HomePage_Banner_
HomePage_Banner_

ಕಾಲಭೈರೇಶ್ವರ ಒಕ್ಕಲಿಗ ಗೌಡರ ಸಂಘದಿಂದ ಕೆಂಪೇಗೌಡ ಜಯಂತಿ ಆಚರಣೆ

ಉಜಿರೆ: ನಾಡಪ್ರಭು ಕೆಂಪೇಗೌಡರು ರಾಜ್ಯದ ಅಭಿವೃದ್ಧಿಗೆ ನೀಡಿದ ಕೊಡುಗೆ ಅನನ್ಯ ಎಂದು ತಾಲೂಕು ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಸಂಘದ ತಾಲೂಕು ಅಧ್ಯಕ್ಷ ಕೇರಿಮಾರು ಬಾಲಕೃಷ್ಣ ಗೌಡ ಹೇಳಿದರು.
ಅವರು ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಸಮುದಾಯದ ವತಿಯಿಂದ ಸಂಘದ ಉಜಿರೆ ಬ್ಯಾಂಕ್ ವಠಾರದಲ್ಲಿ ನಡೆದ ಕೆಂಪೇಗೌಡರ ಜನ್ಮದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಬೆಂಗಳೂರು ನಗರದ ಅಭಿವೃದ್ಧಿಯಲ್ಲಿ ಅವರು ರೂಪಿಸಿದ ದೂರದೃಷ್ಟಿ ಯೋಜನೆಯಿಂದಾಗಿ ಇಂದು ರಾಷ್ಟ್ರದಲ್ಲಿ ಜನಪ್ರಿಯ ನಗರಗಳಲ್ಲಿ ಒಂದಾಗಿ ಗುರುತಿಸುವಂತಾಗಿದೆ. ಇದು ನಮಗೆಲ್ಲ ಹೆಮ್ಮೆ ತರುವಂತದ್ದು ಎಂದರು.
ಈ ಸಂದರ್ಭದಲ್ಲಿ ಕೆಂಪೇಗೌಡರ ಪ್ರತಿಮೆಗೆ ಸಮುದಾಯದ ಮೂರು ಸಂಘಗಳ ಅಧ್ಯಕ್ಷರು ಮತ್ತು ಸಮಾಜ ಬಾಂಧವರು ಪುಷ್ಪಾರ್ಚನೆ ಮಾಡಿದರು.
ಕಾರ್ಯಾಧ್ಯಕ್ಷ ತುಂಗಪ್ಪ ಗೌಡ ಮರಕಡ ಕೆಂಪೇಗೌಡರ ನೂರಾರು ವರ್ಷಗಳ ಹಿಂದೆ ನಗರಗಳ ನಿರ್ಮಾಣದಲ್ಲಿ ಆಧುನಿಕ ಶೈಲಿಯ ಚಿಂತನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ರಂಜನ್ ಗೌಡ, ಕಾಲಭೈರವೇಶ್ವರ ಒಕ್ಕಲಿಗ ಗೌಡರ ಯುವ ವೇದಿಕೆಯ ಅಧ್ಯಕ್ಷ ಸುಧಾಕರ ಗೌಡ ಧರ್ಮಸ್ಥಳ, ನಿರ್ದೇಶಕರಾದ ದಾಮೋದರ್ ಗೌಡ ಸುರುಳಿ, ಜಯಂತ ಗೌಡ ಕುರ್ಕಿಲು, ಹಿರಿಯರಾದ ಇಚ್ಛಾವು ಬಾಬಣ್ಣ ಗೌಡ ಮತ್ತು ಸಮಾಜ ಭಾಂದವರು ಉಪಸ್ಥಿತರಿದ್ದರು.
ಪ್ರಕಾಶ್ ಗೌಡ ಕೆದ್ಲ ಕಾರ್ಯಕ್ರಮ ನಿರೂಪಿಸಿ, ದಿನೇಶ್ ಗೌಡ ಕಲ್ಲಾಜೆ ವಂದಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.