ಕಳೆಂಜ: ಮೊಬೈಲ್ ಟವರ್, ಹೈಮಾಸ್ಟ್ ದೀಪ ಉದ್ಘಾಟನೆ

ಕಳೆಂಜ : ಇಲ್ಲಿಯ ಶಿಬರಾಜೆ ಎಂಬಲ್ಲಿ ತಾ.ಪಂ.ಅನುದಾನದಿಂದ ನಿರ್ಮಾಣಗೊಂಡ ಹೈಮಾಸ್ಟ್ ದೀಪ ಹಾಗೂ ಕಾಯಡ ಎಂಬಲ್ಲಿ ನಿರ್ಮಾಣಗೊಂಡ ಏರ್ಟೆಲ್ ಟವರನ್ನು ಶಾಸಕ ಹರೀಶ್ ಪೂಂಜ ದೀಪ ಪ್ರಜ್ವಲಿಸಿ, ಉದ್ಘಾಟಿಸಿದರು.
ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಳೆಂಜ ಗ್ರಾಮದ ಶಾಲೆತ್ತಡ್ಕ, ಶಿಬರಾಜೆ, ಕಜೆತ್ತಕೋಡಿ, ಕಾಂತ್ರೇಲು ಜನತೆಯ ಬಹು ವರ್ಷದ ಬೇಡಿಕೆ ಇಂದು ನೇರವೇರಿದೆ. ಜನರು ಟವರ್ ನಿರ್ಮಾಣಕ್ಕೆ ಹೇಗೆ ಪರಿಶ್ರಮಪಟ್ಟಿರೋ ಹಾಗೆಯೇ ಮಳೆಗಾಲದಲ್ಲಿ ಮಳೆನೀರನ್ನು ಇಂಗಿಸುವ ಮೂಲಕ ನೀರಿನ ಸಂರಕ್ಷಣೆ ಮಾಡಬೇಕೆಂದು ತಿಳಿಸಿದರು.
ಏರ್ಟೆಲ್ ಏರಿಯಾ ಮ್ಯಾನೇಜರ್ ಕಿರಣ್ ಶೆಟ್ಟಿ ಮಾತನಾಡಿ, ಬೆಳ್ತಂಗಡಿ ಇತಿಹಾಸದಲ್ಲೇ ಮೊದಲ ಬಾರಿಗೆ ಕೇವಲ 40ದಿನಗಳಲ್ಲಿ ಟವರ್ ನಿರ್ಮಾಣವಾಗಿ ಉದ್ಘಾಟನೆಗೊಂಡಿದೆ. ಇದಕ್ಕೆ ಪೂರ್ಣ ಸಹಕಾರ ನೀಡಿದ ಶಾಸಕರನ್ನು ಪ್ರಶಂಶಿಸುತ್ತಾ ಜೊತೆಗೆ ಊರಿನ ಜನರ ನೆರವನ್ನು ಸ್ಮರಿಸುತ್ತಾ ಸಾಧ್ಯವಾದಷ್ಟು ಬೆಳ್ತಂಗಡಿಯಲ್ಲಿ ನೇಟ್ವರ್ಕ್ ಸಮಸ್ಯೆಯನ್ನು ಹೋಗಲಾಡಿಸುವ ಪ್ರಯತ್ನ ಮಾಡುತ್ತೇವೆ ಎಂದರು.
ವೇದಿಕೆಯಲ್ಲಿ ಜಿ.ಪಂ ಸದಸ್ಯ ಕೊರಗಪ್ಪ ನಾಯ್ಕ, ತಾ.ಪಂ ಸದಸ್ಯೆ ಸುಶೀಲಾ, ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಶಾರದ , ಮಂಡಲ ಗ್ರಾಮ ಸಮಿತಿ ಅಧ್ಯಕ್ಷರು ಪಂಚಾಯತ್ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರು ಶ್ರೀ ಸದಾಶಿವ ದೇವಸ್ಥಾನ ಕಳೆಂಜ ಅಧ್ಯಕ ಅರವಿಂದ ಕುಡ್ವ ಉಪಸ್ಥಿತರಿದ್ದರು.
ಗಂಗಾಧರ ಭಂಡಾರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅಶೋಕ್ ಭಟ್ ಪ್ರಾಸ್ತಾವಿಕ ಭಾಷಣ ಮಾಡಿದರು. ರಮೇಶ್‌ರಾವ್ ಧನ್ಯವಾದವಿತ್ತರು.

ಈ ಸಂದರ್ಭದಲ್ಲಿ ಟವರ್ ನಿರ್ಮಾಣವಾಗಲು ಮಹತ್ತರ ಪಾತ್ರವಹಿಸಿದ ಶಾಸಕರಿಗೆ, ಏರ್ಟೆಲ್ ಏರಿಯಾ ಮ್ಯಾನೇಜರ್ ಕಿರಣ್ ಶೆಟ್ಟಿ ಹಾಗೂ ಟವರ್ ನಿರ್ಮಿಸಲು ಸ್ಥಳದಾನ ಮಾಡಿದ ರಮೇಶ್ ರಾವ್ ಕಾಯಡ ಇವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು ಮತ್ತು ಕಳೆಂಜದಲ್ಲಿ ಟವರ್ ತ್ವರಿತವಾಗಿ ನಿರ್ಮಾಣವಾಗಲು ಶ್ರಮಿಸಿದ ಗಣೇಶ್ ಕುಂದರ್ ಅವರನ್ನು ಕಿರುಕಾಣಿಕೆ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಶಾಲೆತ್ತಡ್ಕ ಸರಕಾರಿ ಶಾಲೆಗೆ ಭೇಟಿ ನೀಡಿದ ಶಾಸಕರು ಅಲ್ಲಿನ ಮಕ್ಕಳ ಜೊತೆ ಸಂವಾದ ನಡೆಸಿದರು. ಶಾಲೆಯ ಆಡಳಿತ ಮಂಡಳಿಯಿಂದ ಶಾಸಕರನ್ನು ಸನ್ಮಾನಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.