ಎಳನೀರು: ಫಲಾನುಭವಿಗಳಿಗೆ ಉಜ್ವಲ ಗ್ಯಾಸ್ ವಿತರಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಎಳನೀರಿನ ಅಭಿವೃದ್ಧಿಗೆ ಪ್ರಥಮ ಆದ್ಯತೆ : ಹರೀಶ್ ಪೂಂಜ

ಬೆಳ್ತಂಗಡಿ : ರಾಜಕೀಯ ಹಿತಾಸಕ್ತಿಯನ್ನು ಬದಿಗೊತ್ತಿ ಸಾಮಾಜಿಕ ಕಳಕಳಿಯಿಂದ ಈ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು. ಅವರು ಎಳನೀರು ಅಂಗನವಾಡಿ ಕೇಂದ್ರದಲ್ಲಿ  ಫಲಾನುಭವಿಗಳಿಗೆ ಉಜ್ವಲ ಯೋಜನೆಯ ಗ್ಯಾಸ್ ವಿತರಿಸಿ ಜನರನ್ನು ಉದ್ದೇಶಿಸಿ ಮಾತನಾಡಿದರು.

ಅತಿ ಹೆಚ್ಚು ಅನುದಾನ ನೀಡಲಾಗಿದೆ
ಎಳನೀರು ಪಂಚಾಯತ್ ಕ್ಷೇತ್ರಕ್ಕೆ ಒಳಪಟ್ಟ ಬಡಮನೆ ರಸ್ತೆ, ಗುತ್ಯಡ್ಕ ಶಾಲೆ ರಸ್ತೆ , ಕುರೆಕಲ್ ರಸ್ತೆ , ಬಂಗಾರಪಲ್ಕೆ , ಎಳನೀರು ರಸ್ತೆಗಳನ್ನು ಜನರ ಜೊತೆಯಲ್ಲಿ ಜೀಪ್ ನಲ್ಲಿ ಸಾಗಿ ವೀಕ್ಷಿಸಿದ ಶಾಸಕರು 2019-20 ನೆ ಸಾಲಿನಲ್ಲಿ 30 ಲಕ್ಷ ರೂಪಾಯಿಗಳನ್ನು ರಸ್ತೆ ಕಾಂಕ್ರೀಟಿಕರಣಕ್ಕೆ ಒದಗಿಸಲಾಗುವುದು. ಇಲ್ಲಿಯ ತನಕ ಒಟ್ಟು 11 ಲಕ್ಷ ರೂಪಾಯಿಗಳನ್ನು ಈ ಭಾಗದ ಅಭಿವೃದ್ಧಿಗೆ ನೀಡಲಾಗಿದೆ. ಮಾಧ್ಯಮಗಳು ಈ ಭಾಗದ ಸಮಸ್ಯೆಯನ್ನು ನಮ್ಮಂತಹ ಜನಪ್ರತಿನಿಧಿಗಳ ಗಮನಕ್ಕೆ ತಂದಿರುವುದು ಶ್ಲಾಘನೀಯ ಎಂದರು. ಬಂಗಾರ ಪಲ್ಕೆ ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ ಅನುದಾನ ಒದಗಿಸಲು ಪ್ರಯತ್ನಿಸುತ್ತೇನೆ ಎಂದರು.

ಗುತ್ಯಡ್ಕ ಶಾಲೆಗೆ ಭೇಟಿ
ಗುತ್ಯಡ್ಕ ಶಾಲೆ ಮತ್ತು ಅಂಗನವಾಡಿಗೆ ಭೇಟಿ ನೀಡಿದ ಶಾಸಕರು ಶಾಲಾ ಶಿಕ್ಷಕರ ಜೊತೆ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಭಾ.ಜ.ಪ ಗ್ರಾಮ ಸಮಿತಿಯವರು ಶಾಸಕರಿಗೆ ನೀಡಿದ ಪುಸ್ತಕಗಳನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರ ಕೈಗಿತ್ತು ಮಕ್ಕಳಿಗೆ ನೀಡಲು ಸೂಚಿಸಿದರು
ಗ್ರಾಮ ಪಂಚಾಯತ್ ಸದಸ್ಯರಾದ ಪ್ರಕಾಶ್ ಕುಮಾರ್ ಜೈನ್ ಮಾತನಾಡಿ, ಶಾಸಕರೊಬ್ಬರು ವರ್ಷದಲ್ಲಿ ಎರಡು ಸಲ ಇಂತಹ ಕುಗ್ರಾಮಕ್ಕೆ ಭೇಟಿ ನೀಡಿರುವುದು ಇದೆ ಮೊದಲು. ಶಾಸಕರು ತನ್ನ ಒಂದು ದಿನದ ಮಗುವನ್ನು ಬಿಟ್ಟು ರಾತ್ರಿ 9 ಗಂಟೆಯ ವರೆಗೆ  ನಮ್ಮ ಜೊತೆಯಲ್ಲಿ ಇರುವುದು ನಮ್ಮ ಭಾಗ್ಯ ಎಂದರು. ಎಳನೀರಿಗೆ ಮೊಬೈಲ್ ಟವರ್ , ವಿದ್ಯುತ್ ಸಂಪರ್ಕ ಆಗಬೇಕು, ರಸ್ತೆ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಬೇಕು ಎಂದು ಆಗ್ರಹಿಸಿದರು. ಭಾ.ಜ.ಪ ಮಂಡಲದ ಪ್ರಧಾನ ಕಾರ್ಯದರ್ಶಿ ಸೀತಾರಾಮ ಬೆಳಾಲ್ , ಯುವ ಮೋರ್ಚಾದ ಕಾರ್ಯದರ್ಶಿ ರಕ್ಷಿತ್ ಕಣಿಯೂರು , ವಿಜಯ್ ಬಡಮನೆ , ಹರೀಶ್ ಎಳನೀರ್ ಮೊದಲಾದವರು ಉಪಸ್ಥಿತರಿದ್ದರು.

ಪ್ರಕಾಶ್ ಜೈನ್ ಸ್ವಾಗತಿಸಿ, ರತ್ನಾಕರ್ ನಿರೂಪಿಸಿ ಧನ್ಯವಾದವಿತ್ತರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.