ಬೆನ್ನುಮೂಳೆ ಮುರಿತಕ್ಕೊಳಗಾದವರಿಗೆ 3 ದಿನಗಳ ಉಚಿತ ವೈದ್ಯಕೀಯ ತಪಾಸಣಾ ಶಿಬಿರ

ಬೆಳ್ತಂಗಡಿ:ಸೇವಾಭಾರತಿ ಬೆಳ್ತಂಗಡಿ ಹಾಗೂ ಸೇವಾಧಾಮ ನೇತೃತ್ವದಲ್ಲಿ ಆಳ್ವಾಸ್ ಹೆಲ್ತ್‌ಸೆಂಟರ್ ಸಹಕಾರದೊಂದಿಗೆ, ಎಂಸಿಎಸ್ ಬ್ಯಾಂಕ್ ಮೂಡಬಿದ್ರೆ, ಎಪಿಡಿ ಸಂಸ್ಥೆ ಬೆಂಗಳೂರು, ಮಾತೃಭೂಮಿ ಸಹಕಾರ ಸಂಘ ಮಂಗಳೂರು ಇವುಗಳ ಸಹಭಾಗಿತ್ವದಲ್ಲಿ ಬೆನ್ನುಮೂಳೆ ಮುರಿತಕ್ಕೊಳಗಾದವರಿಗೆ ಚಿಕಿತ್ಸೆ, ಸಲಹೆ ನೀಡುವ ಮೂರು ದಿನಗಳ ವೈದ್ಯಕೀಯ ತಪಾಸಣಾ ಶಿಬಿರಕ್ಕೆ ಮೂಡಬಿದ್ರೆಯ ಆಳ್ವಾಸ್ ಹೆಲ್ತ್ ಸೆಂಟರ್‌ನಲ್ಲಿ ಚಾಲನೆ ನೀಡಲಾಯಿತು.
ಆಳ್ವಾಸ್ ಹೆಲ್ತ್ ಸೆಂಟರ್‌ನ ವ್ಯವಸ್ಥಾಪಕ ನಿರ್ದೇಶಕ ಡಾ| ವಿನಯ್ ಆಳ್ವ ಉದ್ಘಾಟಿಸಿ ಮಾತನಾಡಿ, ದಿವ್ಯಾಂಗರ ಬದುಕಿಗೆ ಈ ಶಿಬಿರವು ಆಶಾಕಿರಣವಾಗಲಿ ಎಂದು ಶುಭ ಹಾರೈಸಿ, ಇಂತಹ ಶಿಬಿರಕ್ಕೆ ಮುಂದೆಯೂ ಸಹಕಾರ ನೀಡುವುದಾಗಿ ನುಡಿದರು.
ಸೇವಾಭಾರತಿ ಅಧ್ಯಕ್ಷ ಕೆ. ವಿನಾಯಕ ರಾವ್ ಅಧ್ಯಕ್ಷತೆವಹಿಸಿ ಮಾತನಾಡಿ, ಬೆನ್ನುಹುರಿ ಅಪಘಾತದ ನಂತರದ ಸಮಸ್ಯೆಗಳ ನಿರ್ವಹಣೆ ಕುರಿತು ಮಾಹಿತಿ ನೀಡಿ, ಮೂರು ದಿನಗಳ ಶಿಬಿರಕ್ಕೆ ಆಳ್ವಾಸ್ ಆಡಳಿತದ ಸಹಕಾರವನ್ನು ಶ್ಲಾಘಿಸಿದರು. ಆಳ್ವಾಸ್ ಹೆಲ್ತ್‌ಸೆಂಟರ್‌ನ ಡಾ| ಹರೀಶ್ ನಾಯಕ್, ಮೂಡಬಿದ್ರೆ ರೋಟರಿ ಕ್ಲಬ್‌ನ ನಿಯೋಜಿತ ಅಧ್ಯಕ್ಷ ರೊ|ಸಿ. ಯಚ್ ಗಫೂರ್, ಆಳ್ವಾಸ್ ಹೆಲ್ತ್ ಸೆಂಟರ್ ನ ಡಾ| ಸದಾನಂದ ನಾಯಕ್, ಮಂಗಳೂರು ಮಾತೃಭೂಮಿ ಸಹಕಾರ ಸಂಘದ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಕೊಂಪದು, ಎಂಸಿಎಸ್ ಬ್ಯಾಂಕ್ ಶಾಖಾಪ್ರಬಂಧಕ ಚಂದ್ರಶೇಖರ್, ಆಳ್ವಾಸ್ ಹೆಲ್ತ್‌ಸೆಂಟರ್‌ನ ಆಡಳಿತಅಧಿಕಾರಿ ಭಾಸ್ಕರ್, ಆಳ್ವಾಸ್ ಹೆಲ್ತ್ ಸೆಂಟರ್‌ನ ಡಾ| ಹನಾ ಶೆಟ್ಟಿ, ಬೆಂಗಳೂರಿನ ಎಪಿಡಿ ಸಂಸ್ಥೆಯ ಫಿಸಿಯೋಥೆರಪಿಸ್ಟ್ ಪಾಲಯ್ಯ ಉಪಸ್ಥಿತರಿದ್ದರು.
ಸೇವಾಧಾಮದ ಕಾರ್ಯಕ್ರಮ ಸಂಯೋಜಕಿ ಕು| ಉಷಾ ಬಿ ಸ್ವಾಗತಿಸಿ, ನಿರ್ವಹಿಸಿದರು. ಸೇವಾಧಾಮದ ಪ್ರಬಂಧಕ ಬಾಲಕೃಷ್ಣ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.