ ಸಸಿ ವಿತರಣೆ ಕಾರ್ಯಕ್ರಮ ಜೂ.30 ರಂದು ಸಂಘದ ವಠಾರದಲ್ಲಿ ನಡೆಯಿತು.


ಸರೋಳಿ ಶ್ರೀ ಕುಕ್ಕೆಲಿಂಗ ಮಲೆಕುಡಿಯರ ಸಂಘದ ಅಧ್ಯಕ್ಷ ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಲೆಕುಡಿಯ  ಸಮುದಾಯದ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ, ಪೆನ್ನು ವಿತರಿಸಲಾಯಿತು. ಈ ಭಾಗದ ಮಲೆಕುಡಿಯ ಸದಸ್ಯರು ಸಂಘದಲ್ಲಿ ಸಕ್ರಿವಾಗಿ ಭಾಗವಹಿಸುವ ಮೂಲಕ ಸಮಾಜದ ಮುಖ್ಯ ವಾಹಿನಿಯಲ್ಲಿ ತೊಡಗಿಸಿ ಕೊಳ್ಳುವಂತಾಗಬೇಕು ಎಂದು ಸುರೇಶ್ ಈ ಸಂದರ್ಭದಲ್ಲಿ ತಿಳಿಸಿದರು.

ಗೇರುಕಟ್ಟೆ ಶಾಖೆ ಉಪ ವಲಯ ಅರಣ್ಯ ಅಧಿಕಾರಿ ಹರಿಪ್ರಸಾದ್ ಮಾತನಾಡಿ, ಸ್ವಂತ ಜಮೀನಿನಲ್ಲಿ ನೀರು ಇಂಗಿಸುವಿಕೆ ವಿಧಾನ, ಹಣ್ಣಿನ ಗಿಡಗಳನ್ನು ಬೆಳೆಸಿ ಉತ್ತಮ ಅರೋಗ್ಯ ಜೀವನ ನಮ್ಮದಾಗ ಬೇಕು ಹಾಗೂ ಅರಣ್ಯ ಇಲಾಖೆ ವತಿಯಿಂದ ಸಿಗುವ ವಿವಿಧ ಬಗ್ಗೆಯ ಸವಲತ್ತುಗಳನ್ನು ಪಡೆಯವ ಬಗ್ಗೆ ಮಾಹಿತಿ ನೀಡಿದರು. ತಾಲೂಕು ಮಲೆಕುಡಿಯ ಸಂಘದ ಅಧ್ಯಕ್ಷ ನೋಣಯ್ಯ ಎಂ.ಕೆ ,ಮಚ್ಚಿನ ಹಿ.ಪ್ರಾ.ಶಾಲಾ ಎಸ್.ಡಿ.ಎಮ್.ಸಿ. ಅಧ್ಯಕ್ಷ ಪರಮೇಶ್ವರ ,ಸಂಘದ ಪದಾಧಿಕಾರಿಗಳು ಮಕ್ಕಳು ಪೋಷಕಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಪುಷ್ಪ ಕಾರ್ಯಕ್ರಮ ನಿರೂಪಿಸಿ, ಧನ್ಯವಾದವಿತ್ತರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.